ಭಾರತ ಸರ್ಕಾರ-ಮೀಸಲಾತಿ
1. ಕೇಂದ್ರ ಸರ್ಕಾರವು 21-09-1947 ರಲ್ಲಿ ಒಂದು ಅಧಿಸೂಚನೆ ಹೊರಡಿಸಿ ಸರ್ಕಾರಿ ನೇಮಕಾತಿಯ ಮುಕ್ತ ಸ್ಪರ್ಧೆಯಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಶೇ.12.5 ರಷ್ಟು ಮೀಸಲಾತಿ ನೀಡುವಂತೆ ಸೂಚಿಸಿತು. ಮುಕ್ತ ಸ್ಪರ್ಧೆ ಅಲ್ಲದೆ ಇತರೆ ನೇಮಕಾತಿ ಆಗಿದ್ದಲ್ಲಿ ಈ ಪ್ರಮಾಣ ಶೇ.16.66ರಷ್ಟು ಇರಬೇಕೆಂದು ಸೂಚಿಸಿತು.
2. 25-03-1970 ರಂದು 1961 ರ ಜನಗಣತಿಯ ಜನಸಂಖ್ಯೆಗೆ ಅನುಗುಣವಾಗಿ ಪ.ಜಾ.ಯ ಮೀಸಲಾತಿ ಪ್ರಮಾಣವನ್ನು ಶೇ. 12.5 ರಿಂದ ಶೇ.15ಕ್ಕೆ ಮತ್ತು ಪ.ಪಂ.ದ ಮೀಸಲಾತಿಯನ್ನು ಶೇ.5 ರಿಂದ ಶೇ.7.5ಕ್ಕೆ ಪರಿಷ್ಕರಿಸಲಾಯಿತು.
3. 13.08.1990 ರ ಆದೇಶದಂತೆ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿಯನ್ನು ನೀಡಬೇಕೆಂದು ತಿಳಿಯಪಡಿಸಿದೆ.
4. 2018ರಲ್ಲಿ ಸಂವಿಧಾನಕ್ಕೆ 103ನೇ ತಿದ್ದುಪಡಿ ತರುವುದರ ಮುಖಾಂತರ ಅನುಚ್ಛೇದ 15(6) ಮತ್ತು ಅನುಚ್ಛೇದ 16(6) ಸೇರಿಸಿ ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಒದಗಿಸಲಾಗಿದೆ. ಈಗಾಗಲೇ ಮೀಸಲಾತಿಯ ಸವಲತ್ತನ್ನು ಪಡೆಯುತ್ತಿರುವ ಯಾವ ಜಾತಿಯೂ ಈ ಮೀಸಲಾತಿಗೆ ಅರ್ಹವಲ್ಲವೆಂದು ತಿಳಿಯಪಡಿಸಿದೆ.
ಪರಿಶಿಷ್ಟ ಪಂಗಡ – 7.5%
ಪರಿಶಿಷ್ಟ ಜಾತಿ – 15%
ಹಿಂದುಳಿದ ವರ್ಗ – 27%
ಸಾಮಾನ್ಯ ವರ್ಗದ ಬಡವರು – 10%
ಸಾಮಾನ್ಯ ವರ್ಗ – 40.5%
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮೀಸಲಾತಿ
1. ಕರ್ನಾಟಕ ರಾಜ್ಯ ಸರ್ಕಾರವು ಸಂವಿಧಾನದ 103ನೇ ತಿದ್ದುಪಡಿಯನ್ನು ಜಾರಿಗೆ ತರುವುದಾಗಿ ಪ್ರಕಟಿಸಿದೆ. ಇದರಂತೆ ಸಾಮಾನ್ಯ ವರ್ಗದಲ್ಲಿನ ಆರ್ಥಿಕವಾಗಿ ಹಿಂದುಳಿದವರು ಶೇ.10ರಷ್ಟು ಮೀಸಲಾತಿಯನ್ನು ಅನುಭವಿಸಲಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗ – 10%
ಹಿಂದುಳಿದ ವರ್ಗ – 32%
ಪರಿಶಿಷ್ಟ ಜಾತಿ – 15%
ಪರಿಶಿಷ್ಟ ಪಂಗಡ – 3%
ಸಾಮಾನ್ಯ ವರ್ಗ – 40%
ಮೀಸಲಾತಿಗೆ ಲಭ್ಯವಿರುವ ಸರ್ಕಾರಿ ಉದ್ಯೋಗಗಳು
ಒಟ್ಟು ಉದ್ಯೋಗಗಳಲ್ಲಿ ಮೀಸಲಾತಿಗೆ ಲಭ್ಯವಿರುವ ಉದ್ಯೋಗಗಳ ಪ್ರಮಾಣ ಅತ್ಯಂತ ಕಡಿಮೆ.
