ಸೋಮನಾಥ ದೇಗುಲದ ಲೂಟಿಯಿಂದ ಅಯೋಧ್ಯೆಯ ‘ಚಂದಾಗಳವು’ವರೆಗೆ
ಇಂಗ್ಲಿಷ್ ಮೂಲ: ರಾಮ್ ಪುನಿಯಾನಿ
ಕನ್ನಡಕ್ಕೆ: ಡಾ.ಪ್ರದೀಪ್ ಮಾಲ್ಗುಡಿ
ಪ್ರಸ್ತುತ ಇಡೀ ದೇಶ ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಚಂದಾ ಹಣದ ಲೂಟಿಯಿಂದ ಆಘಾತಗೊಂಡಿದೆ ಮತ್ತು ದಂಗಾಗಿದೆ. ಅತ್ಯಂತ ಕಡಿಮೆ ಮೊತ್ತದಿಂದ ಹಿಡಿದು ದೊಡ್ಡ ಮೊತ್ತದವರೆಗೆ ತಮ್ಮ ಆರಾಧ್ಯ ದೈವ ಶ್ರೀರಾಮನಿಗೆ ಕಾಣಿಕೆ ಅರ್ಪಿಸಿದ್ದ ಭಕ್ತರಿಗೆ ಈ ಚಂದಾಗಳವಿನಿಂದ ತೀವ್ರ ನೋವುಂಟಾಗಿದೆ. ರಾಮಮಂದಿರ ಚಳವಳಿಯ ಸಂದರ್ಭದಲ್ಲಿ ಬಾಬ್ರಿ ಮಸೀದಿಯನ್ನು ಕೆಡವಲಾಗಿತ್ತು ಮತ್ತು ಅದೇ ಜಾಗದಲ್ಲಿ ಈ ಮಂದಿರವನ್ನು ನಿರ್ಮಿಸಲಾಗಿದೆ. ರಾಮಮಂದಿರ ಚಳವಳಿ ಇಡೀ ದೇಶವನ್ನೇ ಅಲ್ಲಾಡಿಸಿತ್ತು. ಬಿಜೆಪಿಯ ಅಂದಿನ ಅಧ್ಯಕ್ಷ ಎಲ್.ಕೆ. ಅಡ್ವಾಣಿ ನೇತೃತ್ವದಲ್ಲಿ ರಥಯಾತ್ರೆ ನಡೆಸಲಾಗಿತ್ತು. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇದ್ದ ಸ್ಥಳದಲ್ಲಿ ರಾಮಮಂದಿರ ನಿರ್ಮಿಸುವುದೇ ಈ ಆಂದೋಲನದ ಹಿಂದಿನ ಬಿಜೆಪಿ-ಆರ್.ಎಸ್.ಎಸ್. ಅಜೆಂಡಾ ಆಗಿತ್ತು. ಇದರ ಬಗ್ಗೆ ಒಂದು ಕಥೆಯನ್ನು ಸೃಷ್ಟಿಸಲಾಯಿತು; ಅಂದರೆ ಮೊಘಲ್ ದೊರೆ ಬಾಬರ್, ಅಯೋಧ್ಯೆಯಲ್ಲಿ ಭಕ್ತರ ನಂಬಿಕೆಯ ಶ್ರೀರಾಮನ ಜನ್ಮಸ್ಥಳದಲ್ಲಿದ್ದ ರಾಮಮಂದಿರವನ್ನು ಕೆಡವಿ ಅದರ ಅವಶೇಷಗಳ ಮೇಲೆ ತನ್ನ ಹೆಸರಿನಲ್ಲಿ ಮಸೀದಿ ನಿರ್ಮಿಸಿದ್ದನೆಂದು ಬಿಂಬಿಸಲಾಯಿತು.
