ಪ್ರಮೋದ್ ಮುತಾಲಿಕ್ ಎಂಬ ಹುಸಿ ಈರಾದಿ ಈರನ ಕಥೆ

3 years ago

ಸ್ವಯಂ ಘೋಷಿತ ಅಖಿಲ ಭಾರತ ಹಿಂದೂ ಸಂಘಟನೆಯ ಅಧ್ಯಕ್ಷ ಹಾಗೂ ನಲವತ್ತು ಮಂದಿ ಸದಸ್ಯರು ಇರುವ ಶ್ರೀರಾಮ ಸೇನೆ ಎಂಬ ಕಪಿಸೇನೆಯ ಮುಖ್ಯಸ್ಥ ಮುತಾಲಿಕ್ ಹೊಸ ಬಾಂಬ್ ಸಿಡಿಸಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹುಬ್ಬಳ್ಳಿ- ಧಾರವಾಡ ಮಂದಿಗೆ ಮುತಾಲಿಕನ ಬಾಂಬುಗಳು ಎಂದರೆ ಮನುಷ್ಯರ ಹೂಸಿಗೆ ಸಮನಾದವು. ಏಕೆಂದರೆ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಇಪ್ಪತ್ತನಾಲ್ಕು ಮಂದಿ ಉಗ್ರ ಹಿಂದೂವಾದಿಗಳನ್ನು ನಿಲ್ಲಿಸುತ್ತೇನೆ ಎಂದು ಹೇಳಿರುವ ಮಾತು ಅಲ್ಲಿನ ಮಂದಿಗೆ ಹೊಸ ಜೋಕ್‌ಅಷ್ಟೇ.

ಹುಬ್ಬಳ್ಳಿಯ ಸಿದ್ಧಾರೂಡ ಮಠ ಸಮೀಪದ ಆನಂದ ನಗರದಲ್ಲಿ ವಾಸವಾಗಿರುವ ಈತ ಎಷ್ಟು ಹೇಳಿದರೂ ನಗರ ಸಭೆ ಚುನಾವಣೆಗೆ ನಿಂತು ಗೆಲ್ಲಲಿಲ್ಲ. ಹತ್ತು ವರ್ಷಗಳ ಹಿಂದೆ ಅವಳಿ ನಗರಗಳ ಚುನಾವಣೆಗೆ ಹನ್ನೊಂದು ಮಂದಿ ಕಪಿಸೇನೆಯ ಅಭ್ಯರ್ಥಿಗಳನ್ನು ನಿಲ್ಲಿಸಿದ್ದನು. ಅಷ್ಟೂ ಮಂದಿ ಠೇವಣಿ ಕಳೆದುಕೊಂಡರು. ಈತನು ಸಹ ಎರಡು ಬಾರಿ ಲೋಕಸಭಾ ಚುನಾವಣೆಗೆ ನಿಂತು ಠೇವಣಿ ಕಳೆದುಕೊಂಡ ಗಿರಾಕಿ.

ರಾಮಸೇನೆ ಎಂಬ ಕಪಿಸೇನೆಯಲ್ಲಿ ಇರುವವರು ಎಂತಹ ಮಂದಿ ಎಂದರೆ, ಅವರು ಈತನ ಸೇನೆಗೆ ಸೇರಿದ ನಂತರ ಪೋಲಿಸರು ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಜೇಬುಗಳ್ಳರು ಮತ್ತು ಸೂಟ್ ಕೇಸ್ ಕಳ್ಳರಿದ್ದಾರೆ ಎಂಬ ಫಲಕ ಹಾಕುವುದನ್ನು ನಿಲ್ಲಿಸಿಬಿಟ್ಟರು.

