ಬೆಂಗಳೂರು: ಉದ್ಯಾನ ನಗರಿ, ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂದು ಪ್ರಸಿದ್ಧಿ ಪಡೆದಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೀಗ ನಾಗರೀಕ ಸಮಾಜ ಬೆಚ್ಚಿ ಬೀಳುವಂತಹ ಚಟುವಟಿಕೆಗಳು ನಡೆಯುತ್ತಿವೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮೋಜು ಮಸ್ತಿ ಮಜಾ ಮತ್ತು ಆಧುನಿಕತೆಯ ಹೆಸರಿನಲ್ಲಿ ಯುವ ಜನತೆ ತಮ್ಮ ಪತ್ನಿಯರು ಮತ್ತು ಗೆಳತಿಯರನ್ನು ಬದಲಾಯಿಸಿಕೊಳ್ಳುವ ಚಟುವಟಿಕೆಗಳು ನಡೆಯುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸ್ವಿಂಗರ್ಸ್ ಹೆಸರಿನಲ್ಲಿ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ ನಲ್ಲಿ ಕೆಲವರಿಗೆ ಸಂದೇಶ ಬಂದಿದೆ. ತಾವು ಪಾರ್ಟಿ ಆಯೋಜಿಸಿದ್ದೇವೆ. ಈ ಪಾರ್ಟಿಗೆ ಬರುವವರು ಕಡ್ಡಾಯವಾಗಿ ತಮ್ಮ ಪತ್ನಿ ಇಲ್ಲವೇ ಗೆಳತಿಯ ಜೊತೆಗೆ ಬರಬೇಕು. ಒಂಟಿಯಾಗಿ ಬರುವವರಿಗೆ ಅವಕಾಶ ಇಲ್ಲ ಎಂದು ತಿಳಿಸಿದೆ.
ಅಸಲಿಗೆ ಅದೇನೆಂದರೆ ವಾಟ್ಸ್ ಗ್ರೂಪ್ ಮಾಡಿಕೊಂಡಿದ್ದ ‘ಸ್ವಿಂಗರ್ಸ್’ ಟೀಂ, ಬೆಂಗಳೂರು ಹೊರ ವಲಯದಲ್ಲಿ ಪಾರ್ಟಿ ಆಯೋಜನೆ ಮಾಡಿದ್ದರು. ಪಾರ್ಟಿಗೆ ಪತ್ನಿ ಅಥವಾ ಗೆಳತಿಯರ ಜೊತೆಗೆ ಬರುತ್ತಿದ್ದರು. ಪಾರ್ಟಿಯಲ್ಲಿ ಪಾನಗೋಷ್ಠಿ, ಊಟೋಪಚಾರ ಮುಗಿದ ನಂತರ ಮಲಗಲು ತೆರಳುವ ವೇಳೆ ತಮ್ಮ ಪ್ರಿಯತಮೆಯರನ್ನು ಪರಸ್ಪರ ಬದಲಾವಣೆ ಮಾಡಿಕೊಳ್ಳುತ್ತಿದ್ದರು.
ಯುವಕನೊಬ್ಬ ಪರಿಚಯಸ್ಥ ಯುವತಿಯನ್ನು ಪಾರ್ಟಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಊಟೋಪಚಾರದ ನಂತರ ಬಳಿಕ ಸ್ನೇಹಿತನ ಜೊತೆಗೆ ಸಹಕರಿಸುವಂತೆ ತನ್ನ ಗೆಳತಿಗೆ ಹೇಳಿದ್ದಾನೆ. ಆಕೆ ಇದಕ್ಕೆ ಒಪ್ಪದಿದ್ದಾಗ ಬಲವಂತ ಮಾಡಿದ್ದಾನೆ. ಆದರೂ ಆ ಯುವತಿ ಇದಕ್ಕೆ ಒಪ್ಪದಿದ್ದಕ್ಕೆ ಸ್ನೇಹಿತರ ಜೊತೆಗೆ ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.
ಘಟನೆಯಿಂದ ಬೇಸತ್ತ ಯುವತಿ ಸಿಸಿಬಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಹರೀಶ್ ಹಾಗೂ ಹೇಮಂತ್ ಎಂದು ಗುರುತಿಸಲಾಗಿದೆ. ಆರೋಪಿಗಳ ಮೊಬೈಲ್ ಪರಿಶೀಲನೆ ವೇಳೆ ಭಯಾನಕ ಸತ್ಯ ಬಯಲಾಗಿದೆ. ಮೊಬೈಲ್ ನಲ್ಲಿ ಹತ್ತಾರು ಯುವತಿಯರ ಬೆತ್ತಲೆ ಫೋಟೊ ಪತ್ತೆಯಾಗಿವೆ. ಅಲ್ಲದೇ ಏಕಾಂತದಲ್ಲಿದ್ದ ವಿಡಿಯೋಗಳನ್ನು ಆರೋಪಿಗಳು ಮಾಡಿಟ್ಟುಕೊಂಡಿದ್ದರು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ಇಂತಹ ಚಟುವಟಿಕೆಗಳು ಎಲ್ಲೆಲ್ಲ ನಡೆಯುತ್ತಿವೆ, ಇದರಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.




