ಮತದಾರ ಪಟ್ಟಿಗೆ ಆಧಾರ್ ಜೋಡಣೆ ಅಕ್ರಮ ತಡೆಗೆ ರಾಮಬಾಣ
ಬಿಜೆಪಿಯವರು ಚುನಾವಣಾ ಆಯೋಗದ ವಕ್ತಾರರಂತೆ ಮಾತನಾಡುತ್ತಿರುವುದು ಯಾಕೋ?
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಚುನಾವಣೆಯ ಮತದಾರ ಪಟ್ಟಿಯಲ್ಲಿನ ಅಕ್ರಮಗಳು ಮತ್ತು ಚುನಾವಣೆಯ ದಿನದಂದು ಮತಗಟ್ಟೆಗಳಲ್ಲಿ ನಡೆಯುವ ಪಕ್ಷಪಾತವಾದ ನಡವಳಿಕೆಗಳ ಬಗ್ಗೆ ಧ್ವನಿ ತೆಗೆದು ದೇಶದಲ್ಲಿ ಮತದಾರ ಪಟ್ಟಿ ಮತ್ತು ಚುನಾವಣೆಯ ಪ್ರಕ್ರಿಯೆಗಳ ಬಗ್ಗೆ ಮರು ಚಿಂತನೆ ಮಾಡುವಂತೆ ಮಾಡಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರಾಹುಲ್ ಗಾಂಧಿ ಅವರು ತಪ್ಪುಗಳನ್ನ ತೋರಿಸಿರುವುದು ಚುನಾವಣಾ ಆಯೋಗದ ಮೇಲೆ. ಇದಕ್ಕೆ ಚುನಾವಣಾ ಆಯೋಗ ಬೇಕಾದಂತಹ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ, ಬಿಜೆಪಿಯವರು ಚುನಾವಣಾ ಆಯೋಗದ ವಕ್ತಾರರಂತೆ ಮಾತನಾಡುತ್ತಿರುವುದು ಯಾಕೋ ಅರ್ಥವಾಗುತ್ತಿಲ್ಲ.
ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಆಧಾರ್ ಕಾರ್ಡನ್ನು ಮತದಾರ ಪಟ್ಟಿಗೆ ಲಿಂಕ್ ಮಾಡಿದರೆ ಆ ಕ್ಷಣದಿಂದಲೇ ಹಲವು ಕಡೆ ಮತದಾರ ಪಟ್ಟಿಯಲ್ಲಿ ಹೆಸರಿರುವ ಮತದಾರರ ಹೆಸರು ಮಾಯವಾಗುತ್ತದೆ. ಮತ್ತು ಒಬ್ಬ ಮತದಾರ ಒಂದು ಕಡೆಯಲ್ಲಿ ಮಾತ್ರ ಒಂದು ರಾಜ್ಯದಲ್ಲಿ ಮತ ಚಲಾಯಿಸಲು ಸಾಧ್ಯವಾಗುತ್ತದೆ. ನಕಲಿ ಮತದಾನಕ್ಕೆ ಕಡಿವಾಣ ಬೀಳುತ್ತದೆ.
ಇದೇ ಸಂದರ್ಭದಲ್ಲಿ ಚುನಾವಣೆಗಳನ್ನ 50 ರಿಂದ 100 ದಿನಗಳ ಕಾಲ ನಡೆಸುವುದು ಸರಿಯಾದ ಮಾರ್ಗವಲ್ಲ. ಇದರಿಂದ ಸಂಪನ್ಮೂಲಗಳು ಹೆಚ್ಚು ಇರುವ ಪಕ್ಷಗಳಿಗೆ ಮತ್ತು ವಿಶೇಷವಾಗಿ ಆಡಳಿತವಿರುವ ಪಕ್ಷಗಳಿಗೆ ಅನುಕೂಲವಾಗುತ್ತದೆ. ಬೇರೆ ಪಕ್ಷದವರಿಗೆ ಇದು ಸಾಧ್ಯವಾಗುವುದಿಲ್ಲ.