ಗದಗ ಜಿಲ್ಲೆಯ ನವಲಗುಂದ ಅಥವಾ ಡಂಬಳ‌ಎಂದು ನೆನಪು. ಮಧ್ಯರಾತ್ರಿ ಪಾಕಿಸ್ತಾನದ ಬಾವುಟ ಹಾರಿಸಿ ಬೆಳಿಗ್ಯೆ ತಾವೇ ವೀರಾವೇಶದ ಪ್ರತಿಭಟನೆ ನಡೆಸಿದ್ದರು. ನಂತರ ಪೋಲಿಸರು ತನಿಖೆ ನಡೆಸಿ ಎಲ್ಲರನ್ನೂ ಒದ್ದು ಒಳಕ್ಕೆ ಹಾಕಿದ್ದರು.
ಇತ್ತೀಚಿಗೆ ಗುಲ್ಬರ್ಗ ದ ಅಧ್ಯಕ್ಷನೊಬ್ಬ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾನೆ. ಹತ್ತು ವರ್ಷದ ಹಿಂದೆ ಮಂಗಳೂರು ಪಬ್ ಒಂದರಲ್ಲಿ ಯುವತಿಯ ಮೇಲೆ ದಾಳಿ ಮಾಡಿದ ಪ್ರಕರಣದ ನಂತರ ಈತನನ್ನು ನಮ್ಮ ಮಾಧ್ಯಮಗಳು ನಾಯಕನನ್ನಾಗಿ ಬಿಂಬಿಸತೊಡಗಿದವು. ಆದರೆ, ಬಿ.ಜೆ.ಪಿ. ಪಕ್ಷವು ಈತನನ್ನು ಕಾಲಿನ ದೂಳಿಗೂ ಸಮನಲ್ಲ ಎಂದು ನಿರ್ಧರಿಸಿ ಎಷ್ಟೋ ವರ್ಷಗಳಾದವು.

ಹುಟ್ಟಿದ ಮನೆಗೆ ಮಗನಾಗಿ ಬದುಕಲಾರದೆ ಹೊರಬಂದ ಈತ ನಾಡಿಗೆ ನಾಯಕನಾಗಲು ಸಾಧ್ಯವೆ? ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಬಡ ಬ್ರಾಹ್ಮಣ‌ ದಂಪತಿಗಳಿಗೆ 1963 ರಲ್ಲಿ ಜನಿಸಿದ ಈತ ತನ್ನ ಹೊಟ್ಟೆಗೆ ಅನ್ನ ಹುಟ್ಟಿಸಿಕೊಳ್ಳಲಾರದ ಅಸಹಾಯಕ. ಇನ್ನು ಕಟ್ಟಿಕೊಂಡವಳಿಗೆ ಬದುಕು ಕೊಡಲು ಸಾಧ್ಯವೆ? ಹಾಗಾಗಿ ಬ್ರಹ್ಮಚಾರಿಯಾಗಿ ಉಳಿದಿರುವ ಈತನಿಗೆ ಮುಸ್ಲಿಂ ಸಮುದಾಯದ ವಿರುದ್ಧ ವಿಷಕಾರಿದರಷ್ಟೇ ಊಟ. ಈಗ ಈತನಿಗೆ ಉಡುಪಿಯ ಮಠ ಸೇರಿದಂತೆ ಹಲವು ಮಠಗಳು ಆರ್ಥಿಕ ಸಹಾಯ ನೀಡಿ ಜೀವಂತವಿಟ್ಟಿವೆ. ಬಾಲ್ಯದಲ್ಲಿ ಆರ್.ಎಸ್.ಎಸ್ ಸೇರಿ ನಂತರ ಭಜರಂಗದಳ ಸೇರಿದ್ದ. ಅಲ್ಲಿಂದ ಹೊರಹಾಕಿದ ನಂತರ, ಕರ್ನಾಟಕ ಶಿವಸೇನೆ ಕಟ್ಟಿದ. ನಂತರ ರಾಮಸೇನೆ ಸ್ಥಾಪಿಸಿ ಅಧ್ಯಕ್ಷನಾದನು.

