ಎರಡು ವರ್ಷಗಳ ನಂತರ ಮತ್ತೆ ವೈಭವದ ಚಾಲನೆ
ಬೆಂಗಳೂರು: ರಿಟಿಜ್ ಕಾರ್ಲಟನ್ ಹೋಟೆಲ್ ಸಭಾಂಗಣದಲ್ಲಿ ಇಥಿಯೋಪಿಯನ್ ಏರ್ ಲೈನ್ಸ್ ತಡೆರಹಿತ ವಿಮಾನಯಾನ ಹಾರಾಟ; ಬೆಂಗಳೂರು ನಗರ ಮತ್ತು ಅಡಿಸ್ ಅಬಬಾಗೆ ನೇರ ಹಾರಾಟವನ್ನು ಇಥಿಯೋಪಿಯನ್ ಏರ್ ಲೈನ್ಸ್ ಮರು ಪ್ರಾರಂಭ ಮಾಡಲಾಯಿತು.
ಭಾರತ ಮತ್ತು ಉಪ-ಖಂಡದ ಇಥಿಯೋಪಿಯನ್ ಏರ್ ಲೈನ್ಸ್ ಪ್ರಾದೇಶಿಕ ನಿರ್ದೇಶಕ ಟಿಜಿಸ್ಟ್ ಎಶೆತು ಮತ್ತು ಟ್ರಾಫಿಕ್ ಮತ್ತು ಸೇಲ್ಸ್ ಮ್ಯಾನೇಜರ್ ಅಡಿಸ್ಸು ಎರ್ಮಿಯಾಸ್ ಮತ್ತು ಎಸ್.ಟಿ.ಐ.ಸಿ.ನಿರ್ದೇಶಕ ಅಂಜು ವಾರಿಯಾ, ಇಂಡಿಯ-ಎಥಿಯೋಪಿಯನ್ ಸೇಲ್ಸ್ ಮ್ಯಾನೇಜರ್ ಸಂದೀಪ್ ಕುಮಾರ್ ಮೀನಾ, ಪ್ರಾದೇಶಿಕ ವ್ಯವಸ್ಥಾಪಕರು ಮಾರಾಟ ದಕ್ಷಿಣ ಭಾರತ-ಇಥಿಯೋಪಿಯನ್ ಏರ್ ಲೈನ್ಸ್ ಶ್ರೀನಿವಾಸನ್ ಜಯಶೀಲನ್ ಚಾಲನೆ ನೀಡಿದರು.
ಆಫ್ರಿಕಾದ ಅತಿ ದೊಡ್ಡ ವೈಮಾನಿಕ ಸಂಸ್ಥೆ ಮತ್ತು ಆಫ್ರಿಕಾದ ವಿಮಾನಯಾನ ಸೇವೆಯಾದ ಇಥಿಯೋಪಿಯನ್ ಏರ್ ಲೈನ್ಸ್ ಇದೀಗ ಭಾರತದ ಬೆಂಗಳೂರು – ಇಥಿಯೋಪಿಯಾ ನಡುವೆ ವಿಮಾನ ಸೇವೆಯನ್ನು ಪುನರಾರಂಭಿಸಿದೆ. 2022ರ ಮಾರ್ಚ್ 27 ರಿಂದ ವಾರದಲ್ಲಿ ಮೂರು ದಿನ ವಿಮಾನ ಸೇವೆಯನ್ನು ಆರಂಭಿಸಿದೆ.
ಕೋವಿಡ್ ಸಾಂಕ್ರಮಿಕ ಆರಂಭವಾದ ಎರಡು ವರ್ಷಗಳ ನಂತರ ವಿಮಾನ ಸೇವೆ ಪುನರಾರಂಭವಾಗಿದೆ. 2019 ರ ಅಕ್ಟೋಬರ್ ನಲ್ಲಿ ಮೊದಲ ಬಾರಿಗೆ ಬೆಂಗಳೂರಿನಿಂದ ಇಥಿಯೋಪಿಯಾಗೆ ವಿಮಾನ ಸೇವೆ ಆರಂಭವಾಗಿತ್ತು. ಬೆಂಗಳೂರು ಮತ್ತು ಅಡ್ಡಿಸ್ ಅಬಾಬ ನಡುವೆ ಬಿ738 ವಿಮಾನದ ಮೂಲಕ ನಿಗದಿತ ವೇಳಾಪಟ್ಟಿಯಂತೆ ತಡೆರಹಿತ ಸೇವೆ ನೀಡಲಾಗುತ್ತಿತ್ತು.
ಪ್ರತಿ ಮಂಗಳವಾರ, ಗುರುವಾರ ಮತ್ತು ಭಾನುವಾರ ಇಥಿಯೋಪಿಯಾದಿಂದ ರಾತ್ರಿ 11 ಗಂಟೆಗೆ ಹೊರಡಲಿರುವ ವಿಮಾನ ಬೆಳಿಗ್ಗೆ 7.10ಕ್ಕೆ ಬೆಂಗಳೂರಿಗೆ ಬರಲಿದೆ. ಮಂಗಳವಾರ, ಗುರುವಾರ ಮತ್ತು ಶನಿವಾರ 2.30ಕ್ಕೆ ಬೆಂಗಳೂರಿನಿಂದ ಹೊರಡಲಿರುವ ವಿಮಾನ 5.50 ಕ್ಕೆ ಇಥಿಯೋಪಿಯಾಗೆ ತೆರಳಲಿದೆ.
