ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ 

4 years ago

ಬೆಂಗಳೂರು: ದಿನಾಂಕ 06/06/2022 ರಂದು ನಾನು ತಮಗೆ ಪತ್ರ ಬರೆದು ನೂತನವಾಗಿ ಮರುವಿಂಗಡಣಿ ಆಗಿರುವ ಬಿ.ಬಿ.ಎಂ.ಪಿಯ ವಾರ್ಡ್ ಒಂದಕ್ಕೆ ಪವರ್ ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್‌ರವರ ಹೆಸರರನ್ನು ಇಡಬೇಕೆಂದು ತಮಗೆ ಮನವಿ ಮಾಡಿಕೊಂಡಿದ್ದೆ.

ತಾವು ಮನವಿಗೆ ಸ್ಪಂದಿಸಿ ಬಿ.ಬಿ.ಎಂ.ಪಿ ವ್ಯಾಪ್ತಿಯ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.55ಕ್ಕೆ ಮರು ವಿಂಗಡಣೆ ಮತ್ತು ಮರು ನಾಮಕರಣ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್‌ರವರ ಹೆಸರನ್ನು ಇಟ್ಟರುವುದಕ್ಕೆ ನಿಮಗೆ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಇದರಿಂದಾಗಿ ಪುನೀತ್ ರಾಜ್‌ಕುಮಾರ್‌ರವರ ಹೆಸರು ಶಾಶ್ವತವಾಗಿ ಉಳಿದಂತಾಗಿದೆ. ತಾವು ಕೂಡ ಡಾ. ರಾಜ್ ಕುಟುಂಬದ ಅತ್ಯಂತ ನಿಕಟ ಸ್ನೇಹಿತರಾಗಿ ಮತ್ತು ಅಭಿಮಾನಿಯಾಗಿ ಪುನೀತ್ ರಾಜ್‌ಕುಮಾರ್ ಹೆಸರನ್ನು ವಾರ್ಡ್‌ಗೆ ಇಟ್ಟು ಅವರ ಕುಟುಂಬಕ್ಕೆ ಗೌರವವನ್ನು ಸಲ್ಲಿಸಿದೀರಿ, ಪುನೀತ್ ರಾಜ್‌ಕುಮಾರ್ ಹೆಸರನ್ನು ಇಡುವುದರ ಮುಖಾಂತರ ಕೋಟ್ಯಾಂತರ ಚಿತ್ರ ರಸಿಕರ ಮನಸನ್ನು ಗೆದ್ದಿದೀರಿ. ಮತ್ತೊಮ್ಮೆ ತಮಗೆ ಅನಂತ ಅನಂತ ಧನ್ಯವಾದಗಳು ಮತ್ತು ಅಭಿನಂದನೆಗಳು.

– ಭಾಗ್ಯವತಿ ಅಮರೇಶ್, ಅರಣ್ಯ ಅಭಿವೃದ್ಧಿ ನಿಗಮ ನಿರ್ದೇಶಕಿ

Leave a Reply