ಬೆಂಗಳೂರು: ಶಂಕರಮಠ ವಾರ್ಡ್, ಜೆ.ಸಿ.ನಗರದ ಪೈಪ್ ಲೈನ್ ರಸ್ತೆ ಜಿಮ್ ಉದ್ಯಾನವನದಲ್ಲಿ ಮಾನಸಿಕ ಖಾಯಿಲೆಯಿಂದ ನರಳುತ್ತಿದ್ದ 70 ವರ್ಷದ ವೃದ್ಧ ಮಹಿಳೆ ಉದ್ಯಾನವನ ಅವರಣದಲ್ಲಿ ಮೃತಪಟ್ಟರು.
ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಸ್ಥಳೀಯ ಮುಖಂಡ ಎಮ್.ಶಿವರಾಜು ಸ್ಥಳಕ್ಕೆ ಭೇಟಿ ನೀಡಿ, ಅಂತ್ಯಸಂಸ್ಕಾರಕ್ಕೆ ಸುಮನಹಳ್ಳಿ ಚಿತಗಾರಕ್ಕೆ ಕಳಿಸುವ ವ್ಯವಸ್ಥೆ ಮಾಡಿದರು.




