ಸಂವಿಧಾನ ವಿರೋಧಿ ಹೇಳಿಕೆ: ಕೇರಳ ಸಚಿವರ ವಿರುದ್ಧ ಪ್ರಕರಣ ದಾಖಲು

4 years ago

ತಿರುವನಂತಪುರಂ: ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಆರೋಪ ಹೊತ್ತಿರುವ ಕೇರಳ ಸರ್ಕಾರದ ಸಚಿವ ಸಾಜಿ ಚೆರಿಯಾನ್ ವಿರುದ್ಧ ಪ್ರಕರಣ ದಾಖಲಾಗಿದೆ.

ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ನಿನ್ನೆಯಷ್ಟೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಾಜಿ ಚೆರಿಯಾನ್ ವಿರುದ್ಧ ಕೀಝವೈಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಷ್ಟ್ರೀಯ ಗೌರವ ಆಕ್ಟ್ 1971 ಅನ್ವಯ ಪ್ರಕರಣ ದಾಖಲಾಗಿದೆ.

ತನ್ನ ಹೇಳಿಕೆಯನ್ನು ತಿರುಚಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಸಾಜಿ ಚೆರಿಯಾನ್ ಆರೋಪಿಸುತ್ತಿದ್ದಾರೆ.

Leave a Reply