ನೇಮಾರ್ ಜೂನಿಯರ್: ಫುಟ್ಬಾಲ್ನ ಮಾಂತ್ರಿಕ
ನೇಮಾರ್ ಜೂನಿಯರ್ ಅವರು ಬ್ರೆಜಿಲ್ನ ಅತ್ಯಂತ ಪ್ರಸಿದ್ಧ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. ಇವರ ಪೂರ್ಣ ಹೆಸರು ನೇಮಾರ್ ದಾ ಸಿಲ್ವಾ ಸಾಂಟೋಸ್ ಜೂನಿಯರ್. ಇವರು 1992ರ ಫೆಬ್ರವರಿ 5ರಂದು ಬ್ರೆಜಿಲ್ನಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೇ ಫುಟ್ಬಾಲ್ನಲ್ಲಿ ಪ್ರತಿಭೆ ತೋರಿದ ನೇಮಾರ್, 17ನೇ ವಯಸ್ಸಿನಲ್ಲಿ ಸಾಂಟೋಸ್ ಕ್ಲಬ್ನ ಪ್ರಮುಖ ಆಟಗಾರರಾದರು. ಅವರ ವೇಗ, ಡ್ರಿಬ್ಲಿಂಗ್ ಮತ್ತು ಗೋಲ್ ಗಳಿಸುವ ಶೈಲಿ ಎಲ್ಲರನ್ನು ಆಕರ್ಷಿಸಿತು.
2013ರಲ್ಲಿ ನೇಮಾರ್ ಬಾರ್ಸಿಲೋನಾ ಕ್ಲಬ್ಗೆ ಸೇರಿಕೊಂಡರು. ಅಲ್ಲಿ ಮೆಸ್ಸಿ ಮತ್ತು ಸುವರೆಜ್ ಜೊತೆ “MSN” ತ್ರಿವಳಿ ರಚಿಸಿ ವಿಶ್ವ ಫುಟ್ಬಾಲ್ನಲ್ಲಿ ಸಂಚಲನ ಮೂಡಿಸಿದರು. 2014ರ ವಿಶ್ವಕಪ್ನಲ್ಲಿ ಬ್ರೆಜಿಲ್ ತಂಡದ ಪರ ಆಡುತ್ತಿದ್ದ ನೇಮಾರ್ ಕ್ವಾರ್ಟರ್ ಫೈನಲ್ ಹಂತವನ್ನು ತಲುಪಿದರು. ಆದರೆ ಅಲ್ಲಿ ಅವರು ಪಾರ್ಶ್ವ ವಾಯುವಿಗೆ ಒಳಗಾಗುವಂತಹ ಗಂಭೀರ ಸ್ಥಿತಿಯನ್ನು ಎದುರಿಸಬೇಕಾಯಿತು. ಅವರ ಮೊಣಕಾಲಿಗೆ ನೇರ ಸಂಪರ್ಕ ಹೊಂದಿದ್ದ ಮೃದ್ವಸ್ಥಿಯೊಂದು (Cartilage) ಮುರಿಯುವ ಹಂತಕ್ಕೆ ತಲುಪಿತ್ತು. ತಂಡದ ಪ್ರಮುಖ ಆಟಗಾರನ ಅನುಪಸ್ಥಿತಿಯಲ್ಲಿ, ಸೆಮಿಫೈನಲ್ನಲ್ಲಿ ಬ್ರೆಜಿಲ್ ಜರ್ಮನಿಯ ವಿರುದ್ಧ 7-1 ಅಂತರದಿಂದ ಹೀನಾಯ ಸೋಲನ್ನು ಅನುಭವಿಸಿತು ಮತ್ತು ಆ ಮೂಲಕ ನೇಮಾರ್ ಅವರ ವಿಶ್ವಕಪ್ ಕನಸು ಅಲ್ಲೇ ಅಂತ್ಯಗೊಂಡಿತು.
