ದತ್ತಾತ್ತೇಯ ಹೊಸಬಾಳೆ ಅವರನ್ನು RSS ನಿಂದ ಹೊರಹಾಕಿ ಅವರ ಮೇಲೆ ಕ್ರಮ ಜರುಗಿಸಲಿ

1 year ago

ಜಾತ್ಯಾತೀತತೆ ಎಂದರೆ ಜಾತಿ ಮತ್ತು ಧರ್ಮದ ಬೇಧ ನೋಡದೇ ಎಲ್ಲರನ್ನೂ ಸಮಾನವಾಗಿ ಕಾಣುವುದು

ಸಮಾಜವಾದ ಎಂದರೆ ಸಾಮಾಜಿಕ ಮತ್ತು ಆರ್ಥಿಕವಾಗಿ ಎಲ್ಲರಿಗೂ ನ್ಯಾಯ ಒದಗಿಸುವುದು ಎಂದರ್ಥ.

ನಮ್ಮ ಸಂವಿಧಾನದ ಮೂಲ ಆಶಯಗಳಲ್ಲಿ ಮೇಲೆ ಹೇಳಿದ ಸಮಾನತೆ ಮತ್ತು ನ್ಯಾಯದ ಅಂಶವು ಅತ್ಯಂತ ಮಹತ್ವವಾಗಿರುವಂತದ್ದು ಮತ್ತು ಒಂದು ದೇಶದ ಉಳಿವಿಗೆ ಬೇಕಾಗಿರುವಂತಹ ಸಂಗತಿಗಳು. ಹೀಗಿರುವಾಗ ಇಂತಹ ಮಹತ್ವದ ಅಂಶಗಳನ್ನು ತೆಗೆದುಹಾಕಬೇಕೆಂದು ಹೇಳುತ್ತಿರುವ RSS ನ ದತ್ತಾತ್ರೇಯ ಹೊಸಬಾಳೆ ಅವರು ಜಾತ್ಯಾತೀತತೆ ಹಾಗೂ ಸಮಾಜವಾದ ಎಂಬ ಪದವನ್ನು ಅರ್ಥ ಮಾಡಿಕೊಳ್ಳುವುದೇ ಸಂವಿಧಾನ ವಿರೋಧಿಯಾಗಿ ಮಾತನಾಡುತ್ತಿರುವುದು ದೇಶದ್ರೋಹದ ನಡವಳಿಕೆ ಆಗಿದೆ.

ದೇಶದ ಬಹುತ್ವಕ್ಕೆ ಎಂದಿನಿಂದಲೂ ವಿರುದ್ಧವಾಗಿರುವ RSS ಯಾವಾಗಲೂ ಮನುಷ್ಯನ ಆಹಾರ, ಬಟ್ಟೆ, ಆಚರಣೆ ಹಾಗೂ ಅವರ ಆಲೋಚನೆಗಳ ವಿಷಯದಲ್ಲಿ ನಿಯಂತ್ರಣ ಸಾಧಿಸಲು ಯತ್ನಿಸುತ್ತಲೇ ಇದೆ.

ಆದರೆ ಬಾಬಾ ಸಾಹೇಬರು ನೀಡಿರುವ ಈ ದೇಶದ ಆತ್ಮವಾದ ಸಂವಿಧಾನವು ಎಷ್ಟು ಗಟ್ಟಿಯಾಗಿದೆ ಎಂದರೆ ಇಂತಹ ನೂರು ದಾಳಿಗಳು ಮತ್ತು ಕುತಂತ್ರಗಳನ್ನು ಅದು ಇನ್ನೂ ಕೋಟಿ ಬಾರಿ ಎದುರಿಸಿ ನಿಲ್ಲುವಷ್ಟು ಸಮರ್ಥವಾಗಿದೆ.

ಇತ್ತೀಚೆಗೆ ಬಾಬಾ ಸಾಹೇಬರ ವಿಷಯದಲ್ಲಿ ಪ್ರೀತಿ ತೋರಿಸುವ ನಾಟಕ ಮಾಡುತ್ತಿರುವ RSS ನವರು ಬಾಬಾ ಸಾಹೇಬರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮಾತನಾಡುತ್ತಿರುವ ದತ್ತಾತ್ತೇಯ ಹೊಸಬಾಳೆ ಅವರನ್ನು RSS ನಿಂದ ಹೊರಹಾಕಿ ಅವರ ಮೇಲೆ ಕ್ರಮ ಜರುಗಿಸಲಿ, ಇಲ್ಲವಾದರೆ ತಾವೊಬ್ಬ ದೇಶದ್ರೋಹಿ ಸಂಘಟನೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಿ.

– ಡಾ. ಎಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

Leave a Reply