ಬೆಂಗಳೂರು: ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಅವರ ಹೆಸರಿನಲ್ಲಿ ಫೇಸ್ ಬುಕ್ ಖಾತೆಗಳನ್ನು ತೆರೆದು ಪೀಠೋಪಕರಣ ಮಾರಾಟದ ಹೆಸರಿನಲ್ಲಿ ಅವರ ಆಪ್ತರನ್ನು ವಂಚಿಸಲಾಗಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿರುವ ಮಣಿವಣ್ಣನ್ ಅವರ ಹೆಸರಿನಲ್ಲಿ ಒಂದಲ್ಲ, ಎರಡಲ್ಲ, ನಾಲ್ಕಕ್ಕೂ ಹೆಚ್ಚು ಫೇಸ್ ಬುಕ್ ನಕಲಿ ಖಾತೆಯನ್ನು ತೆರೆದಿರುವ ವಂಚಕರು ಎಲ್ಲ ಖಾತೆಗಳಲ್ಲಿ ಮಣಿವಣ್ಣನ್ ಅವರ ಹೆಸರು, ಪೋಟೋ ಬಳಸಿದ್ದಾರೆ.
ಈ ಖಾತೆಗಳಿಂದ ಮಣಿವಣ್ಣನ್ ಹೆಸರಿನಲ್ಲಿ ಅವರ ಆಪ್ತರಿಗೆ, ಸ್ನೇಹಿತರಿಗೆ ಮೆಸೇಜ್ ಮಾಡಿದ್ದಾರೆ. ನಮ್ಮ ಸ್ನೇಹಿತರು ಸಿಆರ್ ಪಿಎಫ್ ನಲ್ಲಿ ಕೆಲಸ ಮಾಡುತ್ತಿದ್ದು, ಅವರ ವರ್ಗಾವಣೆ ಆಗುತ್ತಿದೆ. ಹೀಗಾಗಿ ಅವರ ಮನೆಯ ಫರ್ನಿಚರ್ ಮಾರಾಟ ಮಾಡಬೇಕೆಂದಿದ್ದಾರೆ. ನಾನು ಒಮ್ಮೆ ನೋಡಿದ್ದೇನೆ ಅವುಗಳು ಅತ್ಯುತ್ತಮವಾಗಿವೆ. ನಿಮಗೆ ಬೇಕಾದರೆ ನೀವು ಖರೀದಿಸಬಹುದು ಎಂದು ತರಾವರಿ ಮೆಸೇಜ್ ಗಳನ್ನು ಕಳುಹಿಸಿದ್ದಾರೆ.
ನಿಮ್ಮ ನಂಬರ್ ಕಳುಹಿಸಿ ನನ್ನ ಸ್ನೇಹಿತರೇ ನಿಮಗೆ ಕರೆ ಮಾಡುತ್ತಾರೆ ಎಂದು ನಂಬಿಸಿ ಇಲ್ಲಿಯವರೆಗೂ ಇಬ್ಬರು ವ್ಯಕ್ತಿಗಳಿಗೆ ಮೋಸ ಮಾಡಿದ್ದಾರೆ. ಈ ಕುರಿತು ಕೇಸ್ ದಾಖಲಿಸಿಕೊಂಡ ಸೈಬರ್ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಇದು ಇತ್ತೀಚಿಗೆ ನಡೆದ ಘಟನೆಯಾದರೂ ಮಣಿವಣ್ಣನ್ ಇಂತದ್ದೇ ಸಮಸ್ಯೆ ಮುಂಚೆಯೂ ಎದುರಿಸಿದ್ದಾರೆ. ಕಳೆದ 9 ತಿಂಗಳಿನಲ್ಲಿ ಇದು 2 ನೇ ಪ್ರಕರಣವಾಗಿದ್ದು, ಮೊದಲನೇ ಪ್ರಕರಣ 9 ತಿಂಗಳ ಹಿಂದೆಯೇ ಪೊಲೀಸರ ಗಮನಕ್ಕೆ ಬಂದಿತ್ತು. 9 ತಿಂಗಳ ಹಿಂದೆಯೂ ಖದೀಮರು ಹೀಗೆಯೇ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದರು.
ಬೆಂಗಳೂರು ಸೆಂಟ್ರಲ್ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ ಐಆರ್ ದಾಖಲು ಮಾಡಲಾಗಿತ್ತು. ಆದರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಂದ ಯಾವ ಕ್ರಮವೂ ಆಗಿರಲಿಲ್ಲ. ಆಗ ಕೇಸ್ ಆಗುತ್ತಿದ್ದಂತೆ ಅಕೌಂಟ್ ಡಿಆ್ಯಕ್ಟಿವೇಟ್ ಮಾಡಿದ್ದ ವಂಚಕರು ಈಗ ಮತ್ತೆ ಅದೇ ಹಾದಿ ಹಿಡಿದಿದ್ದಾರೆ. ಆರೋಪಿಗಳ ಪತ್ತೆ ಮಾಡಿ ಅಕೌಂಟ್ ಡಿಆ್ಯಕ್ಟಿವೇಟ್ ಮಾಡುವಂತೆ ಪೊಲೀಸರಲ್ಲಿ ಮಣಿವಣ್ಣನ್ ಮನವಿಮಾಡಿದ್ದಾರೆ.




