ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

4 years ago

ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ
ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ, ಕಮಲ ನಗರದ ದಿ.ಮಹದೇವಪ್ಪ ಪ್ರತಿಷ್ಠಾನ ಮತ್ತು ಇಂದಿರಾ ಹೆಲ್ತ್ ಕೇರ್ ಸಹಯೋಗದಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕಣ್ಣಿನಪೂರೆ ಶಸ್ತ್ರಚಿಕಿಸ್ತೆಗೊಳಗಾದವರಿಗೆ ಉಚಿತವಾಗಿ ಕನ್ನಡಕ ವಿತರಣೆ ಕಾರ್ಯಕ್ರಮ.
ಕಾರ್ಯಕ್ರಮದಲ್ಲಿ ಮಾತಾಡಿದ ಎಮ್.ಶಿವರಾಜು, ಆರೋಗ್ಯ, ಶಿಕ್ಷಣ ಮತ್ತು ಪರಿಸರ ರಕ್ಷಣೆಗೆ ದಿ.ಮಹದೇವಪ್ಪ ಪ್ರತಿಷ್ಠಾನದಲ್ಲಿ ಆದ್ಯತೆ ನೀಡಲಾಗಿದೆ. ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿರುವ ಶಂಕರಮಠ, ಶಕ್ತಿಗಣಪತಿ ನಗರ ಸುತ್ತಮುತ್ತಲ ಪ್ರದೇಶದಲ್ಲಿ ಮಧ್ಯಮವರ್ಗ, ಬಡವರು ಹೆಚ್ಚಿನ ಜನಸಂಖ್ಯೆಯಲ್ಲಿ ವಾಸವಿದ್ದಾರೆ ಎಂದರು.
ವಯೋಸಹಜ, ಅನಾರೋಗ್ಯ ಪೀಡಿತರಾಗಾಗ ತಪಾಸಣೆ ಮಾಡಿಸಿಕೊಳ್ಳಲು ಆಸ್ಪತ್ರೆ ವೆಚ್ಚ ಮಾಡಲು ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಆದ್ದರಿಂದ ಸಾಮಾನ್ಯ ಜನರಿಗೂ ಉತ್ತಮ ವೈದ್ಯಕೀಯ ಚಿಕಿತ್ಸೆ ಲಭಿಸಬೇಕು ಎಂದು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರ ಸ್ಮರಣೆಯಲ್ಲಿ ಇಂದಿರಾ ಹೆಲ್ತ್ ಕೇರ್ ಕ್ಲಿನಿಕ್ ಆರಂಭಿಸಲಾಗಿದ್ದು ಇಲ್ಲಿ ಪ್ರತಿದಿನ ಸಕ್ಕರೆ ಖಾಯಿಲೆ, ಬಿ.ಪಿ.ಮತ್ತು ಇ.ಸಿ.ಜಿ. ಜನರಲ್ ಚೆಕ್ ಅಪ್ ಗಳನ್ನು ತಜ್ಞ ವೈದ್ಯರುಗಳಿಂದ ಉಚಿತವಾಗಿ ತಪಾಸಣೆ ಮಾಡಲಾಗುತ್ತಿದೆ ಎಂದರು.

Leave a Reply