ಸರ್ಕಾರಿ ಶಾಲೆಯಲ್ಲಿ ಅಥವಾ ಸಾಮಾನ್ಯ ಶಾಲೆಗಳಲ್ಲಿ ಓದುವ ಮಕ್ಕಳನ್ನು ಟ್ಯೂಷನ್ ಗಳಿಗೆ ಕಳಿಸುವುದು ಸಾಮಾನ್ಯವಾಗಿರುತ್ತದೆ. ಮಕ್ಕಳಿಗೆ ಇಲ್ಲಿ ಸರಿಯಾಗಿ ಶಿಕ್ಷಣದ ವ್ಯವಸ್ಥೆ ಇರುವುದಿಲ್ಲ. ಆ ಕಾರಣದಿಂದ ಟ್ಯೂಷನ್ ಗಳಿಗೆ ಕಳಿಸಬೇಕು ಎಂಬ ಅಭಿಪ್ರಾಯ ಬಹಳಷ್ಟು ಪೋಷಕರದಾಗಿದೆ. ಆದರೆ ಪ್ರತಿಷ್ಠಿತ ಶಾಲೆಗಳು ಎಂದು ಹಣೆಪಟ್ಟಿಯನ್ನು ಹೊತ್ತವರು, ಜೊತೆಗೆ ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ಪೋಷಕರಿಂದ ಪಡೆದುಕೊಂಡವರು, ಸಹ ಮಕ್ಕಳನ್ನು ತಮ್ಮ ಸಂಸ್ಥೆಯಲ್ಲಿಯೇ ಹೊಂದಾಣಿಕೆಯೊಂದಿಗೆ ಇಟ್ಟುಕೊಂಡಿರುವ ಖಾಸಗಿ ಟ್ಯೂಷನ್ ಸಂಸ್ಥೆಗಳಿಗೆ ಮಕ್ಕಳು ಕಡ್ಡಾಯವಾಗಿ ಸೇರಿಕೊಂಡು ಮತ್ತಷ್ಟು ಪಾಠವನ್ನು ಹೇಳಿಸಿಕೊಳ್ಳಬೇಕೆಂದು ಪೋಷಕರಲ್ಲಿ ಕಟ್ಟುನಿಟ್ಟು ಅಲ್ಲದಿದ್ದರೂ, ಒಂದು ರೀತಿಯ ಮನಸ್ಥಿತಿಯನ್ನ ನಿರ್ಮಾಣ ಮಾಡಿ ಅಂತಿಮವಾಗಿ ಅವರಲ್ಲಿ ಹಣ ಇಲ್ಲದಿದ್ದರೂ, ಮಕ್ಕಳ ಭವಿಷ್ಯದ ದೃಷ್ಟಿ ಎನ್ನುವ ಒಂದು ಕಾರಣದಿಂದ ಸಾಲ ಮಾಡಿ ದೊಡ್ಡ, ದೊಡ್ಡ ಹೆಸರಿನ ವಿಶೇಷ ಶಿಕ್ಷಣ ನೀಡುವ ಟ್ಯೂಷನ್ ಸಂಸ್ಥೆಗಳಿಗೆ ಸೇರಲೇಬೇಕಾಗುತ್ತದೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಮುಂದೆ ಮಕ್ಕಳು ಎಸ್ ಎಸ್ ಎಲ್ ಸಿ ಯಲ್ಲಿ ಪಿಯುಸಿಯಲ್ಲಿ ಸಿಇಟಿ ಮತ್ತು ನೀಟ್ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಪಡೆದುಕೊಂಡರೆ ಈ ಮಕ್ಕಳ ಭಾವಚಿತ್ರಗಳನ್ನು ಈ ಶಾಲೆಯ ಮುಂದೆ ಹಾಕಿಕೊಂಡು ಸಂಭ್ರಮಿಸುತ್ತಾರೆ. ಆದರೆ ಈ ಮಕ್ಕಳು ಇಷ್ಟೆಲ್ಲ ಸಾಧನೆ ಮಾಡಲು ಅವರ ತಂದೆ ತಾಯಿ ಸಾಲ ಮಾಡಿ ಖಾಸಗಿ ಟ್ಯೂಷನ್ ಸಂಸ್ಥೆಗಳಿಗೆ ಸೇರಿಸಿರುವುದು ಇವರಿಗೆ ಮರೆತೆ ಹೋಗಿರುತ್ತದೆ.