ತಯಾರಿಕೆ ಕ್ಷೇತ್ರ-11%
ನಿರ್ಮಾಣ-11%
ವ್ಯಾಪಾರ-9%
ಸಾರಿಗೆ-4%
ಆತಿಥ್ಯ ಮತ್ತು ರಿಯಲ್ ಎಸ್ಟೇಟ್-3%
ಶಿಕ್ಷಣ-2%
ಸರ್ಕಾರ-2%
ಕೃಷಿ-53%
ಮೀಸಲಾತಿಯ ಸಾಧನೆಗಳು – ಶೈಕ್ಷಣಿಕ ಪ್ರಗತಿ
ಸಾಕ್ಷರತೆ ಪ್ರಮಾಣ ಶೇ.20ಕ್ಕಿಂತ ಕಡಿಮೆ ಇದ್ದಿದ್ದು ಇಂದು ಸರಾಸರಿ ಶೇ.70ಕ್ಕೆ ಹೆಚ್ಚಿದೆ.
ಸರ್ಕಾರಿ ಉದ್ಯೋಗದಲ್ಲಿ ಸಾಧನೆ
ರಾಜ್ಯದ ಗ್ರೂಪ್ ಎ, ಬಿ, ಸಿ ಮತ್ತು ಡಿ ಶ್ರೇಣಿಯ ಹುದ್ದೆಗಳಲ್ಲಿ ಈ ಸಮುದಾಯಗಳು ಪ್ರಾತಿನಿಧ್ಯವನ್ನು ಪಡೆದುಕೊಂಡಿವೆ.
ಮೀಸಲಾತಿ ವಂಚಿತರು
ಈ ವರ್ಗಗಳು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸ್ವಲ್ಪಮಟ್ಟಿಗೆ ಸಬಲೀಕರಣಗೊಂಡಿವೆ. ಆದರೆ ಈ ವರ್ಗದ ಮಹಿಳೆಯರು, ಆದಿವಾಸಿಗಳು, ಅಲೆಮಾರಿಗಳು, ಅರೆ ಅಲೆಮಾರಿಗಳು, ದೇವದಾಸಿಯರು, ಸಫಾಯಿ ಕರ್ಮಚಾರಿಗಳು, ಕೊಳಚೆ ಪ್ರದೇಶದ ನಿವಾಸಿಗಳು ಇತ್ಯಾದಿ ಸಣ್ಣ ಮತ್ತು ಅತಿಸಣ್ಣ ಜಾತಿಗಳ ಪರಿಸ್ಥಿತಿ ಗಂಭೀರವಾಗಿದೆ ಮತ್ತು ಇವರ ಜೀವನ ಇನ್ನೂ ಹೀನಾಯವಾಗಿದೆ. ಇವರ ಮತ್ತು ಇವರ ಮಕ್ಕಳ ಶೈಕ್ಷಣಿಕ ಮಟ್ಟ ಬಹಳ ಕಡಿಮೆ ಇದೆ. ತತ್ಪರಿಣಾಮವಾಗಿ ಉನ್ನತ ಶಿಕ್ಷಣವಿಲ್ಲ ಮತ್ತು ಸರ್ಕಾರಿ ಉದ್ಯೋಗವಿಲ್ಲ. ಅಪ್ಪಿತಪ್ಪಿ ಕೆಲವರು ಉನ್ನತ ಶಿಕ್ಷಣ ಪಡೆದಿದ್ದರೂ ಸಹ ಈ ವರ್ಗದ ಬಲಿಷ್ಠರ ಜೊತೆ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ.
