ರಾಜ್ಯದ ನೂತನ ಮಾಹಿತಿ ಹಕ್ಕು ಆಯುಕ್ತರ ನೇಮಕಾತಿ ಪಾರದರ್ಶಕವಾಗಿದೆ.
ಹಲವಾರು ಕಾಲದಿಂದ ಖಾಲಿ ಇದ್ದಂತಹ ಕರ್ನಾಟಕ ರಾಜ್ಯದ ಮಾಹಿತಿ ಹಕ್ಕು ಆಯೋಗದ ಆಯುಕ್ತರುಗಳ ನೇಮಕವನ್ನು ಕರ್ನಾಟಕ ರಾಜ್ಯ ಸರ್ಕಾರ ಪಾರದರ್ಶಕವಾಗಿ ಮಾಡುವುದರ ಮೂಲಕ ಸಂಸ್ಥೆಯ ಗೌರವವನ್ನು ಎತ್ತಿ ಹಿಡಿದಿದೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಆಡಳಿತಾತ್ಮಕ ವಿಭಾಗದಿಂದ, ಮಾಧ್ಯಮದ ವಿಭಾಗದಿಂದ, ಮತ್ತು ಕಾನೂನಿನ ವಿಭಾಗದಿಂದ ಒಬ್ಬೊಬ್ಬರನ್ನು ಆಯ್ಕೆ ಮಾಡಿ ಸರ್ಕಾರ ಆದೇಶವನ್ನು ಹೊರಡಿಸಿದೆ.
ಆಯ್ಕೆ ಪ್ರಕ್ರಿಯೆಯು ಸಹ ಪಾರದರ್ಶಕವಾಗಿ ನಡೆದಿರುತ್ತದೆ. ವಿಧಾನಪರಿಷತ್ತಿನ ಸಭಾಪತಿ, ವಿಧಾನಸಭೆಯ ಸಭಾಧ್ಯಕ್ಷರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಎರಡು ಸದನದ ವಿರೋಧ ಪಕ್ಷದ ನಾಯಕರು, ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಇವರುಗಳನ್ನು ಒಳಗೊಂಡಂತಹ ಸಮಿತಿಯಲ್ಲಿ ಚರ್ಚಿಸಿ ಅಂತಿಮವಾದಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿರುತ್ತಾರೆ.
ಇಲ್ಲಿ ಅವರ ಸಾಧನೆ, ಅನುಭವ, ವಿದ್ಯೆ, ಇವುಗಳನ್ನು ಮಾನದಂಡವನ್ನಾಗಿ ಪರಿಗಣಿಸಿರುತ್ತಾರೆ. ಇವರುಗಳ ಆಯ್ಕೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅನ್ಯ ವಿಚಾರಗಳು ಪ್ರಮುಖ ಕಾರಣಗಳಾಗಲು ಸಾಧ್ಯವಾಗಿರುವುದಿಲ್ಲ.
ರಿಚರ್ಡ್ ವಿನ್ಸನ್ ಡಿಸೋಜಾ, ಡಾ. ಮಹೇಶ್ ವಾಲೆಕರ್, ಮತ್ತು ಡಾ. ವೆಂಕಟ ಸಿಂಗ್ ಇವರನ್ನು ಮಾಹಿತಿ ಹಕ್ಕು ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಕೆಲವು ವ್ಯಕ್ತಿಗಳು ಅನಾವಶ್ಯಕವಾದ ವಿಚಾರ, ಅಪಸ್ವರಗಳನ್ನು ಆಯ್ಕೆಯ ವಿಧಾನದಲ್ಲಿ ಪ್ರಸ್ತಾಪಿಸಿರುವುದು ಸರಿಯಲ್ಲ.
ರಾಜ್ಯ ಸರ್ಕಾರ ಮಾಹಿತಿ ಹಕ್ಕು ಆಯುಕ್ತರ ನೇಮಕಾತಿಯಲ್ಲಿ ಅನಾವಶ್ಯಕವಾದ ವಿಚಾರಗಳನ್ನು ಮತ್ತು ಸಂಬಂಧವಿಲ್ಲದ ವ್ಯಕ್ತಿಗಳ ಹೆಸರುಗಳನ್ನು ಕೆಲವರು ಪ್ರಸ್ತಾಪವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿರುತ್ತಾರೆ. ಇಂಥವರ ಮೇಲೆ ಸರ್ಕಾರ ಕ್ರಮ ಜರುಗಿಸಬೇಕು.
– ಕೆ ಎಸ್ ನಾಗರಾಜ್, ಬೆಂಗಳೂರು




