ಕಾಡ್ಗಿಚ್ಚು ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಿ

4 months ago

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹ

ಬೆಂಗಳೂರು: ಹಲವು ವರ್ಷಗಳಿಂದ ಫೆಬ್ರವರಿ, ಮಾರ್ಚಿ, ಏಪ್ರಿಲ್ ವೇಳೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿ ಕಾಡಿನಲ್ಲಿ ಬೆಂಕಿ ಅವಗಡಗಳು ಹೆಚ್ಚುತ್ತಿದ್ದು ಅರಣ್ಯ ಇಲಾಖೆ ಸೂಕ್ಷ್ಮವಾಗಿ ಪರಿಗಣಿಸಿ ಅಪಾಯಗಳು ಹೆಚ್ಚಾಗದಂತೆ  ಮುನ್ನೆಚ್ಚರಿಕಾ  ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಾಲತೇಶ್ ಅರಸ್ ಆಗ್ರಹಿಸಿದ್ದಾರೆ.

ಈ ವಿಷಯದ ಕುರಿತು ಕಳೆದ ವರ್ಷ ಪತ್ರನೀಡಿ  ಅರಣ್ಯ ಮತ್ತು ವನ್ಯಜೀವಿ ವಿಭಾಗದ ಅಧಿಕಾರಿಗಳು ಹಾಗೂ ಪರಿಸರವಾದಿಗಳ ಜೊತೆ ಸಭೆ ನಡೆಸಲು ಮನವಿ ಮಾಡಲಾಗಿತ್ತು.‌  ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ಕಾಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ನಾಡಿನ ಕಡೆ ಬರುತ್ತವೆ.‌ ಈ ಹಿನ್ನೆಲೆಯಲ್ಲಿ ಮಾನವ ವನ್ಯಜೀವಿ ಸಂಘರ್ಷಗಳು ಹೆಚ್ವಾಗುತ್ತಿವೆ. ಈ ರೀತಿಯಲ್ಲಿ ಆಗದಂತೆಯೂ ಎಚ್ಚರ ವಹಿಸಬೇಕಿದೆ. 2025 ರ ಸಾಲಿನಲ್ಲಿ  ಹೆಚ್ಚಾಗಿ ಕಾಡಿನಲ್ಲಿ ಬೆಂಕಿ ಅವಗಡ ಮತ್ತು ವನ್ಯಜೀವಿ ಸಂಘರ್ಷ, ವನ್ಯಜೀವಿ ಸಾವುಗಳು ನಡೆದಿದ್ದು ಸೂಕ್ತ ಕ್ರಮವಕೈಗಿಲೊಳ್ಳಬೇಕೆಂದು  ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು  ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಗೆ ಮನವಿ ಮಾಡಿದ್ದಾರೆ.

Leave a Reply