ಲಕ್ಷಾಂತರ ರೂಪಾಯಿ ಶುಲ್ಕವನ್ನು ಪಡೆದುಕೊಂಡು ಪ್ರತಿಷ್ಠಿತ ಶಾಲೆಗಳು ಎಂದು ಹಣೆಪಟ್ಟಿಯನ್ನ ಹೊತ್ತವರ ಶಾಲೆಯಲ್ಲಿಯೂ ಮಕ್ಕಳು ಟ್ಯೂಷನ್ ಗಳಿಗೆ ಹೋಗಬೇಕು ಎನ್ನುವುದಾದರೆ ಇನ್ನು ಇವರು ಹೇಳಿಕೊಟ್ಟು ಉದ್ಧಾರ ಮಾಡುವುದಾದರೂ ಏನು? ಇನ್ನು ಮಕ್ಕಳಿಗೆ ತಂದೆ ತಾಯಿಯ ಒತ್ತಡ ಶಾಲೆಯಲ್ಲಿ ಒತ್ತಡ ಟ್ಯೂಷನ್ ಸಂಸ್ಥೆಗಳಿಂದ ಒತ್ತಡ ಒಟ್ಟಾರೆಯಾಗಿ ಶಾಲೆಯವರ, ಪೋಷಕರ ಸಂತೋಷಕ್ಕಾಗಿ ಈ ಮಕ್ಕಳು ಅನುಭವಿಸುವ ಹಿಂಸೆ ಹೇಳತೀರದು.
ಪ್ರತಿಷ್ಠಿತ ಶಾಲೆಗಳಲ್ಲಿ ಓದುವ ಮಕ್ಕಳ ಪೋಷಕರು ವಿದ್ಯಾವಂತರಾಗಿರುತ್ತಾರೆ. ಜೊತೆಗೆ ದೊಡ್ಡ ಮೊತ್ತದ ಸಂಬಳ ಪಡೆಯುವ ನೌಕರರು ಆಗಿರುತ್ತಾರೆ. ಸ್ವತಹ ಪೋಷಕರು ವಿದ್ಯಾವಂತರಾಗಿ ಪ್ರತಿಷ್ಠಿತ ಶಾಲೆಗೂ ಮಕ್ಕಳನ್ನು ಸೇರಿಸಿ ಜೊತೆಗೆ ಟ್ಯೂಷನ್ ಸೇರಿಸಿ ಹೆಚ್ಚಿನ ಅಂಕ ಪಡೆಯುವುದು ಸಾಧನೆ ಎಂಬ ರೀತಿಯಲ್ಲಿ ಶಾಲೆಯವರು ಬಿಂಬಿಸಿಕೊಳ್ಳುವಾಗ ಅವರಿಗೆ ಸ್ವಲ್ಪ ಆತ್ಮ ಸಾಕ್ಷಿ ಚುಚ್ಚುವುದಿಲ್ಲವೇ?
ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಹೊರಗಿನ ಟ್ಯೂಷನ್ ಸಂಸ್ಥೆಗಳು ಇಲ್ಲಿನ ಶಿಕ್ಷಣ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಣವುಳ್ಳ ಮಕ್ಕಳಿಗೆ ವಿಶೇಷ ತರಬೇತಿ ತರಗತಿಗಳನ್ನು ನಡೆಸುತ್ತಾರೆ. ಇವುಗಳು ಮಕ್ಕಳ ಮೇಲು ಒತ್ತಡವಾಗುತ್ತದೆ. ಜೊತೆಗೆ ಒಂದೇ ಶಾಲೆಯಲ್ಲಿ ಭೇದಭಾವದ ಶಿಕ್ಷಣ ವ್ಯವಸ್ಥೆಯು ರಾಜಾರೋಷವಾಗಿ ನಡೆಯುತ್ತಿರುವುದು ಸಹ ಯಾರು ಗಮನಿಸುತ್ತಿಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




