ಶ್ರೀರಾಮ ಸೇನೆ ನಿಷೇಧಕ್ಕೆ ಮನವಿ
ಸನ್ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ
ಮಾನ್ಯರೇ,
ಕಳೆದ ಎರಡೂವರೆ ದಶಕಗಳ ಹಿಂದೆ ಹುಬ್ಬಳ್ಳಿ ನಗರದಲ್ಲಿ ಅಸ್ತಿತ್ವಕ್ಕೆ ಬಂದ ಶ್ರೀರಾಮ ಸೇನೆ ಎಂಬ ಧಾರ್ಮಿಕ ಭಯೋತ್ಪಾದನೆಯ ಸಂಘಟನೆಯ ಮೇಲೆ ಕೂಡಲೇ ಕರ್ನಾಟಕದಲ್ಲಿ ಸಂಪೂರ್ಣ ನಿಷೇಧ ಹೇರಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮೂಲದವನಾದ ಪ್ರಮೋದ್ ಮುತಾಲಿಕ್ ಎಂಬ ಈ ಧಾರ್ಮಿಕ ಭಯೋತ್ಪಾದಕ, ಹೆತ್ತ ತಂದೆ ತಾಯಿಗಳಿಗೆ ಅನ್ನ ಹಾಕಲಾಗದೆ, ಮನೆಯಿಂದ ಹೊರಬಿದ್ದವನು. ಬಾಯಿಯನ್ನು ಬಂಡವಾಳ ಮಾಡಿಕೊಂಡು, ಕ್ರೈಸ್ತರು ಮತ್ತು ಮುಸ್ಲಿಮರ ಮೇಲೆ ಕೆಂಡ ಕಾರುವುದನ್ನು ವೃತ್ತಿ ಮಾಡಿಕೊಂಡಿರುವ ಈ ಅಯೋಗ್ಯ, ಹುಬ್ಬಳ್ಳಿ ನಗರದ ಸಿದ್ಧಾರೂಢ ಮಠ ಸಮೀಪದ ಆನಂದನಗರದಲ್ಲಿ ಒಂಟಿಯಾಗಿ ವಾಸವಾಗಿದ್ದಾನೆ.
ಹಿಂದೂ ಧರ್ಮದ ಬಗ್ಗೆ ಮಾತನಾಡುವ ಈ ಅಯೋಗ್ಯನಿಗೆ ಸಂಸಾರ, ಕುಟುಂಬ ಯಾವುದೂ ಇಲ್ಲ. ಒಂದು ರೀತಿಯಲ್ಲಿ ಭಿಕ್ಷಾನ್ನದ ಗಿರಾಕಿ. ಈತ ಸಂಘಟಿಸಿರುವ ಶ್ರೀರಾಮ ಸೇನೆ ಸಂಘಟನೆಯಲ್ಲಿ ಇರುವ ವ್ಯಕ್ತಿಗಳೆಲ್ಲಾ ಬಹುಪಾಲು ಕ್ರಿಮಿನಲ್ ಹಿನ್ನೆಲೆ ಇರುವವರು. ರಾಜ್ಯಾದ್ಯಂತ ಇದ್ದ ಕಿಸೆಗಳ್ಳರು, ಮನೆಗಳ್ಳರು ಮತ್ತು ಪುಡಿ ರೌಡಿಗಳು ಈಗ ಶ್ರೀರಾಮ ಸೇನೆಯ ಕಾರ್ಯಕರ್ತರಾಗಿ ಹೊಸ ಜನ್ಮ ಎತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಳ್ಳಿಯೊಂದರ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಮುಸ್ಲಿಂ ಸಮುದಾಯದ ವ್ಯಕ್ತಿ ಎಂಬ ಕಾರಣಕ್ಕೆ ಮಕ್ಕಳು ಕುಡಿಯುವ ನೀರಿಗೆ ವಿಷ ಬೆರೆಸಿದ ಶ್ರೀರಾಮ ಸಂಘಟನೆಯ ಕಿಡಿಗೇಡಿಗಳನ್ನು ನಿನ್ನೆ ಅಲ್ಲಿನ ಪೊಲೀಸರು ಬಂಧಿಸಿ, ಮಕ್ಕಳ ಜೀವ ಉಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗ್ರಾಮವೊಂದರಲ್ಲಿ ಇಂತಹದ್ದೇ ಘಟನೆ ಸಂಭವಿಸಿದ್ದು, ಬಿಸಿಯೂಟ ತಯಾರಿಸುವ ಸಿಬ್ಬಂದಿಯ ಎಚ್ಚರಿಕೆಯ ಪರಿಣಾಮ ಮಕ್ಕಳ ಪ್ರಾಣ ಉಳಿದಿದೆ. ಅಪರಾಧಿಗಳು ಪತ್ತೆಯಾಗಿಲ್ಲ. ಈ ಘಟನೆಯ ಹಿಂದೆ ಶ್ರೀರಾಮ ಸೇನೆ ಕಾರ್ಯಕರ್ತರ ಕೈವಾಡ ಇರುವುದನ್ನು ತಳ್ಳಿ ಹಾಕುವಂತಿಲ್ಲ.
