ನಿವೃತ್ತರಾಗಿ ಮನೆಗೆ ಬಂದವರನ್ನು ಯಾರು ವಿವಾಹವಾಗಲು ಒಪ್ಪುತ್ತಾರೆ?: ಸತ್ಯಪಾಲ್ ಮಲಿಕ್

4 years ago

ದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ದೊಡ್ಡ ಮೋಸ, ಇದನ್ನು ಈ ಕ್ಷಣವೇ ಹಿಂಪಡೆಯಬೇಕು  ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಆಗ್ರಹಿಸಿದ್ದಾರೆ.

ಭವಿಷ್ಯದ ಯೋಧರು ಆರು ತಿಂಗಳು ತರಬೇತಿ ಪಡೆಯುತ್ತಾರೆ. ಬಳಿಕ ಆರು ತಿಂಗಳು ಅವರು ರಜೆಯಲ್ಲಿ ಇರುತ್ತಾರೆ. ಮೂರು ವರ್ಷಗಳ ಬಳಿಕ ಅವರು ನಿವೃತ್ತರಾಗಿ ಮನೆಗೆ ಬರುತ್ತಾರೆ. ಅವರನ್ನು ಯಾರು ವಿವಾಹವಾಗಲು ಒಪ್ಪುತ್ತಾರೆ? ಇದು ಜನ ನಂಬಿಕೆ ಹಾಗೂ ಆಕಾಂಕ್ಷೆಗಳ ಮೇಲೆ ಮಾಡುವ ಮೋಸದಾಟ’ ಎಂದು ಅವರು ಹೇಳಿದ್ದಾರೆ.

‘ದೇಶದ ಯುವಜನತೆಯ ಪರವಾಗಿ ಈ ಅಗ್ನಿಪಥ ಯೋಜನೆ ಇಲ್ಲ. ಈ ಯೋಜನೆಯಿಂದ ಹಳ್ಳಿ ಹಾಗೂ ಸರ್ಕಾರದ ನಡುವೆ ಅಂತರ ಹೆಚ್ಚಾಗಲಿದೆ. ಹೀಗಾಗಿ ಈ ಯೋಜನೆಯನ್ನು ಹಿಂಪಡೆಯಬೇಕು’ ಎಂದು ಅವರು ಅಗ್ರಹಿಸಿದ್ದಾರೆ.

Leave a Reply