2015ರಲ್ಲಿ ನೇಮಾರ್ ತಮ್ಮ ವೃತ್ತಿಜೀವನದ ಅತ್ಯುನ್ನತ ಹಂತದಲ್ಲಿದ್ದರು. ಚಾಂಪಿಯನ್ಸ್ ಲೀಗ್ನಲ್ಲಿನ ಅದ್ಭುತ ಪ್ರದರ್ಶನದ ನೆರವಿನಿಂದ ಬಾರ್ಸಿಲೋನಾ ತಂಡದೊಂದಿಗೆ ‘ತ್ರಿಬಲ್’ (ಒಂದೇ ಋತುವಿನಲ್ಲಿ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲುವುದು) ಸಾಧನೆಯನ್ನು ಅವರು ಮಾಡಿದರು. ತಮ್ಮ ಸರ್ವಸ್ವವನ್ನು ನೀಡಿದ್ದರೂ, ಆ ಋತುವಿನ ಅತ್ಯುತ್ತಮ ಆಟಗಾರನಿಗೆ ನೀಡಲಾಗುವ ‘ಬ್ಯಾಲನ್ ಡಿ’ಓರ್’ (Ballon d’Or) ಪ್ರಶಸ್ತಿಯ ವಿಷಯದಲ್ಲಿ ಅನ್ಯಾಯವಾಯಿತು. ಮೆಸ್ಸಿ ಆ ಪ್ರಶಸ್ತಿಯನ್ನು ಗೆದ್ದುಕೊಂಡರಾದರೂ, ನೇಮಾರ್ ಅವರ ಅಭಿಮಾನಿಗಳೆಲ್ಲರೂ ಅವರೇ ಅದನ್ನು ಗೆಲ್ಲಬೇಕೆಂದು ಬಯಸಿದ್ದರು. ನೇಮಾರ್ 2017ರವರೆಗೆ ಬಾರ್ಸಿಲೋನಾ ತಂಡಕ್ಕೆ ಆಡಿದರು; ನಂತರ 222 ಮಿಲಿಯನ್ ಯುರೋಗಳ ದಾಖಲೆಯ ಮೊತ್ತದ ಕರಾರಿನೊಂದಿಗೆ ಪಿಎಸ್ಜಿ (PSG) ತಂಡವನ್ನು ಸೇರಿಕೊಂಡರು. ಅಲ್ಲಿ ಅವರು ಅತ್ಯುತ್ತಮ ಆಟವನ್ನು ಪ್ರದರ್ಶಿಸಿದರು. ಜೊತೆಗೆ 2018ರ ಫಿಫಾ ವಿಶ್ವಕಪ್ಗೂ ಸಿದ್ಧತೆ ನಡೆಸುತ್ತಿದ್ದರು. ಆದರೆ, ಆ ಟೂರ್ನಿಯಲ್ಲಿ ಬೆಲ್ಜಿಯಂ ವಿರುದ್ಧ ಸೋತು ತಂಡವು ಹೊರಬಿದ್ದಿತು. ಇದು ಅನಿರೀಕ್ಷಿತ ಫಲಿತಾಂಶವಾಗಿತ್ತು ಮತ್ತು ದುರಾದೃಷ್ಟವಶಾತ್ ನೇಮಾರ್ ಅವರ ಎರಡನೇ ವಿಶ್ವಕಪ್ ಅಭಿಯಾನವು ಹೀನಾಯವಾಗಿ ಅಂತ್ಯಗೊಂಡಿತು.
2020ರಲ್ಲಿ ಎಂಬಾಪೇ ಅವರ ಬೆಂಬಲದೊಂದಿಗೆ ನೇಮಾರ್ ಚಾಂಪಿಯನ್ಸ್ ಲೀಗ್ ಫೈನಲ್ ತಲುಪಿದರು. ಆದರೆ ಬೇಯರ್ನ್ ಮ್ಯೂನಿಕ್ ವಿರುದ್ಧ 1-0 ಅಂತರದಲ್ಲಿ ಸೋತರು. 2022ರ ವಿಶ್ವಕಪ್ನಲ್ಲಿ ಕ್ವಾರ್ಟರ್ ಫೈನಲ್ನಲ್ಲಿ ಕ್ರೊವೇಷಿಯಾ ವಿರುದ್ಧ ಶೂಟ್ ಪೆನಾಲ್ಟಿಗಳಲ್ಲಿ ಸೋಲುವ ಮೂಲಕ ನೇಮಾರ್ ಹೊರಬಿದ್ದರು. ಇದರೊಂದಿಗೆ ಅವರ ಮೂರನೇ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿತು. ನೇಮಾರ್ ಟಿ.ಎಸ್. ಜಿ (PSG) ಪರ ಆಡಿದರು, ಅಭಿಮಾನಿಗಳಿಂದ ಅವಮಾನ ಎದುರಿಸಬೇಕಾದ ಕಾರಣ ಅವರು ಆ ಕ್ಲಬ್ ತೊರೆದು ‘ಅಲ್ ಹಿಲ್ಲಾಲ್’ ತಂಡಕ್ಕೆ ಹೋದರು. ಆದರೆ, ‘ಅಲ್ – ಹಿಲ್ಲಾಲ್’ ತಂಡಕ್ಕೆ ಸೇರಿದ ನಂತರ ಅವರ ವೃತ್ತಿಜೀವನವು ದುಸ್ವಪ್ನದಂತಾಯಿತು. ಏಕೆಂದರೆ ಅವರು ಪದೇಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿದ್ದರು. ಒಂದು ಪೂರ್ಣ ವರ್ಷದಲ್ಲಿ ಅವರು ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದರು ಮತ್ತು 2025ರಲ್ಲಿ ‘ಅಲ್-ಹಿಲ್ಲಾಲ್’ ತೊರೆದು, ತಮ್ಮ ಬಾಲ್ಯದ ಕ್ಲಬ್ ಆದ ‘ಸಾಂಟೋಸ್’ ಗೆ ಮರಳಿದರು.
