ಜನರ ಆಶಯದಂತೆ ರಾಜಾಜಿನಗರ ವಿಧಾನಸಭಾ ಕ್ಷೇತ್ರಾಭಿವೃದ್ಧಿ: ಎಸ್.ಸುರೇಶ್ ಕುಮಾರ್

4 years ago

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ ಪ್ರಜ್ಞಾವಂತ ಮತದಾರರು ಇರುವ ಕ್ಷೇತ್ರ. ನಾಗರಿಕರ ಆಶಯದಂತೆ ಮತ್ತು ಅವಶ್ಯಕತೆ ಇರುವ ಕಾಮಗಾರಿಗಳಿಗೆ ಒತ್ತು ನೀಡಿ ಯೋಜನೆಗಳನ್ನ ರೂಪಿಸಿ, ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಕಾಶನಗರ ವಾರ್ಡ್ ನಲ್ಲಿರುವ ಗಾಯಿತ್ರಿದೇವಿ ಉದ್ಯಾನವನದಲ್ಲಿ ಪಾದಚಾರಿ ಮಾರ್ಗ ಮತ್ತು  ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಮಾತಾಡಿದ ಅವರು, ಜನರ ಒಳಿಗೆ ಆಡಳಿತ, ಜನ ಸೇವೆಯೆ ಮೂಲ ಉದ್ದೇಶದಂತೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ, ಉದ್ಯಾನವನ, ಕ್ರೀಡಾಂಗಣ ಕುಡಿಯುವ ನೀರಿನ ಸೌಲಭ್ಯ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅನುದಾನವನ್ನು  ಸಮರ್ಪಕವಾಗಿ ಬಳಸಲಾಗುತ್ತಿದೆ ಎಂದರು.

ಶ್ರೀ ರಾಮಮಂದಿರ ಆಟದ ಮೈದಾನ ಆಧುನೀಕರಣಕ್ಕೆ 6 ಕೋಟಿ ರೂಪಾಯಿ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣ ನವೀಕರಣ ಮತ್ತು ಗಾಯಿತ್ರಿ ದೇವಿ ಉದ್ಯಾನವನಕ್ಕೆ 1 ಕೋಟಿ ವೆಚ್ಚದಲ್ಲಿ ಪಾದಚಾರಿ ಮಾರ್ಗ, ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳಿಗೆ ಗುಣಮಟ್ಟದ ಡಾಂಬರೀಕರಣ ರಸ್ತೆಗಳನ್ನು ಹಾಕಲಾಗಿದೆ. ಮುಂಬರುವ ನಾಲ್ಕು ತಿಂಗಳಲ್ಲಿ ಸಾರ್ವಜನಿಕರಿಗೆ ವಿವಿಧ ಯೋಜನೆ ಕಾಮಗಾರಿಗಳ ಸಂಪೂರ್ಣ  ಮುಗಿಯಲಿದೆ ಎಂದರು

ಕಾರ್ಯಪಾಲಕ ಇಂಜಿನಿಯರ್ ಗಂಗಾಧರ್, ರಾಘವೇಂದ್ರರಾವ್, ಬಿ.ಎನ್.ಶ್ರೀನಿವಾಸ್, ಲಕ್ಷ್ಮೀನಾರಾಯಣ್, ಯಶಸ್ ನಾಯಕ್, ಗಿರೀಶ್, ಕಿರಣ್, ಮಹೇಶ್, ಸಂಜಯ್ ಪ್ರವೀಣ್ ಮೊದಲಾದವರು ಇದ್ದರು.

Leave a Reply