ಪ್ಯಾಕೇಜ್ ಮಾದರಿಯಲ್ಲಿ ಟೆಂಡರ್ ಕರೆದರೆ ಸ್ಥಳೀಯ ಗುತ್ತಿದಾರರು ನಿರುದ್ಯೋಗಿಗಳಾಗುತ್ತಾರೆ

4 years ago

ಬೆಂಗಳೂರು: ರಾಜ್ಯದಲ್ಲಿ 30 ಸಾವಿರ ವಿದ್ಯುತ್ ಗುತ್ತಿಗೆದಾರರು ಅದನ್ನ ನಂಬಿಕೊಂಡ 10ಲಕ್ಷ ಉದ್ಯೋಗಿಗಳು ಜೀವನ ನಡೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ರಾಜ್ಯಾಧ್ಯಕ್ಷ ಸಿ.ರಮೇಶ್ ಹೇಳಿದರು.

ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಮಾವೇಶ ಮತ್ತು ಅಭಿನಂದನಾ ಕಾರ್ಯಕ್ರಮ ಕುರಿತು ಮಾತಾಡಿದ ಅವರು, ವಿದ್ಯುತ್ ಸಂಪರ್ಕ ಪಡೆಯಲು ದೃಢ ನಿರ್ಧಾರದಿಂದ ಕಟ್ಟಡ ಮತ್ತು ಗೃಹ ನಿರ್ಮಾಣಕ್ಕೆ ವಾಸದೃಡೀಕರಣ ಪತ್ರ ಅವಶ್ಯವಾಗಿ ಕೊಡಬೇಕಾಗಿತ್ತು. ಆದರೆ ಇಂದು ಮಧ್ಯಮವರ್ಗದ ಜನರ ಸಂಕಷ್ಟವನ್ನು ದೂರ ಮಾಡಲು ವಾಸದೃಡೀಕರಣ ಪತ್ರವನ್ನು ರದ್ದು ಮಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು, ಇಂಧನ ಸಚಿವ ಸುನೀಲ್ ಕುಮಾರ್ ನಮ್ಮ ಸಂಘದ ವತಿಯಿಂದ ಅಭಿನಂದನೆಗಳು ಎಂದರು.

ಕೆ.ಇ.ಆರ್.ಸಿ. ಆದೇಶದಿಂದ ವಿದ್ಯುತ್ ಕಾಮಗಾರಿಗಳು 1 ಲಕ್ಷದಿಂದ 5 ಲಕ್ಷದ ಕಾಮಗಾರಿಗಳಿಗೆ ಒಂದೊಂದು ಕಂಪನಿಯಲ್ಲಿ ಒಂದೊಂದು ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡಿರುತ್ತಾರೆ. ಪ್ಯಾಕೇಜ್ ಮಾದರಿಯಲ್ಲಿ ಟೆಂಡರ್ ಕರೆದರೆ ಸ್ಥಳೀಯ ಗುತ್ತಿದಾರರು ನಿರುದ್ಯೋಗಿಗಳಾಗಿದ್ದಾರೆ. ಇದರ ಬಗ್ಗೆ ಸೂಕ್ತವಾಗಿ ಗಮನಿಸಿ ಮಾರ್ಪಾಡು ಮಾಡಬೇಕು ವಿದ್ಯುತ್ ಗುತ್ತಿಗೆದಾರರನ್ನ ಉಳಿಸಬೇಕು. ಸರ್ಕಾರದ ಆದೇಶವನ್ನು ಪಾಲಿಸದೇ 1 ಮತ್ತು 5 ಲಕ್ಷ ಕಾಮಗಾರಿ ನೀಡದೆ ಒಟ್ಟುಗೂಡಿಸಿ ಟೆಂಡರ್ ಮಾಡುತ್ತಿದ್ದಾರೆ. ಇದರಿಂದ ಸಣ್ಣ ಗುತ್ತಿಗೆದಾರರು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದರು.

ಬೆಳಕು ಯೋಜನೆಯನ್ನ ವಿದ್ಯುತ್ ಗುತ್ತಿಗೆದಾರರು ಬೇಗನೆ ಕೆಲಸ ಮುಗಿಸಿರುತ್ತಾರೆ. ಈ ಯೋಜನೆಯಲ್ಲಿ ಉಪಯೋಗಿಸಿರುವ ಸಾಮಗ್ರಿಗಳ ಹಾಗೂ ಕಾಮಗಾರಿಯ ವೆಚ್ಚ ನೀವು ನಿಗದಿಪಡಿಸಿರುವ ವೆಚ್ಚಕ್ಕಿಂತ ಹೆಚ್ಚಾಗುತ್ತದೆ. ಬೆಸ್ಕಾಂ ಮಾರುಕಟ್ಟೆ ಸಾಮಾಗ್ರಿಗಳ ವೆಚ್ಚವನ್ನು ವಿಚಾರಿಸಿ ಕೂಲಿ ಲೇಬರ್ ವೆಚ್ಚವನ್ನು 5140 ರೂಪಾಯಿ ನಿಗದಿ ಪಡಿಸಿರುತ್ತಾರೆ. ಇದೇ ಬೆಲೆಯನ್ನ ಉಳಿದ ಎಲ್ಲಾ ಕಂಪನಿಗಳಲ್ಲೂ  ನಿಗದಿಪಡಿಸುವಂತೆ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಶತಮಾನೋತ್ಸವ ಸಂಭ್ರಮದಲ್ಲಿದೆ. ಇದೇ ತಿಂಗಳು 17ನೇ ತಾರೀಖು ಭಾನುವಾರ ವಿದ್ಯುತ್ ಗುತ್ತಿಗೆದಾರರ ಸಮಾವೇಶ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು, ಇಂಧನ ಸಚಿವ ಸುನೀಲ್ ಕುಮಾರ್ ರವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದರು.

Leave a Reply