ಇಂದಲ್ಲ ನಾಳೆ ದಲಿತ ಸಿಎಂ ಪಕ್ಕಾ: ಸಿದ್ಧರಾಮಯ್ಯ

4 years ago

ಕೊಪ್ಪಳ: ಇಂದಲ್ಲ ನಾಳೆ ದಲಿತ ಸಿಎಂ ಪಕ್ಕಾ ಮತ್ತು ಇದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಬಿಜೆಪಿ ಪಕ್ಷದಿಂದಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಇಳಿಸಿದಾಗ ಬಿಜೆಪಿ ಬಳಿ ಗೋವಿಂದ ಕಾರಜೋಳ ಅವರನ್ನು ಮುಖ್ಯಮಂತ್ರಿ ಮಾಡುವ ಅವಕಾಶವಿತ್ತು. ಆದ್ರೂ ಯಾಕೆ ಮಾಡಲಿಲ್ಲ? ಮೊದಲು ಅವರು ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಘೋಷಣೆ ಮಾಡಲಿ. ಎಂದು ದಲಿತ ಸಿಎಂ ಕುರಿತ ಬಿಜೆಪಿ ಟ್ವೀಟ್ ವಿರುದ್ದ ಕಿಡಿಕಾರಿದರು.

ಇಂಥದೆಲ್ಲ ಅವರು ಯಾಕೆ ಮಾಡುತ್ತಾರೆ ಬೇಕಿದ್ದರೆ ತಾವೇ ದಲಿತ ಸಿಎಂ ಘೊಷಣೆ ಮಾಡಲಿ ಅಂತಾ ಮರು ಸವಾಲು ಹಾಕಿದರು.

Leave a Reply