ಇಂದಿರಾ ಗಾಂಧಿ ಅವರ ವಿರುದ್ಧದ ಅಪಪ್ರಚಾರಕ್ಕೆ ಬಿಜೆಪಿಯವರ ಹತಾಶೆ ಕಾರಣ

11 months ago

ಪಹಲ್ಗಾಂ ಪ್ರಕರಣ ಸಂಭವಿಸಿದ ನಂತರ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಕೈಗೊಂಡಂತಹ ಕ್ರಮಗಳ ಬಗ್ಗೆ ಮತ್ತು ಅಮೆರಿಕದ ಅಧ್ಯಕ್ಷರ ಮಾತಿಗೆ ಒಪ್ಪಿ ಯುದ್ಧವನ್ನ ನಿಲ್ಲಿಸಿದ ವಿಚಾರದಲ್ಲಿ ಭಾರತ ದೇಶದ ಬಹುತೇಕ ಜನರಲ್ಲಿ ಅಸಮಾಧಾನ ಉಂಟಾಗಿತ್ತು. ಈ ಸಂದರ್ಭದಲ್ಲಿ ಬಹುತೇಕ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಮತಿ ಇಂದಿರಾಗಾಂಧಿರವರು 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆಸಿದಂತಹ ಯುದ್ಧ ಮತ್ತು ಪಾಕಿಸ್ತಾನಕ್ಕೆ ಕೊಟ್ಟಂತಹ ಪ್ರಬಲವಾದ ಪೆಟ್ಟು ಹಾಗೂ ಶ್ರೀಮತಿ ಇಂದಿರಾ ಗಾಂಧಿ ರವರ ಧೈರ್ಯ ಮತ್ತು ಸಾಹಸ ಪ್ರವೃತ್ತಿಯನ್ನು ,ಎದೆಗಾರಿಕೆಯನ್ನ ಮೋದಿ ರವರಿಗೆ ಹೋಲಿಸಿ ಲೇಖನಗಳನ್ನು ಮತ್ತು  ಟಿಪ್ಪಣಿಗಳನ್ನು ಪ್ರಕಟಿಸಿದರು.

ಇದ್ದಕ್ಕಿದ್ದ ಹಾಗೆ ಶ್ರೀಮತಿ ಇಂದಿರಾ ಗಾಂಧಿ ಮತ್ತು ಮೋದಿರವರನ್ನು ಜನರು ತುಲನೆ ಮಾಡಿ ಇಂದಿರಾ ಗಾಂಧಿರವರ ವಿಚಾರದಲ್ಲಿ ಹೆಚ್ಚಿನ ಅಭಿಮಾನವನ್ನು ವ್ಯಕ್ತಪಡಿಸಿದರು. ಇದರ ಹಿನ್ನೆಲೆಯಲ್ಲಿ ಬಿಜೆಪಿಯವರು ಮತ್ತು ಅವರ ಅಂಗ ಸಂಸ್ಥೆಯವರು ಇಂದಿರಾಗಾಂಧಿರವರ ವ್ಯಕ್ತಿತ್ವ ಮತ್ತು ವರ್ಚಸ್ಸಿಗೆ ಧಕ್ಕೆಯನ್ನು ಉಂಟುಮಾಡುವ ಸಲುವಾಗಿ ಇದ್ದಕ್ಕಿದ್ದ ಹಾಗೆ ಈ ವರ್ಷದ ತುರ್ತು ಪರಿಸ್ಥಿತಿಯ ಘೋಷಣೆಯ ದಿನವನ್ನು ಅತಿ ಹೆಚ್ಚು ವೈಭವೀಕರಿಸಿ, ಶ್ರೀಮತಿ ಇಂದಿರಾ ಗಾಂಧಿಯವರನ್ನು ಸರ್ವಾಧಿಕಾರಿ ಎನ್ನುವ ನಿಟ್ಟಿನಲ್ಲಿ ವ್ಯಂಗ್ಯ ಚಿತ್ರಗಳನ್ನು ಮತ್ತು ಬಿಜೆಪಿ ಅಂಗಸಂಸ್ಥೆವರಿಂದ ಅವರ ಪತ್ರಿಕೆಗಳಲ್ಲಿ ಅವರು ಒಪ್ಪುವ ದಿನ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಸಿದರು.

