ನಾಡಪ್ರಭು ಕೆಂಪೇಗೌಡ ಹೈಟೆಕ್ ಬಸ್ ನಿಲ್ದಾಣದ ಪ್ರಗತಿ ಪರಿಶೀಲಿಸಿದ ವಸತಿ ಸಚಿವ ವಿ.ಸೋಮಣ್ಣ

4 years ago

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ಮೂಡಲಪಾಳ್ಯ ವಾರ್ಡ್ ನಲ್ಲಿ ನಾಡಪ್ರಭು ಕೆಂಪೇಗೌಡ ಸ್ಮರಣೆಯಲ್ಲಿ ಹೈಟೆಕ್ ಬಸ್ ನಿಲ್ದಾಣದ ಪ್ರಗತಿ ಪರಿಶೀಲನೆಯನ್ನು ವಸತಿ ಸಚಿವ ವಿ.ಸೋಮಣ್ಣ ನಡೆಸಿ, ಕಟ್ಟಡದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತಾಡಿದ ವಸತಿ ಸಚಿವ ವಿ.ಸೋಮಣ್ಣ, ಮೂಡಲಪಾಳ್ಯ ವಾರ್ಡ್ ಬಸ್ ನಿಲ್ದಾಣ ಇರುವ ಜಾಗ ಭೂಕಬಳಿಕೆದಾರರ ವಶದಲ್ಲಿ ಇತ್ತು ಪೂಜ್ಯರಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಆಶೀರ್ವಾದ, ಸಹಕಾರದಿಂದ ಭೂಕಬಳಿಕೆದಾರರ ವಿರುದ್ದ ಹೋರಾಟ ಮಾಡಿ ನೂರಾರು ಕೋಟಿ ರೂಪಾಯಿ ವೆಚ್ಚದ ಭೂಮಿಯನ್ನ ಸಾರ್ವಜನಿಕರ ಉಪಯೋಗಕ್ಕೆ ಬಸ್ ನಿಲ್ದಾಣ, ಬಿ.ಬಿ.ಎಂ.ಪಿ. ಕಛೇರಿ ಮತ್ತು ಆರೋಗ್ಯ ಕೇಂದ್ರ, ಬೆಸ್ಕಾಂ ಕಛೇರಿಗಳು ಪ್ರಾರಂಭವಾಗಲಿವೆ ಎಂದರು.
ಸ್ಥಳೀಯ ಸುತ್ತಮುತ್ತಲ ಜನರಿಗೆ ಸಾರಿಗೆ ವ್ಯವಸ್ಥೆ ಜೊತೆಯಲ್ಲಿ ವಿವಿಧ ಸೌಲಭ್ಯಗಳು ಲಭಿಸಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಮೃತಹಸ್ತದಿಂದ ಅತಿಶೀಘ್ರದಲ್ಲಿ ಲೋಕರ್ಪಣೆಯಾದಲಿದೆ ಎಂದರು.

Leave a Reply