ಅಪ್ರಸ್ತುತವಾಗುತ್ತಿರುವ ಮೀಸಲಾತಿ
ಸರ್ಕಾರಿ ವಲಯದಲ್ಲಿ ಭರ್ತಿ ಮಾಡದೆ ಖಾಲಿಯಿರುವ ಹುದ್ದೆಗಳು ಈಗಾಗಲೇ ಹೇಳಿದಂತೆ ದೇಶದಲ್ಲಿನ ಒಟ್ಟು ಉದ್ಯೋಗಗಳಲ್ಲಿ ಶೇ.1ರಷ್ಟು ಮಾತ್ರ ಮೀಸಲಾತಿಯ ವ್ಯಾಪ್ತಿಗೆ ಬರುತ್ತವೆ. ಸರಿಸುಮಾರು 60 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಉಳಿದಿವೆ.
ಸಾರ್ವಜನಿಕ ಉದ್ದಿಮೆಗಳ ಬಂಡವಾಳ ಹಿಂತೆಗೆತ (ಡಿಸ್ಇನ್ವೆಸ್ಟ್ಮೆಂಟ್)
ನಮ್ಮ ಸರ್ಕಾರಗಳು 1991 ರಿಂದ ಉದಾರವಾದ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡ ಬಳಿಕ ಸಾರ್ವಜನಿಕ ವಲಯದ ವ್ಯಾಪ್ತಿಯನ್ನು ಸೀಮಿತಗೊಳಿಸುವುದು ಸರ್ಕಾರದ ನೀತಿಯಾಯಿತು. ಈ ನೀತಿಯನ್ನು ಮುಂದುವರೆಸಿ ಸಾರ್ವಜನಿಕ ವಲಯದಲ್ಲಿದ್ದ ಅನೇಕ ಉದ್ದಿಮೆಗಳನ್ನು ಖಾಸಗಿ ಉದ್ದಿಮೆದಾರರಿಗೆ ಮಾರಾಟ ಮಾಡಲಾಯಿತು. ಕೆಲವನ್ನು ಮುಚ್ಚಲಾಯಿತು ಮತ್ತು ಮುಚ್ಚಲಾಗುತ್ತಿದೆ.
ಗುತ್ತಿಗೆ ಮತ್ತು ಹೊರ ಗುತ್ತಿಗೆ ಕಾರ್ಮಿಕ ಪದ್ಧತಿ
ಸರ್ಕಾರಿ ಇಲಾಖೆಗಳು ಮತ್ತು ಖಾಸಗಿ ಉದ್ದಿಮೆಗಳು ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪದ್ಧತಿಯನ್ನು 1970 ರಿಂದ ಅನುಸರಿಸುತ್ತಿವೆ. ಈ ಪದ್ಧತಿಯಿಂದ ಕೈಗಾರಿಕಾ ಮಾಲೀಕರಿಗೆ ಅನೇಕ ಅನುಕೂಲಗಳಿವೆ. ಇದು ಖಾಸಗೀಕರಣಕ್ಕೆ ನಾಂದಿಯಾಗಿದೆ.
ಶೇ.10 ಮೀಸಲಾತಿ ಸಾಮಾನ್ಯ ವರ್ಗದ ಬಡವರಿಗೆ ವರದಾನವೇ?
ಸಂವಿಧಾನಕ್ಕೆ 103ನೇ ತಿದ್ದುಪಡಿಯ ಮುಖಾಂತರ 2019 ರಲ್ಲಿ ಸಾಮಾನ್ಯ ವರ್ಗದ ಬಡವರಿಗೆ ಉನ್ನತ ಶಿಕ್ಷಣದ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ಪಡೆಯಲು ಮಾನದಂಡವೆಂದರೆ ವಾರ್ಷಿಕ ವರಮಾನ ರೂ. 8 ಲಕ್ಷಕ್ಕಿಂತ ಕಡಿಮೆ ಇರಬೇಕು .ಅಥವಾ 5 ಎಕರೆಗಿಂತ ಕಡಿಮೆ ಜಮೀನು ಇರಬೇಕು ಅಥವಾ 1,000 ಚದರ ಅಡಿಗಿಂತ ಕಡಿಮೆ ಮನೆ ಇರಬೇಕು.
