ಬೆಂಗಳೂರು: ಮಲ್ಲೇಶ್ವರಂ ಯಂಗ್ ಸ್ಟರ್ ಬಿಗ್ರೆಡ್ ವತಿಯಿಂದ ಹಿಮಾಂಶು ಜ್ಯೋತಿ ಕಲಾ ಪೀಠದಲ್ಲಿ ಗಣೇಶ ಹಬ್ಬದ ಪ್ರಯುಕ್ತ 250 ಮಕ್ಕಳಿಂದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಬಳಸುವ ಬಗ್ಗೆ ಜಾಗೃತಿ & ತಯಾರಿಕೆ ಮತ್ತು ಮಣ್ಣಿನ ಗಣೇಶ ತಯಾರಿಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಮಾಜ ಸೇವಕ ಅನೂಪ್ ಅಯ್ಯಂಗಾರ್ ಮತ್ತು ಕಾಂಗ್ರೆಸ್ ಪಕ್ಷದ ಚಂದ್ರಶೇಖರ್, ಹೇಮಂತ್, ಶಾಲಾ ಶಿಕ್ಷಕರು ಸೇರಿ ಮಣ್ಣಿನ ಗಣೇಶ ತಯಾರಿಕೆಗೆ ಚಾಲನೆ ನೀಡಿದರು.

ಪರಿಸರ ಸ್ನೇಹಿ ಮಣ್ಣಿನ ಗಣೇಶ ತಯಾರಿಕೆಯಲ್ಲಿ 10 ಶಾಲೆಯ ಮಕ್ಕಳು ಹಾಗೂ 4 ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡರು. ಸುಂದರ ಗಣೇಶ ಮೂರ್ತಿ ತಯಾರಿಕೆ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.
ಅನೂಪ್ ಅಯ್ಯಂಗಾರ್ ಮಾತನಾಡಿ ಅಭಿವೃದ್ದಿ ಹೆಸರಿನಲ್ಲಿ ಮರಗಿಡಗಳನ್ನು ಕಡಿದು ಹಾಕಲಾಯಿತು. ಬೇಳೆ ಬೆಳೆಯುವ ಹೊಲ, ಗದ್ದೆಗಳಿಗೆ ರಾಸಾಯನಿಕ ಸಿಂಪಡಣೆನೆ ಮಾಡಲಾಯಿತು. ಪರಿಸರ ಕಾಪಾಡುವ ಬದಲು ಪರಿಸರ ಹಾಳಾಗುವಂತೆ ಮಾಡಲಾಯಿತು. ಪರಿಸರ ನಾಶದಿಂದ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಮನುಷ್ಯ ಕುಲದ ಜೊತೆಯಲ್ಲಿ ಪ್ರಾಣಿ ಸಂಕುಲವು ಪ್ರಾಣಪಾಯ ಸ್ಥಿತಿಯಲ್ಲಿದೆ. ಪರಿಸರ ಉಳಿದರೆ ಮಾತ್ರ ಎಲ್ಲರು ಉಳಿಯಲು ಸಾಧ್ಯ ಎಂದು ಮಕ್ಕಳಿಗೆ ಅರಿವು ಮೂಡಿಸಲು ಪರಿಸರ ಸ್ನೇಹಿ ಮಣ್ಣಿನ ಗಣೇಶ ತಯಾರಿಕೆ ಮತ್ತು ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.
ಹಿಂದೂಗಳಿಗೆ ಪವಿತ್ರವಾದ ಮತ್ತು ದೊಡ್ಡ ಹಬ್ಬ ಪ್ರತಿಯೊಬ್ಬರ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ರಾಸಾಯನಿಕ ಬಣ್ಣದ ಗಣೇಶಗಳನ್ನು ನದಿ, ಕೆರೆ, ಹೊಂಡಗಳಲ್ಲಿ ವಿಸರ್ಜನೆ ಮಾಡಿದರೆ ಅದು ಬೇಗನೆ ಕರಗುವುದಿಲ್ಲ ಮತ್ತು ನೀರು ಕಲುಷಿತವಾಗುತ್ತದೆ. ಕಲುಷಿತ ನೀರು ಕುಡಿಯುವುದರಿಂದ ಮನುಷ್ಯ ಮತ್ತು ಪ್ರಾಣಿಗಳಿಗೆ ಮಾರಕ ಖಾಯಿಲೆ ಬರುವ ಸಾಧ್ಯತೆ ಹೆಚ್ಚು. ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳು ಪ್ರತಿಯೊಬ್ಬರು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಮನೆಯ ಬಕೆಟ್, ನದಿ, ಕೆರೆಗಳಲ್ಲಿ ವಿಸರ್ಜನೆ ಮಾಡಬಹುದು ಇದರಿಂದ ಪರಿಸರ ಉಳಿಯುತ್ತದೆ. ಜನರ ಸಹಕಾರದಿಂದ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದರು.
ಪರಿಸರ ಸ್ನೇಹಿ ಮಣ್ಣಿನ ಗಣೇಶ ತಯಾರಿಕೆ ಸ್ಪರ್ಧೆಯಲ್ಲಿ ಮೂರು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಾಥಮಿಕ, ಮಾಧ್ಯಮಿಕ ವಿಭಾಗದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳ ವಿಭಾಗ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಣ್ಣಿನ ಗಣೇಶ ತಯಾರಿಕೆಯಲ್ಲಿ ಉತ್ತಮ ಗಣೇಶ ಮೂರ್ತಿ ತಯಾರಿಸಿದವರಿಗೆ ಬಹಮಾನ ವಿತರಿಸಲಾಯಿತು.