ಆದರೆ ಗಾಯಗಳ ಸಮಸ್ಯೆಗಳು ಅವರನ್ನು ಎಂದಿಗೂ ಬಿಡಲಿಲ್ಲ, ಆದಾಗ್ಯೂ, ಅವರು ಎಂದಿಗೂ ಹಿಂದೆ ಸರಿಯಲಿಲ್ಲ. ‘ಅಲ್ – ಹಿಲ್ಲಾಲ್’ ತಂಡದಲ್ಲಿನ ನಿರಾಶಾದಾಯಕ ಅವಧಿಯ ನಂತರ, ತಮ್ಮ ತಾಯ್ನಾಡಾದ ಬ್ರೆಜಿಲ್ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವರು ಬಯಸಿದ್ದರು. 2026ರ ವಿಶ್ವಕಪ್ಗಾಗಿ ಬ್ರೆಜಿಲ್ ತಂಡಕ್ಕೆ ಆಯ್ಕೆಯಾದವರಲ್ಲಿ ಅವರು ಕೊನೆಯವರಾಗಿದ್ದರು. ಸ್ಕಾಟ್ ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರಿಗೆ ಕೇವಲ ಕೆಲವು ನಿಮಿಷಗಳ ಕಾಲ ಆಡುವ ಅವಕಾಶ ಸಿಕ್ಕಿತು. ಕ್ವಾರ್ಟರ್ ಫೈನಲ್ ನಲ್ಲಿ ತಂಡವು ಹಾಲಂಡ್ ಅವರನ್ನು ಹೊಂದಿದ್ದ ನಾರ್ವೆ ತಂಡವನ್ನು ಎದುರಿಸಿತು. ನೇಮಾರ್ ಕೊನೆಯ ನಿಮಿಷದಲ್ಲಿ ಪೆನಾಲ್ಟಿ ಗೋಲ್ ಗಳಿಸಿದರೂ, ತಂಡವು ಸೋಲನ್ನು ಅನುಭವಿಸಿತು. ಇದರೊಂದಿಗೆ ನೇಮಾರ್ ಅವರ ಕೊನೆಯ ವಿಶ್ವಕಪ್ ಕನಸು ಭಗ್ನಗೊಂಡಿತು. ಅವರು ಮತ್ತೊಂದು ವಿಶ್ವಕಪ್ ಆಡುವ ಸಾಧ್ಯತೆ ಇದ್ದರು, ಗಾಯಗಳ ಸಮಸ್ಯೆಗಳು ಅವರನ್ನು ತಡೆಯಬಹುದು ಆದರೂ ಅವರ ಅಭಿಮಾನಿಗಳು ಅವರಿಗೆ “ರಾಜನಾಗದ ರಾಜಕುಮಾರ” (A prince who never become a king) ಎಂಬ ಅಡ್ಡಹೆಸರು ಇಟ್ಟು ಇಟ್ಟಿದ್ದಾರೆ.
– ಮಯೂರ ಪಿ., ಬೆಂಗಳೂರು
A prince who never become a king Neymar




