ಬೆಂಗಳೂರು: ರಾಜ್ಯ ಸರ್ಕಾರ ಉನ್ನತ ನ್ಯಾಯಾಲಯದ ನಿರ್ದೇಶನದ ಅನ್ವಯ, ಅತಿಥಿ ಉಪನ್ಯಾಸಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ “ಶೈಕ್ಷಣಿಕ ಸಂಯೋಜಕ” ಎಂಬ ವಿಶೇಷ ಯೋಜನೆಯನ್ನು 2026-27ನೇ ಶೈಕ್ಷಣಿಕ ಸಾಲಿನಿಂದ ಜಾರಿಗೊಳಿಸಲು ತೀರ್ಮಾನಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಹೇಳಿದ್ದಾರೆ.
- ಸಚಿವ ಎಂ.ಬಿ. ಪಾಟೀಲರಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಎಂಬಿಬಿಎಸ್ ಶಿಕ್ಷಣಕ್ಕೆ ಆರ್ಥಿಕ ನೆರವು
- ಅಪ್ಪನಿಗೆ ಔಷಧಿ ತರಲು ಹೋದ ಮಗ ಮರಳಲೇ ಇಲ್ಲ
- ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಮೋದಿ ಸರ್ಕಾರ ಬೆಲೆಯೇರಿಕೆ ಮಾಡತೊಡಗಿದೆ: ಸಿದ್ದರಾಮಯ್ಯ
- ಬಿಜೆಪಿ ಮುುಕ್ತ ದಕ್ಷಿಣ ಭಾರತ ಆಗಲಿದೆ: ಬಿ.ಕೆ. ಹರಿಪ್ರಸಾದ್
- ಬುದ್ಧನಿಂದ ಆರಂಭವಾದ ಶ್ರಮಿಕರ ಹೋರಾಟದ ಬದುಕು ಇನ್ನೂ ಕೊನೆಗೊಂಡಿಲ್ಲ: ಡಾ. ಸತೀಶ ನಾಯ್ಕ
ಈ ಯೋಜನೆಯಡಿ, ಕನಿಷ್ಠ 5 ವರ್ಷ ಸೇವಾ ಅನುಭವ ಹೊಂದಿರುವ ಹಾಗೂ UGC ಅರ್ಹತೆ ಹೊಂದಿರದ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಶೈಕ್ಷಣಿಕ ಸಂಯೋಜಕರಾಗಿ ನೇಮಿಸಲಾಗುವುದು. ಇದರಿಂದ ಸುಮಾರು 3853 ಉಪನ್ಯಾಸಕರಿಗೆ ಪ್ರಯೋಜನವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶೈಕ್ಷಣಿಕ ಸಂಯೋಜಕರು ಕಾಲೇಜುಗಳಲ್ಲಿ ಪ್ರಯೋಗಾಲಯ, ಗ್ರಂಥಾಲಯ, ಐಟಿ, ಪರೀಕ್ಷಾ ಕಾರ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ ಎಂದಿದ್ದಾರೆ.
ಈ ಯೋಜನೆ ಅತಿಥಿ ಉಪನ್ಯಾಸಕರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸುವುದರ ಜೊತೆಗೆ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.