ವಿಮಾನ ಸೇವೆ ಪುನರಾರಂಭ ಕುರಿತು ಮಾಹಿತಿ ನೀಡಿದ ಇಥಿಯೋಪಿಯಾ ವಿಮಾನ ಗುಂಪಿನ ಸಿಇಒ ಮೆಸ್ಪಿನ್ ತಾಸೆವ್, ಭಾರತದ ವಾಣಿಜ್ಯ ರಾಜಧಾನಿಗೆ ವಿಮಾನ ಪುನರಾರಂಭಿಸಿರುವುದು ತಮಗೆ ಸಂತಸತಂದಿದೆ. ನಮ್ಮ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಲು ನಾವು ಬದ್ಧರಾಗಿದ್ದೇವೆ. ಭಾರತ – ಆಫ್ರಿಕಾ ಮತ್ತು ಅದರಾಚೆಗೆ ಸಂಪರ್ಕ ಸಾಧಿಸುವಲ್ಲಿ ಇಥಿಯೋಪಿಯಾ ವಿಮಾನ ಸಂಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ. ಐಸಿಟಿ ಕೇಂದ್ರವಾಗಿರುವ ಬೆಂಗಳೂರು, ರಾಜಧಾನಿ ನವದೆಹಲಿ ಮತ್ತು ಮುಂಬೈಗೆ ಹೆಚ್ಚುವರಿಯಾಗಿ ನಿರಂತರವಾಗಿ ಸೇವೆ ಒದಗಿಸುತ್ತಿದೆ. ಈ ವಿಮಾನಗಳು ಅಸ್ತಿತ್ವದಲ್ಲಿರುವ ಸರಕು ಸಾಗಾಣೆ ಮತ್ತು ಪ್ರಯಾಣಿಕ ವಿಮಾನ ಸೇವೆಗಳು ಭಾರತದ ಇತರ ಸ್ಥಳಗಳಿಗೆ ಪೂರಕವಾಗಿವೆ ಎಂದರು.
ಭಾರತ ಮತ್ತು ಆಫ್ರಿಕಾ ನಡುವೆ ವೇಗವಾಗಿ ಬೆಳೆಯುತ್ತಿರುವ ವಿಮಾನ ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸಲು ಬೆಂಗಳೂರು ನಗರವನ್ನು ಸೇರಿಸುವುದು ಅತ್ಯಂತ ಅಗತ್ಯವಾಗಿದೆ. ಭಾರತದ ಉಪಖಂಡದಲ್ಲಿ ವ್ಯಾಪಾರ, ಹೂಡಿಕೆ, ಪ್ರವಾಸೋದ್ಯಮ ವಲಯಕ್ಕೆ ಈ ಸೇವೆ ಅನುಕೂಲವಾಗಲಿದೆ. ಬೆಂಗಳೂರು – ಅಡಿಸ್ ಅಬಾಬದ ನಡುವಿನ ವಿಮಾನ ಸೇವೆಯಿಂದ ದಕ್ಷಿಣ ಭಾರತದ ಬೆಂಗಳೂರು ಮತ್ತು ಆಫ್ರಿಕಾದ 60ಕ್ಕೂ ಹೆಚ್ಚು ಸ್ಥಳಗಳ ನಡುವೆ ವೇಗವಾಗಿ ಸಂಪರ್ಕ ಒದಗಿಸುತ್ತದೆ. ಪ್ರಸ್ತುತ ಇಥಿಯೋಪಿಯನ್, ಮುಂಬೈ ಮತ್ತು ದೆಹಲಿಗೆ ಪ್ರಯಾಣಿಕ ವಿಮಾನಗಳು ಮತ್ತು ಬೆಂಗಳೂರು, ಚೆನ್ನೈ, ಮುಂಬೈ ಮತ್ತು ದೆಹಲಿಗೆ ಸರಕು ಸೇವೆಯನ್ನು ಇಥಿಯೋಪಿಯನ್ ವಿಮಾನ ಸಂಸ್ಥೆ ನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿದರು.
ಇಥಿಯೋಪಿಯಾದ ವಿಮಾನ ಅತ್ಯಂತ ತ್ವರಿತವಾಗಿ ವಿಮಾನ ಸೇವೆ ಒದಗಿಸುವ ಸಂಸ್ಥೆಯಾಗಿದ್ದು, 75 ವರ್ಷಗಳಿಂದ ವಿಮಾನಯಾನ ವಲಯದಲ್ಲಿ ಸೇವೆ ಸಲ್ಲಿಸುತ್ತಿದೆ. 130ಕ್ಕೂ ಹೆಚ್ಚು ರಾಷ್ಟ್ರಗಳಿಗೆ ನಾಗರಿಕ ಮತ್ತು ಸರಕು ಸೇವೆಯನ್ನು ಒದಗಿಸುತ್ತಿದೆ ಎಂದರು.
ಇಥಿಯೋಪಿಯ ವೀಸಾ ಪಡೆಯಲು www.evisa.gov.etಸಂಪರ್ಕಿಸಿ




