ಬೆಂಗಳೂರು: ಆರ್ಥಿಕ ತಜ್ಞ ಡಾ ಮನಮೋಹನ್ ಸಿಂಗ್ ಅವರು ಜಾರಿಗೆ ತರಲು ಬಯಸಿದ್ದ GST ಎಂಬ ಜನಪರವಾದ ತೆರಿಗೆ ವ್ಯವಸ್ಥೆಯನ್ನು, ಸಂಪೂರ್ಣ ಹಾಳು ಮಾಡಿರುವ ಬಿಜೆಪಿಗರು, ಮನಮೋಹನ್ ಸಿಂಗ್ ಅವರು ಹೇಳಿದ GST ಎಂಬ ಹೆಸರನ್ನು ಮಾತ್ರ ಇಟ್ಟುಕೊಂಡು ಅದರೊಳಗೆ ಇದ್ದ ಜನಪರ ತೆರಿಗೆ ವ್ಯವಸ್ಥೆಯನ್ನು ಗಾಳಿಗೆ ತೂರಿದ್ದು ಜನರನ್ನು ಅಕ್ಷರಶಃ ಲೂಟಿ ಮಾಡುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಹಳೆಯ ಕಾರುಗಳ ಮಾರಾಟದ ಮೇಲೆ ಕೇಂದ್ರ ಸರ್ಕಾರ 18% ಜಿ ಎಸ್ ಟಿ ವಿಧಿಸಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, GST ಎಂಬ ಶೋಷಣಾ ತೆರಿಗೆಯ ವ್ಯವಸ್ಥೆಯ ವಿರುದ್ಧ ವಿಪಕ್ಷಗಳು ದೊಡ್ಡ ಮಟ್ಟದಲ್ಲಿ ದನಿ ಮಾಡಿದರೆ, ಈ ಲೂಟಿಕೋರ ತೆರಿಗೆ ಪದ್ಧತಿಯಿಂದ ಬಹುಜನರನ್ನು ಕಾಪಾಡಿದಂತಹ ಕೆಲಸ ವಿಪಕ್ಷಗಳದ್ದಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತೆರಿಗೆ ಪದ್ದತಿಯು ಜನಸ್ನೇಹಿ ಆಗಿರಬೇಕೇ ವಿನಃ, ಅವರಿಗೆ ತೊಂದರೆದಾಯಕ ಆಗಿರಬಾರದು. ಈ ಹಿನ್ನಲೆಯಲ್ಲಿ ಈ ಕೆಟ್ಟ ತೆರಿಗೆ ವ್ಯವಸ್ಥೆಯ ವಿರುದ್ಧ ಜನಾಂದೋಲನ ರೂಪಿಸುವುದು ಅನಿವಾರ್ಯ ಎನಿಸುವ ಕಾಲ ಹತ್ತಿರ ಆಗುತ್ತಿದೆ ಎಂದಿದ್ದಾರೆ.