- ದೆಹಲಿ ದೌರ್ಜನ್ಯ ಖಂಡಿಸಿ ಬೆಂಗಳೂರಿನಲ್ಲಿ ಜಾಗೃತರ ಆಕ್ರೋಶ
- ಅಹರ್ನಿಶಿ ಪ್ರಕಾಶನದಿಂದ ‘ಮೂರು ಕಥಾ ಸಂಕಲನಗಳ ಬಿಡುಗಡೆ
- ಧ್ರುವ್ ರಾಠಿ ಮುಸ್ಲಿಮರೇ? ‘ಬಬ್ರುದ್ದಿನ್ ರಶೀದ್’ ಹೆಸರಿನ ಹಿಂದಿರುವ ಅಸಲಿಯತ್ತೇನು?
- ನಟರಾಜ್ ಹುಳಿಯಾರ್ ಅವರ ಡಾಕ್ಟರ್ ಸಾಹೇಬ್ – ರಾಮಮನೋಹರ ಲೋಹಿಯಾ ಜೀವನಯಾನ ಬಿಡುಗಡೆ
- ‘ಜೆನ್ ಜಿ’ ಹೆಸರಲ್ಲಿ ಪೋಸ್ಟ್ ಹಾಕಿ ತಗ್ಲಾಕೊಂಡ ಚಕ್ರವರ್ತಿ ಸೂಲಿಬೆಲೆ!
ನ್ಯಾಯಾಲಯದ ಶಾಮೀಲು ಹಾಗೂ ಒತ್ತಡದ ಕಾರಣದಿಂದ ಬಿಜೆಪಿ-ಆರ್.ಎಸ್.ಎಸ್. ತಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾದವು. ಈ ಚಳವಳಿಗೆ ಸಮಾನಾಂತರವಾಗಿ ದೊಡ್ಡ ಪ್ರಮಾಣದಲ್ಲಿ ಚಂದಾ ಸಂಗ್ರಹಿಸುವ ಕೆಲಸವೂ ನಡೆಯುತ್ತಿತ್ತು. ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಘಟನೆಯ ತನಿಖೆ ನಡೆಸಿದ ಲಿಬರ್ ಹಾನ್ ಆಯೋಗ, ಅಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ ಇತರರು ಮಸೀದಿ ಧ್ವಂಸಕ್ಕೆ ಹೊಣೆಗಾರರೆಂದು ಪತ್ತೆ ಹಚ್ಚಿತ್ತು. ಕೊನೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲೂ ಕೂಡ ಮಸೀದಿ ಧ್ವಂಸಗೊಳಿಸುವುದು ಅಪರಾಧವೆಂದು ಒಪ್ಪಿಕೊಳ್ಳಲಾಗಿತ್ತು. ಆದರೆ ನ್ಯಾಯಾಲಯ ಸ್ಪಷ್ಟವಾಗಿ ಆಡಳಿತಗಾರರ ಒತ್ತಡಕ್ಕೆ ಮಣಿದು, ಅಪರಾಧಿಗಳಿಗೆ ಬಹುಮಾನವೆಂಬಂತೆ ಮಸೀದಿ ಇದ್ದ ಸಂಪೂರ್ಣ ಜಾಗವನ್ನು ಮಂದಿರ ನಿರ್ಮಾಣಕ್ಕಾಗಿ ಕೊಟ್ಟಿತು.
ಬಳಿಕ ಭವ್ಯ ಮಂದಿರದ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಹರಿದುಬರತೊಡಗಿತು. ಪ್ರಧಾನಿ ನರೇಂದ್ರ ಮೋದಿಯವರು ಎರಡು ಪಾತ್ರಗಳನ್ನು ನಿರ್ವಹಿಸಿದರು – ಒಂದು ಸರ್ಕಾರದ ಮುಖ್ಯಸ್ಥರಾಗಿ ಮತ್ತು ಇನ್ನೊಂದು ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಯಜಮಾನರಾಗಿ. ಒಟ್ಟಾರೆಯಾಗಿ ರಾಮಮಂದಿರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲೂ ಅಂತಿಮ ನಿರ್ಧಾರ ಕೈಗೊಳ್ಳುವವರು ಅವರೇ ಆಗಿದ್ದರು.
ಮಂದಿರ ಉದ್ಘಾಟನೆಯಾದ ಮೊದಲ ಮಳೆಗೆ ಮಂದಿರದ ನಿರ್ಮಾಣದ ಕಳಪೆ ಗುಣಮಟ್ಟ ಬಟಾಬಯಲಾಯಿತು. ಮೇಲ್ಛಾವಣಿಯಿಂದ ನೀರು ಸೋರಲಾರಂಭಿಸಿತು. ಇದರಿಂದ ‘ಬಕೆಟ್ ಉದ್ಯಮ’ಕ್ಕೆ ಭಾರಿ ಬೇಡಿಕೆ ಬಂತು! ನೆಲದ ಮೇಲೆ ನೀರು ನಿಲ್ಲದಂತೆ ತಡೆಯಲು ಸಾಲು ಸಾಲು ಬಕೆಟ್ಗಳನ್ನು ಇಡಲಾಯಿತು. ಭಕ್ತರು ಮುಗಿಬೀಳಲು ಶುರುವಾದರು.
ದೇಣಿಗೆ ಸಂಗ್ರಹಕ್ಕೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳು ಪ್ರಧಾನಿ ಕಚೇರಿಯ ನೇರ ನಿಯಂತ್ರಣದಲ್ಲಿದ್ದವು. ಎಷ್ಟು ದೊಡ್ಡ ಪ್ರಮಾಣದಲ್ಲಿ ದೇಣಿಗೆ ಬರುತ್ತಿತ್ತು ಎಂಬುದಕ್ಕೆ ಸಿಂಧಿ ಸಮುದಾಯದ ‘ವಿಶ್ವ ಸಿಂಧಿ ಸಮಾಜ’ ತಲಾ ಒಂದು ಕೆ.ಜಿ ತೂಕದ ಸುಮಾರು 200 ಬೆಳ್ಳಿಯ ಇಟ್ಟಿಗೆಗಳನ್ನು ದೇಣಿಗೆಯಾಗಿ ನೀಡಿರುವುದೇ ಸಾಕ್ಷಿ. ಆದರೆ ಅವರಿಗೆ ಯಾವುದೇ ರಶೀದಿ ಕೊಟ್ಟಿಲ್ಲ. ಮಂದಿರಕ್ಕೆ ನಾನಾ ರೀತಿಯ ಅನೇಕ ಬೆಲೆಬಾಳುವ ವಸ್ತುಗಳು ಕಾಣಿಕೆಯಾಗಿ ಸಿಕ್ಕಿವೆ. ಟ್ರಸ್ಟಿಗಳು ಗೋಪ್ಯವಾಗಿ/ಅಕ್ರಮವಾಗಿ ಲಪಟಾಯಿಸಿರುವ ಹಣದ ಮೊತ್ತ 2000ರಿಂದ 3000 ಕೋಟಿ ರೂ.ಗಳ ನಡುವೆ ಇದೆ ಎಂದು ಅಂದಾಜಿದೆ.
ಒಟ್ಟಾರೆ ಹೇಳುವುದಾದರೆ, ಮಂದಿರವನ್ನು ಲೂಟಿ ಮಾಡಲಾಗಿದೆ ಮತ್ತು ಈ ಹಗರಣ ಮಾಡಿದವರಿಗೆ ದೇವರ ಮೇಲಾಗಲಿ ಅಥವಾ ಧರ್ಮದ ಮೇಲಾಗಲಿ ಯಾವುದೇ ಭಯವಿರಲಿಲ್ಲ. ಇದರ ಪರಿಣಾಮವೇನು ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ವಾಸ್ತವವೆಂದರೆ, ರಾಮಮಂದಿರದ ಸಂಪೂರ್ಣ ಚಳವಳಿ ಪ್ರಮುಖವಾಗಿ ರಾಜಕೀಯ ಗುರಿಗಳನ್ನು ಸಾಧಿಸಲು ಮಾತ್ರ ನಡೆಸಲ್ಪಟ್ಟಿತ್ತು. ಇದರಿಂದ ಬಿಜೆಪಿಗೆ ಅಧಿಕಾರ ಸಿಕ್ಕಿತು ಮತ್ತು ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುವ ಮೂಲಕ ಅದು ತನ್ನ ರಾಜಕೀಯ ನೆಲೆಯನ್ನು ಬಹಳ ಗಟ್ಟಿಗೊಳಿಸಿತು. ನಮ್ಮ ಪ್ರಜಾಪ್ರಭುತ್ವದಿಂದ ‘ಸೋದರಭಾವ’ದ ಅಂಶ ಬಹುತೇಕ ಕಣ್ಮರೆಯಾಯಿತು ಮತ್ತು ಮುಸ್ಲಿಮರ ಮೇಲಿನ ದ್ವೇಷ ನಿರಂತರವಾಗಿ ಹೆಚ್ಚುತ್ತಾ ಹೋಯಿತು.
ಇದು ಸಾಮ್ರಾಜ್ಯಶಾಹಿಗಳ ಆ ಕಾಲವನ್ನು ನೆನಪಿಗೆ ತರುತ್ತದೆ, ಆಗ ರಾಜರು ಸಂಪತ್ತಿಗಾಗಿ ದೇವಾಲಯಗಳನ್ನು ಲೂಟಿ ಮಾಡುತ್ತಿದ್ದರು. ಸಾಮ್ರಾಜ್ಯಶಾಹಿ ಯುಗದಲ್ಲಿ ರಾಜರು ನಡೆಸುತ್ತಿದ್ದ ದೇವಾಲಯಗಳ ಲೂಟಿ ಮತ್ತು ಇಂದಿನ ಅರೆ-ಪ್ರಜಾಸತ್ತಾತ್ಮಕ ಸಮಾಜದಲ್ಲಿ (ಚುನಾಯಿತ ಸರ್ವಾಧಿಕಾರವಾಗಿ ಬದಲಾಗುತ್ತಿರುವ) ನಡೆಯುತ್ತಿರುವ ಇಂತಹ ಲೂಟಿಯ ನಡುವೆ ವ್ಯತ್ಯಾಸವೇನು? ಸಂಪತ್ತಿನ ಮೇಲಿನ ವ್ಯಾಮೋಹ ಎರಡೂ ಕಾಲದಲ್ಲೂ ಒಂದೇ ಆಗಿದೆ. ಆದರೆ ಧರ್ಮಾಧಾರಿತ ಧ್ರುವೀಕರಣ ಹಿಂದಿನ ರಾಜರ ನೀತಿಯಾಗಿರಲಿಲ್ಲ. ಆದರೆ ಪ್ರಸ್ತುತ ಲೂಟಿಕೋರರು, ಸಾಂಪ್ರದಾಯಿಕ ಶಕ್ತಿಗಳೊಂದಿಗೆ ಗುರುತಿಸಿಕೊಂಡಿದ್ದು, ಅವರ ಮುಖ್ಯ ಅಜೆಂಡಾವೇ ಧ್ರುವೀಕರಣವಾಗಿದೆ.