ಶ್ರೀಮತಿ ಇಂದಿರಾಗಾಂಧಿರವರನ್ನು ರಾಷ್ಟ್ರದ ಜನತೆ ಸಂಕಷ್ಟದ ಸಮಯದಲ್ಲಿ ಅವರು ಕೈಗೊಂಡ ದಿಟ್ಟ ಕ್ರಮಗಳ ಬಗ್ಗೆ ಪ್ರಶಂಸೆಯ ಮಾತುಗಳು ಬಿಜೆಪಿಯವರಿಗೆ ಹತಾಶೆಯನ್ನು ಉಂಟು ಮಾಡಿದೆ. ಈ ಕಾರಣದಿಂದ ಶ್ರೀಮತಿ ಇಂದಿರಾ ಗಾಂಧಿಯವರ ವಿರುದ್ಧ ಮುಗಿಬಿದ್ದಿದ್ದಾರೆ.

ಇಂದಿರಾ ಗಾಂಧಿರವರ ವಿಚಾರದಲ್ಲಿ ಎಷ್ಟೇ ಅಪಪ್ರಚಾರಗಳನ್ನು ಮಾಡಿದರು, ಅವರು ಜಾರಿಗೆ ತಂದಂತಹ ಉಳುವವನಿಗೆ ಭೂಮಿ ಮತ್ತು ಪಾಕಿಸ್ತಾನದ ವಿರುದ್ಧದ ಹೋರಾಟ, 20 ಅಂಶದ ಕಾರ್ಯಕ್ರಮಗಳು, ಹಸಿರು ಕ್ರಾಂತಿ ಯೋಜನೆ, ಬಾಹ್ಯಾಕಾಶ ಸಂಸ್ಥೆಯ ಸ್ಥಾಪನೆ,  ಮುಂತಾದಂತವುಗಳು ಜನರ ಮನಸ್ಸಿನಲ್ಲಿ ಸದಾ ಕಾಲ ಅಚ್ಚಳಿಯದೆ ಉಳಿದುಕೊಂಡಿರುತ್ತವೆ. ಬಿಜೆಪಿ ಮತ್ತು ಇವರ ಅಂಗ ಸಂಸ್ಥೆಗಳ ಅಪಪ್ರಚಾರಗಳು ಹೆಚ್ಚು ದಿನ ನಿಲ್ಲುವುದಿಲ್ಲ.

ಅಂದು ಘೋಷಿತವಾದ ತುರ್ತು ಪರಿಸ್ಥಿತಿ ಇತ್ತು. ಆದರೆ ಯಾರನ್ನು ರಾಷ್ಟ್ರ ದ್ರೋಹಿಗಳು ಎಂದು ಮೊಕದ್ದೊಮೆ ದಾಖಲಿಸಲಿಲ್ಲ. ಆದರೆ ಇಂದು ತುರ್ತು ಪರಿಸ್ಥಿತಿ ಇಲ್ಲ ,ಆದರೆ ಅದಕ್ಕಿಂತ ಭಿನ್ನವಾದ ಪರಿಸ್ಥಿತಿ ಇದೆ. ಪತ್ರಿಕಾ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ ಸಂಪೂರ್ಣವಾಗಿ ಹರಣವಾಗಿದೆ. ಸರ್ಕಾರದ ವಿರುದ್ಧ ಮಾತನಾಡುವವರಿಗೆ ದೇಶ ವಿರೋಧಿ ಪಟ್ಟ ಕಟ್ಟುವಂತಹ ಕಾನೂನಿನ ದುರ್ಬಳಕೆಯ ಕ್ರಮಗಳು ಮೇಲಿಂದ ಮೇಲೆ ಆಗುತ್ತಿವೆ. ಜೊತೆಗೆ ಸಂವಿಧಾನಾತ್ಮಕವಾದ ಸಂಸ್ಥೆಗಳು ಆಡಳಿತ ಪಕ್ಷದ ಕಪಿಮುಷ್ಟಿಯಲ್ಲಿ ಸಿಲುಕಿ ತಮ್ಮ ಸ್ವಾಯತ್ತತೆ ಕಳೆದುಕೊಂಡಿವೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply