‘ಕೇಸರಿಯಾ’ ಹಾಡಿನ ಮನೋಜ್ಞ ನಿರೂಪಣೆಯಿಂದ ಹೃದಯಗಳಿಗೆ ಮತ್ತೊಮ್ಮೆ ಲಗ್ಗೆ ಇಟ್ಟಿದ್ದಾರೆ
ಮಲಯಾಳಂ ನಟಿ ಪ್ರಿಯಾ ವಾರಿಯರ್ ಬಾಲಿವುಡ್ ಚಲನಚಿತ್ರ ಬ್ರಹ್ಮಾಸ್ತ್ರದ ‘ಕೇಸರಿಯಾ’ ಹಾಡಿನ ಮನೋಜ್ಞ ನಿರೂಪಣೆಯೊಂದಿಗೆ ಕಣ್ಣು ಹೊಡೆಯುವುದಕ್ಕಿಂತ ಹೆಚ್ಚು ಎಂದು ಸಾಬೀತುಮಾಡಿದ್ದಾರೆ.
2019ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರದ ‘ಒರು ಅಡಾರ್ ಲವ್’ ಟೀಸರ್ ಬಿಡುಗಡೆಯೊಂದಿಗೆ ಪ್ರಿಯಾ ರಾತ್ರೋರಾತ್ರಿ ಜನಪ್ರಿಯರಾದರು. ಟೀಸರ್‌ನಲ್ಲಿ ಕಣ್ಣು ಮಿಟುಕಿಸುವ ಆ ಒಂದು ದೃಶ್ಯ ವೈರಲ್ ಆದ ನಂತರ ಪ್ರಿಯಾ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವನ್ನು ನೀಡಿತು.
ಪ್ರಿಯಾ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ಕಳೆದ ತಿಂಗಳು ಬಿಡುಗಡೆಯಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಜನಪ್ರಿಯ ಟ್ರ್ಯಾಕ್ ‘ಕೇಸರಿಯಾ’ ಹಾಡಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಪ್ರಿಯಾ ಎರಡು ವರ್ಷಗಳ ಹಿಂದೆ ಮಲಯಾಳಂ ಚಲನಚಿತ್ರ ‘ಫೈನಲ್ಸ್’ ಚಿತ್ರಕ್ಕಾಗಿ ನರೇಶ್ ಅಯ್ಯರ್ ಅವರೊಂದಿಗೆ ಯುಗಳ ಗೀತೆಯನ್ನು ಹಾಡಿದ್ದರು. ಈ ಮೂಲಕ ತಮ್ಮ ಗಾಯನ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದರು.
ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಇತ್ತೀಚಿನ ವೈರಲ್ ವೀಡಿಯೊದೊಂದಿಗೆ, ಅವರು ಹಿಂದಿ ಸಾಹಿತ್ಯದೊಂದಿಗೆ ಅಷ್ಟೇ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅವರ ಪೋಸ್ಟ್ ವ್ಯಕ್ತವಾಗಿರುವ ಪ್ರತಿಕ್ರಿಯೆಗಳಲ್ಲಿ ಬಹುತೇಕ ಅವರನ್ನು ಬೆಂಬಲಿಸಿದ್ದಾರೆ.




