ಚಲೋ ಬೆಂಗಳೂರು – ಜನರ ಹಕ್ಕುಗಳಿಗಾಗಿ SDPI ಹೋರಾಟ

2 days ago

ಸಾಮಾಜಿಕ ನ್ಯಾಯ, ಸಮಾನ ಅವಕಾಶ, ಮೀಸಲಾತಿ ಹಾಗೂ ಶಿಕ್ಷಣದ ಹಕ್ಕುಗಳಿಗಾಗಿ SDPI ಕರ್ನಾಟಕ ವತಿಯಿಂದ ಚಲೋ ಬೆಂಗಳೂರು ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.

ದಿನಾಂಕ: 19 ಆಗಸ್ಟ್ 2026ರಂದು ಬೆಳಿಗ್ಗೆ 10:30ಕ್ಕೆ
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ.

ಪ್ರಮುಖ ಬೇಡಿಕೆಗಳು:

🔹 ಮಧುಸೂದನ್ ನಾಯಕ್ ನೇತೃತ್ವದ ಜಾತಿ ಜನಗಣತಿ ವರದಿಯನ್ನು ಅಂಗೀಕರಿಸಿ ಸಾರ್ವಜನಿಕಗೊಳಿಸಬೇಕು.

🔹 2B ಮೀಸಲಾತಿಯನ್ನು ಮರುಸ್ಥಾಪಿಸಿ ಶೇ.8ಕ್ಕೆ ಹೆಚ್ಚಿಸಬೇಕು.

🔹 ಕರ್ನಾಟಕದಲ್ಲಿ ಸಮಾನ ಅವಕಾಶಗಳ ಆಯೋಗವನ್ನು (Equal Opportunity Commission) ಸ್ಥಾಪಿಸಬೇಕು.

🔹 ಖಾಸಗಿ ವಲಯದ ಉದ್ಯೋಗಗಳಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳು ಹಾಗೂ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಕಲ್ಪಿಸಲು ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಬೇಕು.

🔹 15,000 ಶಿಕ್ಷಕರ ನೇಮಕಾತಿಯಲ್ಲಿ ಉರ್ದು, ಹಿಂದಿ, ಮರಾಠಿ ಹಾಗೂ ಗಣಿತ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಅಗತ್ಯ ಹುದ್ದೆಗಳನ್ನು ತಕ್ಷಣ ಸೇರ್ಪಡೆಗೊಳಿಸಬೇಕು.

ಇವು ಕೇವಲ ಕೆಲವು ಸಮುದಾಯಗಳ ಬೇಡಿಕೆಗಳಲ್ಲ; ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನಬದ್ಧ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ.

ಜಾತಿ, ಧರ್ಮ, ಭಾಷೆ ಹಾಗೂ ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ಯಾವುದೇ ವ್ಯಕ್ತಿಗೂ ಅವಕಾಶಗಳ ನಿರಾಕರಣೆ ಅಥವಾ ತಾರತಮ್ಯವಾಗದಂತಹ ನ್ಯಾಯಯುತ ಸಮಾಜ ನಿರ್ಮಾಣ ನಮ್ಮ ಗುರಿಯಾಗಿದೆ.

ಜನರ ಹಕ್ಕುಗಳಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ, ಸಮಾನ ಅವಕಾಶಗಳಿಗಾಗಿ—ನಾವೆಲ್ಲರೂ ಒಂದಾಗಿ ಧ್ವನಿ ಎತ್ತೋಣ. ಆಗಸ್ಟ್ 19ರಂದು ಫ್ರೀಡಂ ಪಾರ್ಕ್‌ಗೆ ಬನ್ನಿ… ಚಲೋ ಬೆಂಗಳೂರು ಹೋರಾಟವನ್ನು ಯಶಸ್ವಿಗೊಳಿಸಿ ಎಂದು ಅಪ್ಸರ್ ಕೊಡ್ಲಿಪೇಟೆ ಕರೆನೀಡಿದ್ದಾರೆ.

Leave a Reply