ಬೆಂಗಳೂರು: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.9ರ ಶನಿವಾರದಿಂದ ಡಿ. 19ರವರೆಗೆ 9 ದಿನಕಾಲ ನಡೆಯಲಿದೆ. ಈ ಅಧಿವೇಶನಕ್ಕೆ ಮಾಡಲಾಗುತ್ತಿರುವ ವೆಚ್ಚ ಬರೋಬ್ಬರಿ 19 ಕೋಟಿ ರೂಪಾಯಿ. ಇದು ಅಧಿವೇಶನಕ್ಕೆ ಆಗಮಿಸುವ ಶಾಸಕರು, ಸಚಿವರು, ಅಧಿಕಾರಿಗಳ ವಾಸ್ತವ್ಯ ಹಾಗೂ ಊಟೋಪಚಾರಕ್ಕೆ ಮಾತ್ರ ಮಾಡುತ್ತಿರುವ ವೆಚ್ಚ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಇದನ್ನು ಹೊರತುಪಡಿಸಿ ಶಾಸಕರಿಗೆ ಪ್ರಯಾಣ ಭತ್ಯೆ, ಸಭಾ ಭತ್ಯೆ, ಆತಿಥ್ಯ ಭತ್ಯೆ ಸೇರಿದಂತೆ ಇತರೆ ಭತ್ಯೆಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು. ಅದೇ ರೀತಿಯಲ್ಲಿ ಅಧಿಕಾರಿಗಳಿಗೂ ಅವರ ಹುದ್ದೆಯ ಅರ್ಹತೆ ಆಧರಿಸಿ ವಿವಿಧ ಸೌಲಭ್ಯಗಳನ್ನು ನೀಡಲಾಗುವುದು.
ಇವುಗಳನ್ನು ಹೊರತುಪಡಿಸಿ ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ 7 ಕೋಟಿ ರೂ. ಖರ್ಚಾಗಲಿದ್ದು, ಹಿಂದಿನ ವರ್ಷ ಒಟ್ಟು 18 ಕೋಟಿ ಖರ್ಚಾಗಿತ್ತು. ಆ ವೆಚ್ಚವನ್ನು ಆಧರಿಸಿ ಶೇಕಡಾ 10 ರಷ್ಟು ಹೆಚ್ಚಳ ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದರು.
ಪ್ರತೀ ವರ್ಷ ಅಧಿವೇಶನದ ಖರ್ಚಿನಲ್ಲಿ ವಾಸ್ತವ್ಯಕ್ಕೆ ಸಿಂಹಪಾಲು ಹೋಗುವುದರಿಂದ ಹಣ ಉಳಿಸುವ ನಿಟ್ಟಿನಲ್ಲಿ ಸುವರ್ಣ ವಿಧಾನಸೌಧದ ಬಳಿ ಶಾಸಕರ ಭವನ ನಿರ್ಮಿಸುವ ದಶಕದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ ಎಂದರು.
ಸಚಿವ, ಶಾಸಕ, ಅಧಿಕಾರಿ ಹಾಗೂ ಸಿಬ್ಬಂದಿಯ ಊಟದ ಖರ್ಚಿಗೆ 2.80 ಕೋಟಿ ರೂ ಖರ್ಚಾಗಲಿದೆ. ಮಾರ್ಷಲ್ಗಳ ಓಡಾಟ, ಪೊಲೀಸ್ ಬಂದೋಬಸ್ತ್ ಹಾಗೂ ಸಾರಿಗೆ ಸಂಸ್ಥೆಯ ಬಸ್ ಸೇವೆ ಸೇರಿ ಒಟ್ಟಾರೆ 1.20 ಕೋಟಿ ರೂ. ವೆಚ್ಚವಾಗಲಿದೆ ಎಂದರು.
ಸುವರ್ಣ ವಿಧಾನಸೌಧ ಸೇರಿ ಗಣ್ಯರು ತಂಗಿದ ಸ್ಥಳಗಳಲ್ಲಿ ಇಂಟರ್ನೆಟ್ ಸೌಲಭ್ಯ, ದೂರವಾಣಿ ವ್ಯವಸ್ಥೆಗೆ 44 ಲಕ್ಷ ರೂ. ವಾಹನಗಳ ಇಂಧನಕ್ಕಾಗಿ 45 ಲಕ್ಷ ರೂ. ಅಧಿವೇಶನ ವೇಳೆ ತುರ್ತಾಗಿ ಬಾಡಿಗೆ ವಾಹನ ಪಡೆಯಲು 25 ಲಕ್ಷ ರೂ. ವಾಹನ ಚಾಲಕರ ವಸತಿ ವ್ಯವಸ್ಥೆಗೆ 20 ಲಕ್ಷ ರೂ. ಸೌಧವನ್ನು ಹೂಗಳಿಂದ ಅಲಂಕಾರಗೊಳಿಸಲು 15 ಲಕ್ಷ ರೂ. ಖರ್ಚಾಗಲಿದೆ ಎಂದರು.
ಅಧಿವೇಶನದ ವೇಳೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲು ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕಾಗಿಯೇ ಪ್ರತಿಭಟನಾ ಸ್ಥಳ ನಿಗದಿ ಮಾಡಲಾಗಿದೆ. ಇದಕ್ಕೆ 8.50 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಸ್ವಚ್ಛತಾ ಸಿಬ್ಬಂದಿ, ಬಿಸಿ ನೀರಿನ ವ್ಯವಸ್ಥೆ, ಲೇಖನ ಸಾಮಗ್ರಿಗೆ 25 ಲಕ್ಷ ರೂ., ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ 15 ಲಕ್ಷ ರೂ., ಅಧಿವೇಶನ ಮಾಹಿತಿ ಕೈಪಿಡಿ, ವಿವಿಧ ಗುರುತಿನ ಚೀಟಿಗಾಗಿ 4 ಲಕ್ಷ ರೂ., ಜಿಲ್ಲಾ ತರಬೇತಿ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಸರ್ಕಾರಿ ವಾಹನ ಚಾಲಕರಿಗೆ ನಿರ್ವಹಣಾ ವೆಚ್ಚ 25 ಸಾವಿರ ರೂ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಬೇಡಿಕೆ ಸಲ್ಲಿಸಿದ್ದಾರೆ.