ಸುದೀರ್ಘವಾದ ಚುನಾವಣಾ ಪ್ರಕ್ರಿಯೆಗಳು ಹಲವಾರು ರೀತಿಯ ಪರಿಣಾಮಗಳನ್ನು ಬೀರುತ್ತವೆ. ಪ್ರತಿದಿನವೂ ಪ್ರತಿಕ್ಷಣವೂ ದೇಶ ಮತ್ತು ರಾಜ್ಯಗಳಲ್ಲಿ ಒಂದಲ್ಲ ಒಂದು ಘಟನಾವಳಿಗಳು ಸಂಭವಿಸುತ್ತಿರುತ್ತವೆ. ಇಲ್ಲವೇ ಇಂತಹ ಘಟನೆಗಳನ್ನು ಸೃಷ್ಟಿ ಮಾಡಲಾಗುತ್ತದೆ. ಇವುಗಳು ಜಾತಿ, ಮತ, ಧರ್ಮ ಇವುಗಳ ಮೇಲೆ ಪ್ರಭಾವ ಬೀರುತ್ತವೆ. ಈ ಹಿನ್ನೆಲೆಯಲ್ಲಿ ಚುನಾವಣೆಯ ಫಲಿತಾಂಶದ ದಿಕ್ಕು ಬದಲಾಗುತ್ತದೆ.
ಆಡಳಿತದಲ್ಲಿರುವ ಪಕ್ಷದವರಿಗೆ ಸುದೀರ್ಘವಾದ ಚುನಾವಣಾ ಪ್ರಚಾರದ ವ್ಯವಸ್ಥೆಯಿಂದ ಹೆಚ್ಚು ಅನುಕೂಲವಾಗುತ್ತದೆ. ಯಾವುದೋ ಒಂದು ರಾಜ್ಯದ ಒಂದು ಭಾಗದಲ್ಲಿ ಆಗುವಂತಹ ಆಡಳಿತಾತ್ಮಕ ಕ್ರಿಯೆಗಳು ಅನೇಕ ಭಾಗದ ಮೇಲೆ ಪರಿಣಾಮ ಬೀರುತ್ತದೆ.
ದೀರ್ಘವಾದ ಚುನಾವಣಾ ಪ್ರಚಾರದ ಪದ್ಧತಿಯಿಂದ ಹಣವು ಹೆಚ್ಚು ಖರ್ಚಾಗುತ್ತದೆ. ಜೊತೆಗೆ ಮತದಾರರ ಅಭಿಪ್ರಾಯಗಳು ಕಾಯುವಂತಾಗುತ್ತದೆ. ತಾಂತ್ರಿಕ ಜ್ಞಾನವನ್ನು ಬಳಸಿಕೊಂಡು ಮತಪೆಟ್ಟಿಗೆಗಳ ಮೇಲೆ ಅಡ್ಡ ಪರಿಣಾಮವನ್ನು ಬೀರದೆ ಇರಲು ಸಾಧ್ಯವಿಲ್ಲ.
ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ರಾಜ್ಯ ಮತ್ತು ಕೇಂದ್ರದ ಸಚಿವರು ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಪ್ರಧಾನ ಮಂತ್ರಿಗಳು ಪ್ರಚಾರಕ್ಕೆ ಭಾಗವಹಿಸದಂತೆ ನೀತಿಯನ್ನು ರೂಪಿಸಬೇಕು. ಇದರಿಂದ ಎಲ್ಲ ಚುನಾವಣೆಗಳಲ್ಲೂ ಇವರೇ ಪ್ರಮುಖ ಪ್ರಚಾರಕರಾದರೆ ಚುನಾವಣೆಯ ಮೇಲೆ ಪರಿಣಾಮ ಹೆಚ್ಚು ಬೀರುತ್ತದೆ. ಇದು ಒಳ್ಳೆಯ ಬೆಳವಣಿಗೆಯು ಅಲ್ಲ. ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯ ಆಡಳಿತಕ್ಕೆ ಸ್ಥಳೀಯ ನಾಯಕರೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಾಗ ಅಧಿಕಾರ ವಿಕೇಂದ್ರೀಕರಣದ ಮಹತ್ವ ಕಾಪಾಡಿದಂತಾಗುತ್ತದೆ.
ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಸರ್ವ ಪಕ್ಷದ ಸಭೆಯನ್ನ ಕರೆದು ಕಾನೂನು ಪಂಡಿತರು, ಸಂವಿಧಾನದ ತಜ್ಞರ ಅಭಿಪ್ರಾಯಗಳನ್ನ ಕ್ರೂಢೀಕರಿಸಿ ಒಂದಷ್ಟು ಸುಧಾರಣೆಗಳನ್ನ ತರಬೇಕೆಂದು, ಆ ಮೂಲಕ ಆರೋಪಗಳಿಗೆ ಮುಕ್ತರಾಗಿ ಚುನಾವಣಾ ಆಯೋಗ ಮತ್ತೆ ತನ್ನ ಘನತೆಯನ್ನು ಉಳಿಸಿಕೊಳ್ಳಲಿ.
– ಕೆ ಎಸ್ ನಾಗರಾಜ್, ಬೆಂಗಳೂರು




