ಬೆಂಗಳೂರು: ನಾಗಪುರ ವಾರ್ಡ್, ಕೇತಮಾರನ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಾಜಿ ಮೇಯರ್ ಎಸ್.ಹರೀಶ್ ಭೇಟಿ ನೀಡಿ, ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಿ, ಸಿಹಿ ವಿತರಿಸಿದರು.
ಇದೇ ಸಂದರ್ಭದಲ್ಲಿ ಮಾತಾಡಿದ ಎಸ್.ಹರೀಶ್, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ನಮ್ಮ ಜೀವನದ ಪ್ರತಿಯೊಂದು ಹಂತದಲ್ಲಿ ಗುರುಗಳ ಮಾರ್ಗದರ್ಶನ ಅವಶ್ಯಕತೆ ಇದೆ. ಬಾಲ್ಯದಲ್ಲಿ ತಾಯಿ ಗುರುವಾಗಿ ಪೋಷಣೆ ಮಾಡುವಳು ನಂತರ ವಿದ್ಯೆ ಕಲಿಯುವ ಸಮಯದಲ್ಲಿ ಶಿಕ್ಷಕರು ನಮ್ಮ ಉತ್ತಮ ಪ್ರಜೆಯಾಗಿ ಮಾಡಲು ಶ್ರಮಿಸುತ್ತಾರೆ ಎಂದರು.
ವಿದ್ಯಾವಂತರಾದರೆ ಸಾಲದು ಈ ಸಮಾಜದಲ್ಲಿ ನೊಂದವರ, ಧ್ವನಿ ಇಲ್ಲದವರ ಆಸರೆಯಾಗಿ, ಉತ್ತಮ ಪ್ರಜೆಯಾಗಿ ಬಾಳಬೇಕು ಆಗ ಸಮಾಜದ ಅಭಿವೃದ್ಧಿ ಸಾಧ್ಯ. ನನ್ನ ಶಿಕ್ಷಣ, ಸಮಾಜ ಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಲು ಸಹಕಾರ ನೀಡಿ, ಮಾರ್ಗದರ್ಶನ ನೀಡಿದ ಎಲ್ಲ ಗುರು ಸಮಾನರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎಂದರು.