ಇತರ ಹಲವು ರಾಜರು ಸಹ ದೇಗುಲಗಳನ್ನು ಮತ್ತು ಪವಿತ್ರ ಸ್ಥಳಗಳನ್ನು ನಾಶಪಡಿಸಿದ್ದಾರೆ. ಅದರಲ್ಲಿ ಎರಡು ಪ್ರಮುಖ ಉದಾಹರಣೆಗಳನ್ನು ನೆನಪಿಸಿಕೊಳ್ಳಬಹುದು. ಮೊದಲನೆಯದು 11ನೇ ಶತಮಾನದ ಕಾಶ್ಮೀರದ ರಾಜ ಹರ್ಷದೇವ್ ಮತ್ತು ಎರಡನೆಯದು ಮಹಮದ್ ಗಜ್ನಿಯು ಸೋಮನಾಥ ದೇವಾಲಯವನ್ನು ಲೂಟಿ ಮಾಡಿದ್ದು. ಡಿ.ಡಿ.ಕೋಸಾಂಬಿ ಅವರ ಪ್ರಕಾರ, “ಏಳನೇ ಶತಮಾನದ ಚಕ್ರವರ್ತಿ ಹರ್ಷನಿಂದ ಸ್ವತಂತ್ರನಾದ ಕಾಶ್ಮೀರದ ರಾಜ ಹರ್ಷದೇವ್ (1089-1101 ಇಸವಿ), ತನ್ನ ಸಾಮ್ರಾಜ್ಯದಲ್ಲಿದ್ದ ಲೋಹದ ಎಲ್ಲಾ ದೇವತೆಗಳ ಪ್ರತಿಮೆಗಳನ್ನು (ಕೇವಲ ನಾಲ್ಕನ್ನು ಹೊರತುಪಡಿಸಿ) ಅತ್ಯಂತ ವ್ಯವಸ್ಥಿತವಾಗಿ ಕರಗಿಸಿದ. ಈ ಕೆಲಸಕ್ಕಾಗಿ ‘ದೇವೋಪತನ ನಾಯಕ್’ ಎಂಬ ವಿಶೇಷ ಹುದ್ದೆಯ ಮಂತ್ರಿಯನ್ನು ನೇಮಿಸಲಾಗಿತ್ತು.”
ಅಸ್ಘರ್ ಅಲಿ ಇಂಜಿನಿಯರ್ ಹೇಳುವಂತೆ, “ಮಹಮದ್ ಗಜ್ನಿಯ ಬಗ್ಗೆ ಇತಿಹಾಸಕಾರರು ಕೆಲವೇ ಕೆಲವು ಸತ್ಯಗಳನ್ನು ಮುಂದಿಟ್ಟಿದ್ದಾರೆ. ಅವನು ಸೋಮನಾಥ ದೇವಾಲಯವನ್ನು ಲೂಟಿ ಮಾಡಿದ ಮತ್ತು ಧ್ವಂಸಗೊಳಿಸಿದ ಎಂಬುದಕ್ಕೆ ನಾವು ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ. ಆದರೆ ಅವನು ತನ್ನ ಸೈನ್ಯ ಮತ್ತು ಆಡಳಿತದಲ್ಲಿ ಹಿಂದೂಗಳನ್ನು ಉನ್ನತ ಹುದ್ದೆಗಳಿಗೆ ನೇಮಿಸಿದ್ದ ಎಂಬ ಸತ್ಯವನ್ನು ನಾವು ಬೆಳಕಿಗೆ ತರುವುದಿಲ್ಲ. ‘ತಾರಿಖ್-ಎ-ಬೈಹಾಕಿ’ ಗ್ರಂಥದಲ್ಲಿ ಅವನ ಹಿಂದೂ ಜನರಲ್‌ಗಳಾದ ತಿಲಕ್, ಸೊಂಡಿ, ರಾಯ್ ಹಿಂದ್ ಮತ್ತು ಹರ್ಜನ್ ಮುಂತಾದವರ ಉಲ್ಲೇಖವಿದೆ… ಅವನ ಆಡಳಿತಾವಧಿಯಲ್ಲಿ ಮುದ್ರಿಸಲಾದ ನಾಣ್ಯಗಳ ಮೇಲೆ ಸಂಸ್ಕೃತದಲ್ಲಿ ಶಾಸನಗಳಿದ್ದವು.”