ಭಾರತ ದೇಶದಲ್ಲಿ ರೂ.8 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವರಮಾನವಿರುವ ಕುಟುಂಬಗಳು ಶೇ.95, 5 ಎಕರೆಗಿಂತ ಕಡಿಮೆ ಜಮೀನು ಇರುವ ಕುಟುಂಬಗಳು ಶೇ. 86 ಮತ್ತು 1,000 ಚದರ ಅಡಿಗಿಂತ ಕಡಿಮೆ ವಸತಿ ಮನೆ ಇರುವವರು ಶೇ. 80 ಕುಟುಂಬಗಳು. ಈ ಮಾನದಂಡಗಳ ಪ್ರಕಾರ ಶೇ. 90ರಷ್ಟು ಮೇಲ್ಜಾತಿಯ ಜನ ಒಳಪಡುತ್ತಾರೆ. ಪ್ರಸ್ತುತ ಶೇ.10ರಷ್ಟು ಮೀಸಲಾತಿ ಪಡೆಯಲು ಸ್ಪರ್ಧೆ ಹೆಚ್ಚುತ್ತದೆ. ಹೊರತು ನಿಜವಾದ ಬಡವರಿಗೆ ಯಾವುದೇ ರೀತಿಯಲ್ಲಿ ಅನುಕೂಲವಾಗುವುದಿಲ್ಲ.
ಅನುಚ್ಛೇದ 15, 16, 17 ಮತ್ತು 340 ರಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಶಿಕ್ಷಣದಲ್ಲಿ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದಿರುವಿಕೆ ಮೀಸಲಾತಿಯನ್ನು ನೀಡಲು ಮಾನದಂಡವಲ್ಲ. ಬದಲಾಗಿ ಮೀಸಲಾತಿ ಒಂದು ಮಾನವ ಹಕ್ಕು. ಸಮಾನತೆಯ ಸಾಧನೆ, ವಂಚಿತರಿಗೆ ಒಂದು ಪ್ರಾತಿನಿಧ್ಯ ಮತ್ತು ಎಲ್ಲಾ ರಿತಿಯ ಪಕ್ಷಪಾತ ಮತ್ತು ಬಹಿಷ್ಕಾರದ ವಿರುದ್ಧ ಸಾಧನೆ. ಶೇ.10ರಷ್ಟು ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗದವರಿಗೆ ನೀಡಿರುವುದು ಸಂವಿಧಾನ ಮತ್ತು ಅದರ ಆಶಯವಾದ ಸಾಮಾಜಿಕ ನ್ಯಾಯದ ಮೂಲ ತತ್ವಕ್ಕೆ ವಿರುದ್ದವಾದದ್ದು.
ಕೇಂದ್ರ ಸರ್ಕಾರ ಈ ಸಂಸ್ಥೆಗಳಿಗೆ ಅನುದಾನವನ್ನು ಯಾರು ನೀಡುತ್ತಾರೆ?
ಪ್ರವೇಶ ಅವಕಾಶಗಳನ್ನು ಹೆಚ್ಚಿಸಬಹುದು. ಆದರೆ ಅದರ ಪರಿಣಾಮವಾಗಿ ಹೆಚ್ಚುವರಿ ಶಿಕ್ಷಕರು, ಮೂಲಸೌಕರ್ಯಗಳು, ಗ್ರಂಥಾಲಯಗಳು ಇತ್ಯಾದಿಗಳು ಬೇಕಾಗುತ್ತವೆ. ದೇಶದಲ್ಲಿ ಇಂದು ಶೇ.26ರಷ್ಟು ಅರ್ಹ ಯುವಜನತೆ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಉಳಿದ ಶೇ.74ರಷ್ಟು ಯುವಜನತೆಗೆ ಉನ್ನತ ಶಿಕ್ಷಣ ಸಿಗುತ್ತಿಲ್ಲ.
2. 75 ವರ್ಷಗಳ ಸ್ವತಂತ್ರ ಗಣರಾಜ್ಯ ಭಾರತದಲ್ಲಿ ಮಾನವ ಹಕ್ಕುಗಳು ಸಾಕಷ್ಟು ಮಟ್ಟದಲ್ಲಿ ಜಾರಿಗೊಳಿಸಿದೆ. ಈ ಪರಿಣಾಮವಾಗಿ ದೇಶದ ಮಹಿಳೆಯರ ಮಕ್ಕಳ ವೃದ್ದರ, ವಿಕಲಚೇತನರ, ದಲಿತರ, ಅಲ್ಪಸಂಖ್ಯಾತರ, ಕಾರ್ಮಿಕರ ಜೀವನ ಮಟ್ಟದಲ್ಲಿ ಸ್ಪಲ್ಪ ಸುಧಾರಣೆ ಕಂಡಿದೆ.