ಕಳೆದ ವರ್ಷ ಬೆಳಗಾವಿಯ ಸಂಸದರಾಗಿದ್ದ ಹಾಗೂ ಬಿ.ಜೆ.ಪಿ. ಪಕ್ಷದಲ್ಲಿ ಇದ್ದರೂ ಅತ್ಯಂತ ಸಜ್ಜನರಾಗಿದ್ದ ಸುರೇಶ್ ಅಂಗಡಿ ನಿಧನರಾದಾಗ, ನಡೆದ ಉಪಚುನಾವಣೆಗೆ ನನಗೆ ಸೀಟು ಕೊಡಿ ಎಂದು ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಶಿಯವರ ಬಳಿ ಅಂಗಲಾಚಿ ಬೇಡಿಕೊಂಡಿದ್ದ ಆದರೆ ಅವರು ಕ್ಯಾರೆ ಎನ್ನಲಿಲ್ಕ.

ಸುರೇಶ್ ಅಂಗಡಿ ನನ್ನ ಆತ್ಮೀಯ ಮಿತ್ರರಾಗಿದ್ದ ಎಂ.ಪಿ. ಪ್ರಕಾಶ್ ಅವರಿಂದ ಪ್ರಭಾವಿತರಾಗಿದ್ದರು. ಸಿಮೆಂಟ್ ವ್ಯಾಪಾರ ಮಾಡಿಕೊಂಡಿದ್ದ ಅವರ ಮನೆಗೆ ಪ್ರಕಾಶ್ ಬೆಳಗಾವಿ ನಗರಕ್ಕೆ ಬಂದಾಗಲೆಲ್ಲಾ ಹೋಗಿ ಬೆಳಗಿನ ತಿಂಡಿ ಮತ್ತು ರಾತ್ರಿಯ ಊಟ ಅಲ್ಲಿಯೇ ಮಾಡುತ್ತಿದ್ದರು. ನನಗೆ ಎಂ.ಪಿ.ಪ್ರಕಾಶ್ ಮೂಲಕ ಸುರೇಶ್ ಅಂಗಡಿ ಪರಿಚಿತರಾಗಿದ್ದರು. ಕೊನೆಗೆ ಅವರ ಪತ್ನಿ ಮಂಗಳಾ ಅವರಿಗೆ ಸೀಟ್ ನೀಡಲಾಯಿತು. ಸುರೇಶ್ ಅವರ ಪುತ್ರಿಯನ್ನು ಜಗದೀಶ್ ಶೆಟ್ಟರ್ ತಮ್ಮ ಪುತ್ರನಿಗೆ ತಂದುಕೊಂಡು ಸೊಸೆ ಮಾಡಿಕೊಂಡಿದ್ದಾರೆ.

ಮುತಾಲಿಕ್ ನಾನು ಬೆಳಗಾವಿ ಜಿಲ್ಲೆಯವನು ನಲವತ್ತು ವರ್ಷ ಹೋರಾಡಿದ್ದೀನಿ ಎಂದು ಜಗದೀಶ್ ಶೆಟ್ಟರ್ ಗೆ ಬೆನ್ನು ಬಿದ್ದಿದ್ದ. ಇದರಿಂದ ಗಾಬರಿಯಾಗಿ ನಾನು ಶೆಟ್ಟರ್ ಗೆ ಫೋನ್ ಮಾಡಿದಾಗ ಜೋರಾಗಿ ನಕ್ಕುಬಿಟ್ಟರು. ಎಲ್ಲಾದರೂ ಉಂಟಾ ಜಗದೀಶ್? ಎಂದು ನನ್ನನ್ನೇ ಪ್ರಶ್ನಿಸಿದ್ದರು.