ದೇವಾಲಯಗಳನ್ನು ಧಾರ್ಮಿಕ ಕಾರಣಗಳಿಗಾಗಿ ಮಾತ್ರ ನಾಶಪಡಿಸಲಾಯಿತು ಎಂಬುದು ಇಂದಿನ ಸಮಾಜದಲ್ಲಿರುವ ಸಾಮಾನ್ಯ ನಂಬಿಕೆಯಾಗಿದೆ. ಬ್ರಿಟಿಷರ ‘ಒಡೆದು ಆಳು’ ನೀತಿಯ ಭಾಗವಾಗಿ ಸೃಷ್ಟಿಸಲಾದ ಕೋಮುವಾದಿ ಇತಿಹಾಸ ಬರವಣಿಗೆಯಿಂದ ಈ ಕಲ್ಪನೆ ಮೂಡಿದೆ. ಮಹಮದ್ ಗಜ್ನಿ ಸೋಮನಾಥ ದೇವಾಲಯವನ್ನು ನಾಶಪಡಿಸುವ ಮುನ್ನ, ಅಲ್ಲಿ ಬಂಗಾರ ಮತ್ತು ಬೆಳ್ಳಿಯಲ್ಲಿದ್ದ ಎಲ್ಲಾ ಮೂರ್ತಿಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದ. ಅವುಗಳ ಒಟ್ಟು ಮೌಲ್ಯ ಇಪ್ಪತ್ತು ಸಾವಿರ ಬಂಗಾರದ ದಿನಾರ್‌ಗಳಿಗಿಂತ ಹೆಚ್ಚಿತ್ತು, ಇದು ಆ ಕಾಲದಲ್ಲಿ ಅತಿ ದೊಡ್ಡ ಮೊತ್ತವಾಗಿತ್ತು… ಸುಲ್ತಾನನು ಈ ಮೂರ್ತಿಗಳನ್ನು ನೋಡಿ ಆಶ್ಚರ್ಯಚಕಿತನಾದ ಮತ್ತು ಈ ಮೂರ್ತಿಗಳನ್ನು ಹಾಗೂ ಮಂದಿರದ ಖಜಾನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದ… ದೇವಾಲಯದಲ್ಲಿ ಸಿಕ್ಕ ವಸ್ತುಗಳ ಮೌಲ್ಯ ಇಪ್ಪತ್ತು ಸಾವಿರ ದಿನಾರ್‌ಗಳಿಗಿಂತ ಹೆಚ್ಚಿತ್ತು.”
ರೋಮಿಲಾ ಥಾಪರ್ ಬರೆಯುತ್ತಾರೆ, “ದೇವಾಲಯಗಳಲ್ಲಿ ಭಕ್ತರು ದಾನ ಮಾಡಿದ ನಗದು, ಚಿನ್ನದ ಮೂರ್ತಿಗಳು ಮತ್ತು ಒಡವೆಗಳ ರೂಪದಲ್ಲಿ ಅಪಾರ ಸಂಪತ್ತು ಇತ್ತು. ಆದ್ದರಿಂದಲೇ ಅವು ಉತ್ತರ ಭಾರತದಲ್ಲಿ ಸಂಪತ್ತನ್ನು ಹುಡುಕುತ್ತಿದ್ದ ಹಿಂದೂಯೇತರರ (ಅನ್ಯಧರ್ಮೀಯರ) ಗುರಿಯಾಗಿದ್ದವು. ಮಹಮದ್ ಗಜ್ನಿಗೆ ಚಿನ್ನದ ಮೇಲೆ ಅಪಾರ ಆಸೆಯಿತ್ತು… ಮತ್ತು ಸೋಮನಾಥ ಮಂದಿರ ತನ್ನ ಅಗಾಧ ಸಂಪತ್ತಿಗೆ ಹೆಸರುವಾಸಿಯಾಗಿತ್ತು.” ಅವರು ಮುಂದೆ ಬರೆಯುತ್ತಾರೆ, “ರಾಜಕೀಯ ಗುರಿಗಳನ್ನು ಸಾಧಿಸುವ ವಿಷಯ ಬಂದಾಗ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಬಳಸಿಕೊಳ್ಳಲು ಯಾವುದೇ ಅವಕಾಶನ್ನು ಬಿಡುವುದಿಲ್ಲ.”
