ಮಂಗಳೂರು: ಮಹಿಳೆಯರು ಸಮಾಜದಲ್ಲಿ ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಬೇಕು. ಮೌಢ್ಯತೆಯನ್ನು ಬಿತ್ತುವ ವಿಚಾರಕ್ಕೆ ಕಿವಿಕೊಡಬಾರದು. ವಿಜ್ಞಾನದಿಂದ ಮನುಷ್ಯರ ರೋಗಕ್ಕೆ ಆವಿಷ್ಕಾರ ಮಾಡಿ ರೋಗ ನಿವಾರಣೆಗೆ ಪರಿಹಾರ ಕಂಡುಹಿಡಿದರೆ ಹೊರತು ಯಾವುದೇ ಪವಾಡದಿಂದ ಯಾವುದೇ ರೋಗ ಪರಿಹಾರವಾಗಿಲ್ಲ ಎಂದು ಖ್ಯಾತ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮಂಗಳೂರು ವಿಕಾಸದಲ್ಲಿ ಜನವಾದಿ ಮಹಿಳಾ ಸಂಘಟನೆ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ “ಮಹಿಳೆಯರು ಮತ್ತು ವೈಜ್ಣಾನಿಕ ಮನೋಭಾವ” ಎಂಬ ವಿಚಾರ ಸಂಕೀರ್ಣದಲ್ಲಿ ಮಾತಾಡಿದರು.
ಜ್ಯೋತಿಷ್ಯದಿಂದ ಇತರರ ಕಷ್ಟಕ್ಕೆ ದಾರಿ ತೋರಿಸುವವರು ತಮಗೆ ಪರಿಹಾರಕ್ಕೆ ವಿಜ್ಞಾನದ ಮೊರೆ ಹೋಗುತ್ತಾರೆ. ಒಟ್ಟಾರೆ ಜ್ಯೋತಿಷ್ಯ ಜನರನ್ನು ಮೋಸ ಮಾಡುವ ಒಂದು ದಂಧೆಯಾಗಿದೆ ಎಂದರು.
ಮಹಿಳೆಯರು ಮೌಢ್ಯ ಮತ್ತು ಮೂಢನಂಬಿಕೆಯಿಂದ ಹೊರಬಂದಾಗ ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಂಡಾಗ ನಾವು ಅಭಿವೃದ್ಧಿಯಾಗಲು ಸಾಧ್ಯ ಎಂಬುದನ್ನು ಅವರು ವಿವರಿಸಿದರು.
ವಿಜ್ಞಾನವು ಸಮಾಜದ ಪ್ರಗತಿಯ ಅಭಿವೃದ್ಧಿಯ ಸಂಕೇತವಾಗಿದೆ. ಶಿಕ್ಷಣವು ಪದವಿ ಪಡೆಯಲು ಮಾತ್ರವಲ್ಲ, ನಮ್ಮಲ್ಲಿ ವಿಮರ್ಶೆ ಮತ್ತು ಆಲೋಚನಾ ಮಟ್ಟ ಎತ್ತರಿಸಲು ದಾರಿಯಾಗಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಜೆ.ಎಂ.ಎಸ್. ಜಿಲ್ಲಾಧ್ಯಕ್ಷ ಕಿರಣಪ್ರಭ ವಹಿಸಿದ್ದರು. ಮೊದಲಿಗೆ ಜೆ.ಎಂ.ಎಸ್. ಜಿಲ್ಲಾ ಕಾರ್ಯದರ್ಶಿ ಪ್ರಮಿಳಾ ಶಕ್ತಿನಗರ ಸ್ವಾಗತಿಸಿದರು. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ವಿಚಾರ ಸಂಕೀರ್ಣದ ಸದುಪಯೋಗಪಡಿಸಿಕೊಂಡರು.
ಜೆ.ಎಂ.ಎಸ್. ಮುಖಂಡರಾದ ಮಾಧುರಿ ಬೋಳಾರ್, ಕುಮಾರಿ, ಅಸುಂತ, ಸಾಹಿತಿ ಗೀತಾ ಸುರತ್ಕಲ್, ಕಾರ್ಮಿಕ ಮುಖಂಡರುಗಳಾದ ಜಯಂತಿ ಬಿ ಶೆಟ್ಟಿ, ಲೋಲಾಕ್ಷಿ, ಭಾರತಿ ಬೋಳಾರ , ಜಯಶ್ರಿ, ಯೋಗೀಶ್ ಜಪ್ಪಿನಮೊಗರು, ದಲಿತ ಮುಖಂಡರಾದ ಕೃಷ್ಣ ತಣ್ಣರುಭಾವಿ, ತೈಯೂಬ್ ಮೊದಲಾದ ಡಿ.ವೈ.ಎಫ್. ಐ., ಎಸ್.ಎಫ್.ಐ. ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.