ಹದಿನೇಳು ವರ್ಷದ ಹಿಂದೆ ಗದಗ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಬೆಟಗೇರಿ ಪುರಸಭೆಯ ಮುಖ್ಯ ಧ್ವಜ ಸ್ಥಂಭಕ್ಕೆ ಮಧ್ಯರಾತ್ರಿಯ ವೇಳೆ ಪಾಕಿಸ್ತಾನದ ಧ್ವಜ ಹಾರಿಸಿದ್ದ ಈ ಸಂಘಟನೆಯ ಕ್ರಿಮಿನಲ್ ಗಳು ಮರುದಿನ ಬೆಳಿಗ್ಗೆ ದೊಡ್ಡ ಗಲಾಟೆ ಎಬ್ಬಿಸಿದ್ದರು. ನಂತರ ಶ್ರೀರಾಮ ಸೇನೆ ಸಂಘಟನೆಯ ಸದಸ್ಯರೇ ಧ್ವಜ ಹಾರಿಸಿದ್ದ ಪ್ರಕರಣವು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿತು.
ಸಮಾಜದ ಶಾಂತಿ ಕದಡುವುದನ್ನೇ ಸಂಘಟನೆಯ ಮುಖ್ಯ ಗುರಿಯಾಗಿರಿಸಿಕೊಂಡಿರುವ ಶ್ರೀರಾಮ ಸೇನೆಯನ್ನು ಶಾಶ್ವತವಾಗಿ ಕರ್ನಾಟಕದಲ್ಲಿ ನಿಷೇಧ ಹೇರಬೇಕಿದೆ. ಹುಬ್ಬಳ್ಳಿ ನಗರ ಸೇರಿದಂತೆ, ಬೆಳಗಾವಿ ಮತ್ತು ಗದಗ ಜಿಲ್ಲೆಯಲ್ಲಿ ಮುತಾಲಿಕ್ ಶಿಷ್ಯರು ಅಪಾರ ಪ್ರಮಾಣದಲ್ಲಿ ಇದ್ದು, ಇವರೆಲ್ಲರ ಕ್ರಿಮಿನಲ್ ಪ್ರಕರಣಗಳಿಗೆ ನಾನು ಉದಯ ಟಿ.ವಿ.ಯ ಉತ್ತರ ಕರ್ನಾಟಕದ ಪ್ರಾದೇಶಿಕ ಕಚೇರಿಯ ಮುಖ್ಯಸ್ಥನಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದಾಗ ಸಾಕ್ಷಿಯಾಗಿದ್ದೆ.
ಹುಬ್ಬಳ್ಳಿ ನಗರದ ಇಂಡಿ ಪಂಪ್ ಬಳಿ ಇರುವ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ, ದುರ್ಗದ ಬೈಲ್ ಸಮೀಪ ಇರುವ ಪಟ್ಟಣ ಪೋಲೀಸ್ ಠಾಣೆ, ಸೆಟ್ಲ್ ಮೆಂಟ್ ಪ್ರದೇಶದ ಬೆಂಡಿಗೇರಿ ಠಾಣೆ ಮತ್ತು ಜವಳಿ ಸಾಲ್ ಬಳಿ ಇರುವ ಘಂಟಿಕೇರಿ ಠಾಣೆಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಶ್ರೀರಾಮ ಸೇನೆಯ ಕಾರ್ಯಕರ್ತರ ವಿರುದ್ಧ ದಾಖಲಾಗಿವೆ.
ಸಂಘಟನೆಗೆ ನಿಷೇಧ ಹೇರುವುದರ ಜೊತೆಗೆ ರಾಷ್ಟ್ರೀಯ ಅಧ್ಯಕ್ಷ ಎಂದು ಸ್ವಯಂ ಘೋಷಿಸಿಕೊಂಡಿರುವ ಪ್ರಮೋದ್ ಮುತಾಲಿಕ್ ಎಂಬ ವಿಷ ಜಂತುವಿಗೆ ಹುಬ್ಬಳ್ಳಿ ನಗರದಿಂದ ಹೊರ ಹೋಗದಂತೆ ನಿಷೇಧ ಹೇರಬೇಕಿದೆ. ಇತ್ತೀಚೆಗೆ ಈತ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಕ್ರಿಯಾಶೀಲನಾಗಿದ್ದಾನೆ. ಶ್ರೀರಾಮ ಸೇನೆಯ ನಿಷೇಧದ ಜೊತೆಗೆ ಸಂಘಟನೆಯ ಕಾರ್ಯಕರ್ತರೆಂಬ ಕ್ರಿಮಿನಲ್ ಗಳ ವಿವರ, ಇತಿಹಾಸವನ್ನು ಪೂರ್ಣವಾಗಿ ಕಲೆ ಹಾಕುವಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡುವಂತೆ ಈ ಮೂಲಕ ಕೋರುತ್ತೇನೆ.
ಕರ್ನಾಟಕದಲ್ಲಿ ಜಾತಿ ಅಥವಾ ಧರ್ಮದ ಹೆಸರಿನಲ್ಲಿ ಶಾಂತಿ ಕದಡುವ ಪ್ರಕಣಗಳು ನಿರಂತರವಾಗಿ ನಡೆಯುತ್ತಿದ್ದು, ನಿಮ್ಮ ಸಹೋದ್ಯೋಗಿ ಹಾಗೂ ಗೃಹ ಖಾತೆ ಸಚಿವರ ನಿಷ್ಕ್ರಿಯತೆ ಕೂಡಾ ಇಂತಹ ಘಟನೆಗಳಿಗೆ ಪರೋಕ್ಷವಾಗಿ ಕಾರಣವಾಗಿದೆ.
– ಎನ್.ಜಗದೀಶ್ ಕೊಪ್ಪ, ಮೈಸೂರು




