ಬಿ.ಬಿ.ಎಂ.ಪಿ. ಚುನಾವಣೆ ಸಕಾಲಕ್ಕೆ ನಡೆಸಲು ಹೈಕೋರ್ಟ್ ಮೊರೆ ಹೋದ ಸಾಮಾಜಿಕ ಹೋರಾಟಗಾರ ಸಿ.ಎಸ್.ರಘು

4 years ago

ಬೆಂಗಳೂರು: ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ ಡಿ-ಲಿಮೀಟೆಷನ್ ಮಾಡಲು 18 ತಿಂಗಳು ಕಾಯಬೇಕಾಯಿತು. ನಂತರ ಮೀಸಲಾತಿ ಪ್ರಕಟ ಮಾಡಲು ಸುಪ್ರೀಂ ಕೋರ್ಟ್ ಆದೇಶ ನೀಡಬೇಕಾಯಿತು ಎಂದು ಸಾಮಾಜಿಕ ಹೋರಾಟಗಾರ ಸಿ.ಎಸ್.ರಘು ಅಭಿಪ್ರಾಯಟ್ಟರು.

ಬೆಂಗಳೂರು ನಗರದಲ್ಲಿ 1 ಕೋಟಿ 30 ಲಕ್ಷ ಜನಸಂಖ್ಯೆ ವಾಸವಿದ್ದಾರೆ. ಆದರೆ ಬಿ.ಬಿ.ಎಂ.ಪಿ.ಯಲ್ಲಿ ಕಳೆದ ಎರಡು ವರ್ಷಗಳಿಂದ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲ. ಜನರ ಸಮಸ್ಯೆಗಳನ್ನು ಅಲಿಸಲು, ನಿವಾರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಅವಧಿ ಮುಗಿದು ಆರು ತಿಂಗಳ ಒಳಗೆ ಪಾಲಿಕೆಗೆ ಹೊಸ ಸದಸ್ಯರು ಆಯ್ಕೆಯಾಗಿ ಬರಬೇಕು. ಆಡಳಿತಾಧಿಕಾರಿಗಳನ್ನು ಆರು ತಿಂಗಳ ಅವಧಿಗೆ ಮಾತ್ರ ನೇಮಿಸಲು ಸಾಧ್ಯ. ಆದರೆ ಎರಡು ವರ್ಷವಾದರು ಆಡಳಿತಾಧಿಕಾರಿ ಇದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.

ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ಸಮಸ್ಯೆ ತುರ್ತಾಗಿ ಹೈಕೋರ್ಟ್ ಪರಿಹರಿಸಿ, ಸಕಾಲಕ್ಕೆ ಚುನಾವಣೆ ನಡೆಸಲು ಅನುಮತಿಸಬೇಕು ಎಂದು ಹೈಕೋರ್ಟ್ ನಲ್ಲಿ ಮನವಿ ಮಾಡಲಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕು, ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇದ್ದಾಗ ಸಮಸ್ಯೆಗಳನ್ನು ನಿವಾರಣೆ ಸಾಧ್ಯ ಎಂದರು.

Leave a Reply