ಸಾಮಾನ್ಯ ಜನರ ಮನಸ್ಸಿನಲ್ಲಿ ಮುಸ್ಲಿಮರ ಮತ್ತು ಮಹಮದ್ ಗಜ್ನಿಯ ಬಗ್ಗೆ ರಾಕ್ಷಸ ಬಿಂಬ ಮೂಡಿಸುವಲ್ಲಿ ಕನ್ಹಯ್ಯಲಾಲ್ ಮಾಣಿಕ್ ಲಾಲ್ ಮುನ್ಷಿ ಅವರ ‘ಜಯ್ ಸೋಮನಾಥ’ ಕಾದಂಬರಿ ಪ್ರಮುಖ ಪಾತ್ರ ವಹಿಸಿದೆ. ದೇಗುಲಗಳನ್ನು ಲೂಟಿ ಮಾಡುವುದರ ಏಕೈಕ ಉದ್ದೇಶ ಹಿಂದೂಗಳನ್ನು ಅವಮಾನಿಸುವುದೇ (ಧಾರ್ಮಿಕ ಕಾರಣ) ಎಂಬ ಭಾವನೆ ಮೂಡುವಂತೆ ಆ ಕಾದಂಬರಿಯಲ್ಲಿ ಘಟನೆಗಳನ್ನು ನಿರೂಪಿಸಲಾಗಿದೆ.
ಹಲವು ಮುಸ್ಲಿಂ ರಾಜರು ದೇವಾಲಯಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಹೇಳಲಾಗುತ್ತದೆಯಾದರೂ, ಬಹಳಷ್ಟು ಮುಸ್ಲಿಂ ರಾಜರು ಹಿಂದೂ ದೇವಾಲಯಗಳಿಗೆ ದೇಣಿಗೆಯನ್ನೂ ನೀಡುತ್ತಿದ್ದರು ಎಂಬ ಅಂಶವನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಉಲ್ಲೇಖಿಸಲಾಗುತ್ತದೆ. ಔರಂಗಜೇಬ್ ಹೊರಡಿಸಿದ ಕೆಲ ಆದೇಶಗಳ ಪ್ರತಿಗಳಲ್ಲಿ, ಉತ್ತರ ಭಾರತದ ವಿವಿಧ ಸ್ಥಳಗಳಾದ ಮಹಾಕಾಳೇಶ್ವರ (ಉಜ್ಜಯಿನಿ), ಬಾಲಾಜಿ ಮಂದಿರ (ಚಿತ್ರಕೂಟ), ಉಮಾನಂದ ಮಂದಿರ (ಗುವಾಹಟಿ), ಶತ್ರುಂಜಯದ ಜೈನ ಮಂದಿರಗಳು ಮತ್ತು ಇತರ ಹಲವು ಪ್ರಸಿದ್ಧ ದೇವಾಲಯಗಳು ಹಾಗೂ ಗುರುದ್ವಾರಗಳಿಗೆ ದೇಣಿಗೆ ನೀಡುವಂತೆ ಆದೇಶಿಸಲಾಗಿದೆ. ಈ ಆದೇಶಗಳನ್ನು ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ 1065 (ಕ್ರಿ.ಶ. 1659) ಮತ್ತು 1095 (1685) ರ ನಡುವೆ ಹೊರಡಿಸಲಾಗಿತ್ತು.”
ಮಂದಿರಗಳನ್ನು ಧ್ವಂಸಗೊಳಿಸಿದ ಗಜ್ನಿಯಂತಹ ರಾಜರು ಮತ್ತು ಇಂದಿನ ಆಡಳಿತಗಾರರ ನಿಯಂತ್ರಣದಲ್ಲಿರುವ ಟ್ರಸ್ಟ್‌ಗಳ ನಡುವೆ ಅಚ್ಚರಿ ಮೂಡಿಸುವಂತಹ ಹೋಲಿಕೆಗಳು ಕಾಣಬರುತ್ತಿವೆ.