ಇಷ್ಟೆಲ್ಲ ಸಾಧನೆಯ ಮಧ್ಯೆ ಇನ್ನೂ ಸಮಸ್ಯೆಗಳು ಮುಂದುವರೆಯುತ್ತಿವೆ. ಸವಾಲುಗಳು ಇವೆ. ಜಾತಿ, ಅಸಮಾನತೆ ಮುಂದುವರೆದಿದೆ. ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಸಂವಿಧಾನದ ಹಕ್ಕುಗಳಿಗೆ ಚ್ಯುತಿ ಬರುತ್ತಿದೆ. ಎಲ್ಲಾ ಕ್ಷೇತ್ರ ಖಾಸಗೀಕರಣ ಜಾರಿಯಾಗುತ್ತಿದೆ.ಇಂ ತಹ ಪರಿಸ್ಥಿತಿಯಲ್ಲಿ ಆಡಳಿತ ವರ್ಗದ ಉದ್ಯೋಗಿಗಳ ಜವಾಬ್ದಾರಿ ಹೆಚ್ಚುತ್ತಿದೆ. ಅನ್ಯಾಯ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ವಿರುದ್ಧ ಧ್ವನಿಯಾಗಬೇಕಾಗಿದೆ.
ಪ್ರತಿವರ್ಷ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ವಲಯದಲ್ಲಿ ಸುಮಾರು 7 ಲಕ್ಷ ಉದ್ಯೋಗಿಗಳು ನಿವೃತ್ತಿಯಾಗುತ್ತಾರೆ. ಖಾಲಿಯಾದ ಸ್ಥಾನಗಳ ಪೈಕಿ ಶೇ.50ರಷ್ಟು ಅಂದರೆ 3 ಲಕ್ಷ 50 ಸಾವಿರ ಉದ್ಯೋಗಗಳು ಸಾಮಾನ್ಯ ಪೈಕಿ ಶೇ.50 ರಷ್ಟು ಅಂದರೆ 3 ಲಕ್ಷ 50 ಸಾವಿರ ಉದ್ಯೋಗಗಳು ಸಾಮಾನ್ಯ ವರ್ಗದ ಪಾಲಿಗೆ ಬರುತ್ತವೆ. ಈ 3 ಲಕ್ಷ 50 ಸಾವಿರದಲ್ಲಿ ಶೇ.10 ರಷ್ಟು ಅಂದರೆ 35 ಸಾವಿರ ಉದ್ಯೋಗ ಅವಕಾಶಗಳು ಮೇಲ್ಜಾತಿಯ ಬಡವರಿಗೆ ಲಭ್ಯವಾಗುತ್ತವೆ ಮತ್ತುಇವುಗಳನ್ನು ಇಡೀ ದೇಶದ ಜನರಿಗೆ ನೀಡಲಾಗುತ್ತದೆ. ಆದರೆ ದೇಶದಲ್ಲಿ ಇಂದು ಸುಮಾರು 7 ಕೋಟಿ ನಿರುದ್ಯೋಗಿಗಳು ಇದ್ದಾರೆ. ಪ್ರತಿ ತಿಂಗಳು ಸುಮಾರು 13 ಲಕ್ಷ ಉದ್ಯೋಗಗಳು ಸೃಷ್ಟಿಯಾಗಬೇಕು. ಆದರೆ ಕಳೆದ 3 ವರ್ಷಗಳಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಕಳೆದುಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಶೇ.10ರಷ್ಟು ಮೀಸಲಾತಿ ಮೇಲ್ಜಾತಿಯ ಬಡವರ ಸಮಸ್ಯೆಗಳಿಗೆ ಪರಿಹಾರವೆನ್ನಬಹುದೆ?
- ಡಾ.ಎ.ಆರ್.ಗೋವಿಂದಸ್ವಾಮಿ, ರಂಗತಜ್ಞರು ಮತ್ತು ಪ್ರಗತಿಪರ ಚಿಂತಕರು
- (ಮುಂದುವರೆಯುವುದು)



