ಧಮ್ಮ ಕೇಂದ್ರದಲ್ಲಿ ವಿಶ್ವ  ಮಹಿಳಾ ದಿನಾಚರಣೆ

1 year ago

ವಿಮುಕ್ತಿ ವಿದ್ಯಾಸಂಸ್ಥೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ತಾಲೂಕು ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಚಿತ್ರದುರ್ಗ: ದಮ್ಮಾಕೇಂದ್ರ ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹದಿಹರೆಯ ಕಿಶೋರಿಯರ ಶಿಕ್ಷಣ ಆರೋಗ್ಯ ಮತ್ತು ಸಾಮಾಜಿಕ ವಿಷಯಗಳ ಕುರಿತು ಮತ್ತು ಬಾಲ್ಯ ವಿವಾಹ ಹಾಗೂ ಬಾಲ್ಯ ಕಾರ್ಮಿಕತೆಯ ಬಗ್ಗೆ  ಚರ್ಚೆ ಮಾಡಲಾಯಿತು  ಈ ವಿಷಯಗಳನ್ನು ಕುರಿತು ವಿಮುಕ್ತಿ  ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಆರ್ ವಿಶ್ವಸಾಗರವರು ತಿಳಿಸಿಕೊಟ್ಟರು ಇಂದು ಸಮಾಜದಲ್ಲಿ ಹದಿಹರೆಯದ ಕಿಶೋರಿಯರ ಮೇಲೆ ಆಗುತ್ತಿರುವ ಧೋರಣೆಗಳನ್ನು ಕುರಿತು ಆಶಾ ಮತ್ತು ಅಂಗನವಾಡಿ ಹಾಗೂ ಸ್ವಯಂಸೇವಕರು ಚರ್ಚೆ ಮಾಡಿದರು ಇವರಿಗೆ ನಾವು ಸುಮಾರು 25 ಹಳ್ಳಿಗಳಲ್ಲಿ ಒಂದು ಗುಂಪಿನಲ್ಲಿ 30 ಕಿಶೋರ್ ಇರುವಂತೆ ನಕ್ಷತ್ರ ಕಿಶೋರ್ಯರ ಗುಂಪುಗಳನ್ನು ರಚನೆ ಮಾಡಲಾಗಿದೆ ಇದಕ್ಕೆ ಪರ್ಯಾಯವಾಗಿ ನಕ್ಷತ್ರ ಕಿಶೋರಿಯರ ಪಾರ್ಲಿಮೆಂಟ್ ಸಹ ರಚನೆಯಾಗಿದೆ ಎಂದು ತಿಳಿಸಿದರು.

ಈ ಪಾರ್ಲಿಮೆಂಟಿನಲ್ಲಿ ಒಂದು ಹಳ್ಳಿಯ ಸಂಘದಿಂದ ಎರಡು ಜನ ಲೀಡರ್ ಗಳನ್ನು ನೇಮಿಸಲಾಗಿದೆ ಎಂದರು.

ವಿಮುಕ್ತಿ ವಿದ್ಯಾ ಸಂಸ್ಥೆಯ ನಿರ್ದೇಶಕ ಅಧ್ಯಕ್ಷರಾದ ಅನ್ನಪೂರ್ಣ ರವರು ಮಾತನಾಡಿ, ಮುಂದಿನ ಆರು ತಿಂಗಳೆಗಳಲ್ಲಿ ನಾವು ಕಿಶೋರಿಯರೊಡನೆ ಯಾವ ತರದ ಕೆಲಸಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಕ್ರೀಡೆಗಳನ್ನು ಆಡಿಸಿ ಅವರೆ ಆಶಾ ಮತ್ತು ಅಂಗನವಾಡಿ ಹಾಗೂ ಸ್ವಯಂಸೇವಕರಿಗೆ ಬಹುಮಾನಗಳ  ವಿತರಣೆಯನ್ನು ಮಾಡಲಾಯಿತು.

ಪ್ರಾರ್ಥನೆ:- ಅರಣ್ಯ ಸಾಗರ್ ತಂಡದಿಂದ
ಸ್ವಾಗತ :- ಬೀಬಿಜಾನ್ ಸಂಯೋಜಕರು
ಕಾರ್ಯಕ್ರಮ ನಿರೂಪಣೆ :- ನಾಗರತ್ನ ಕೆಬಿ ಸಂಯೋಜಕರು

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸಂಘದ ಸ್ವಯಂ ಸೇವಕರು, ವಿದ್ಯಾರ್ಥಿ ಸೇವಕರು ಮತ್ತು ವಿಮುಕ್ತಿಯ ಸಿಬ್ಬಂದಿ ಹಾಜರಿದ್ದರು.

ಕಾರ್ಯಕ್ರಮವನ್ನು ಮಧ್ಯಾಹ್ನದ ಭೋಜನದೊಂದಿಗೆ ಮುಕ್ತಾಯಗೊಳಿಸಲಾಯಿತು.

Leave a Reply