ಸುಮಾರು ಅರೇಳು ವರ್ಷದ ಹಿಂದೆ ಕಚೇರಿ ಕೆಲಸದ ಮೇಲೆ ಹುಬ್ಬಳ್ಳಿಯಿಂದ ಬೆಂಗಳೂರಿನ ಉದಯ ಟಿ.ವಿ. ಆಫೀಸ್ ಗೆ ಬಂದಿದ್ದ ನಾನು ಆನಂದರಾವ್ ಸರ್ಕಲ್ ನಲ್ಲಿರುವ ಹೋಟೆಲ್ ದ್ವಾರಕದಲ್ಲಿ ರೂಂ ಮಾಡಿದ್ದೆ. ರಾತ್ರಿ ಒಂಬತ್ತು ಗಂಟೆಯ ಸಮಯದಲ್ಲಿ ನಾನು ಊಟ ಮಾಡಿ ಕೊಠಡಿಯತ್ತ ಹೋಗುವಾಗ, ಮುತಾಲಿಕ್ ಕೊಠಡಿ ಖಾಲಿ ಮಾಡಿ ಹುಬ್ಬಳ್ಳಿ ಗೆ ಹೊರಟಿದ್ದ. ಆತನಿಗೆ ಗನ್ ಹಿಡಿದ ಪೊಲೀಸ್ ಒಬ್ಬ ಅಂಗರಕ್ಷಕನಾಗಿ ಇರುವುದು ನೋಡಿ ನನಗೆ ಆಶ್ಚರ್ಯವಾಗಿತ್ತು.

ನನಗೆ ಆತ ಒಳ್ಳೆಯ ಪರಿಚಯ. ಹಾಗಾಗಿ ಏನ್ರಿ ಇದು? ಎಂದು ಪಶ್ನಿಸಿದೆ. ಹೌದು ಸರ್ ನನಗೆ ಪಾಕ್ ಉಗ್ರರಿಂದ ಜೀವ ಭಯ ಇರುವುದರಿಂದ ಸರ್ಕಾರ ರಕ್ಷಣೆ ಒದಗಿಸಿದೆ ಎಂದು ನುಡಿದ. ನನಗೆ ನಗು ತಡೆಲಾಗಲಿಲ್ಲ. ಪೊಲೀಸ್ ನನ್ನು ಸ್ವಲ್ಪ ದೂರ ಕಳಿಸಿ ಮುತಾಲಿಕ್ ಕಿವಿಯಲ್ಲಿ ಹೇಳಿದೆ.
ನಮ್ಮ ಮಂಡ್ಯ ಕಡೆ ನರಿ ಎಂಬ ಪ್ರಾಣಿಯು ತೀರಾ ಬಡಕಲು‌ ಪ್ರಾಣಿ. ಅದರಲ್ಲಿ ಕುರಿ ಮೇಕೆಗಳಂತೆ ಮಾಂಸ ಖಂಡಗಳು ಇರುವುದಿಲ್ಲ. ಹಾಗಾಗಿ ನರಿ ಹೊಡೆದರೆ ಬರೀ ಹೇಲು ಅಂತಾ ಗಾದೆ ಇದೆ ಎಂದು ಹೇಳಿ ನಿಮ್ಮನ್ನು ಯಾರು ಹೊಡೆಯುತ್ತಾರೆ? ನಿಮ್ಮಂತಹವರು ಇದ್ದರೆ ನಮಗೆ ಮನರಂಜನೆ ಕಣ್ರಿ ಎಂದೆ.
ಆತ ಜೋರಾಗಿ ನಕ್ಕಿ ಹೋಗಿಸಾರ್ ಎನ್ನುತ್ತಾ ಹೊರಟು ಹೋದ.
ನನಗೆ ಆತನ ಕುರಿತಾಗಿ ಒಂದಿಷ್ಟು ಸಿಟ್ಟು, ಬೇಸರವಾಗುವುದಿಲ್ಲ‌. ಏಕೆಂದರೆ ಹಾದಿ ತಪ್ಪಿದ ಮಗ ಇರುವುದು ಹಾಗೇ ಅಲ್ಲವೆ?

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

(ಫೇಸ್‌ಬುಕ್‌ ಬರಹ)

Leave a Reply