ಮಾನ್ಯ ಗೃಹ ಸಚಿವರು ಬೆಂಗಳೂರು ನಗರದ ಶಾಲೆಗಳು ಮತ್ತು ಕಾಲೇಜಿನ ಬಳಿಯಲ್ಲಿ ಪೊಲೀಸರ ಗಸ್ತು ಹೆಚ್ಚು ಮಾಡಿಸಿ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಬೆಂಗಳೂರು ನಗರದಲ್ಲಿ ಶಾಲಾ ಮತ್ತು ಕಾಲೇಜ್ ವಿದ್ಯಾರ್ಥಿನಿಗಳು ಮತ್ತು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಪ್ರತಿದಿನವೂ ಹಿಂಸೆ ಮತ್ತು ಕೊಲೆ ಪ್ರಕರಣಗಳು ದಾಖಲಾಗುತ್ತಿವೆ.
ಬೆಂಗಳೂರು ನಗರದ ಶಾಲೆಗಳು ಮತ್ತು ಕಾಲೇಜಿನ ಬಳಿಯಲ್ಲಿ ವಿದ್ಯಾರ್ಥಿಗಳು ಅಲ್ಲದ ಅನೇಕರು ದ್ವಿಚಕ್ರ ವಾಹನ ಆಟೋರಿಕ್ಷಾ ಗಳು ಮತ್ತು ಕಾರುಗಳಲ್ಲಿ ಇಲ್ಲಿ ಸದಾ ಕಾಲ ಅಡ್ಡ ಹಾಕಿರುತ್ತಾರೆ. ಇಲ್ಲಿ ಬರುವ ವಿದ್ಯಾರ್ಥಿನಿಯರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಾರೆ ಅವರನ್ನು ಕಿರುಕುಳ ನೀಡಿ ಪ್ರೀತಿ ಪ್ರೇಮ ಎಂಬ ವಿಚಾರಗಳಲ್ಲಿ ಘರ್ಷಣೆಗಳನ್ನು ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾನ್ಯ ಗೃಹ ಸಚಿವರು ಬೆಂಗಳೂರು ನಗರದ ಆಯುಕ್ತರಿಗೆ ಸೂಕ್ತ ಆದೇಶವನ್ನು ನೀಡಿ ಶಾಲೆಗಳು ಮತ್ತು ಕಾಲೇಜಿನ ಬಳಿಯಲ್ಲಿ ಪೊಲೀಸರ ಗಮನವನ್ನು ಹೆಚ್ಚಾಗಿ ಹರಿಸುವಂತೆ ಮಾಡಬೇಕು ಜೊತೆಗೆ ಇಲ್ಲಿ ಅನಾವಶ್ಯಕವಾಗಿ ಹೊರಗಿನ ಜನಗಳು ಸೇರುವುದನ್ನ ಮತ್ತು ವಾಹನಗಳಲ್ಲಿ ಅಲ್ಲಿ ಹಲವಾರು ತಾಸುಗಳ ಕಾಲ ನಿಲ್ಲುವುದನ್ನು ಗಮನಿಸಿ ಅವರುಗಳ ಮೇಲೆ ಕಾನೂನಿನ ಕ್ರಮವನ್ನ ಜರುಗಿಸಬೇಕು.
ದಾರಿ ತಪ್ಪಿದ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳ ಕುಟುಂಬದ ಸದಸ್ಯರಿಗೆ ಮಾಹಿತಿಯನ್ನು ನೀಡಬೇಕು. ವಾತಾವರಣವನ್ನು ಹಾಳು ಮಾಡುವ ಸಮಾಜಘಾತಕ ವ್ಯಕ್ತಿಗಳಿಗೆ ಎಚ್ಚರಿಕೆಯನ್ನು ನೀಡಬೇಕು. ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳಿಸಬೇಕಾದರೆ ಪೋಷಕರು ಹೆದರುವ ಸ್ಥಿತಿಗೆ ಬಂದಿದೆ.
ಶಾಲಾ ಕಾಲೇಜು ಆಡಳಿತ ಮಂಡಳಿಯವರು ಸಹ ತಮ್ಮ ಕಟ್ಟಡಗಳ ಬಳಿಯಲ್ಲಿ ಹೊರಗಿನ ಜನರು ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡಬೇಕು.
– ಕೆ ಎಸ್ ನಾಗರಾಜ್, ಬೆಂಗಳೂರು




