4 ಕೋವಿಡ್ ಕೇರ್ ಸೆಂಟರ್ ದತ್ತು ಪಡೆದ ಮೈಂಡ್ ಸೆಟ್ ಸೆಲೂಷನ್

4 years ago

ಬೆಂಗಳೂರು: ಬೆಂಗಳೂರು ದಕ್ಷಿಣ ವಲಯದ 4 ಕೋವಿಡ್ ಕೇರ್ ಸೆಂಟರ್ ಗಳನ್ನು ಸೂರ್ಯ ಫೌಂಡೇಷನ್ ಮತ್ತು ಮಂತ್ರ ಫೌಂಡೇಷನ್, ಮೈಂಡ್ ಸೆಟ್  ಸೆಲೂಷನ್, trek nomads,  ಸಾಮಾಜಿಕ ಸೇವಾ ಸಂಘಟನೆ ವತಿಯಿಂದ ದಕ್ಷಿಣ ವಲಯ ವ್ಯಾಪ್ತಿಗೆ ಬರುವ ನಾಲ್ಕು ಕೊವಿಡ್ ಕೇರ್ ಸೆಂಟರ್ ಗಳನ್ನು ಒಂದು ತಿಂಗಳ ಕಾಲ ದತ್ತು ಪಡೆಯಲಾಗಿದೆ.

ಪಿ.ಪಿ.ಇ.ಕಿಟ್ ಮತ್ತು ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್, ಕೊವಿಡ್ ಪರೀಕ್ಷಾ ಸೋಂಕಿತರಿಗೆ, ಕೊವಿಡ್ ಕೇರ್ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸುವವರಿಗೆ ಊಟದ ವ್ಯವಸ್ಥೆಯನ್ನು ಸಾಮಾಜಿಕ ಸೇವಾ ಸಂಘಟನೆಗಳು ಒಟ್ಟಾಗಿ ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ವಿಲ್ಸನ್ ಗಾರ್ಡನ್ ಮೆಟರ್ನಿಟಿ ಹೋಮ್ ಕೊವಿಡ್ ಕೇರ್ ಸೆಂಟರ್ ಅವರಣದಲ್ಲಿ ಚಾಲನೆ ನೀಡಲಾಯಿತು.

ಆರೋಗ್ಯ ಮುಖ್ಯಧಿಕಾರಿ ಶಿವಕುಮಾರ್, ಮೈಂಡ್ ಸೆಟ್ ಸಂಸ್ಥೆಯ ಭಾರ್ಗವಿ, ಮೇಘನಾ, ಭರತ್ ಮತ್ತು ಸೂರ್ಯ ಫೌಂಡೇಷನ್ ಶರವಣ, ಮಂತ್ರ ಫೌಂಡೇಷನ್ ಪುನೀತ್ ಮೊದಲಾದವರು ಪಾಲ್ಗೊಂಡಿದ್ದರು.

ದಕ್ಷಿಣ ವಲಯದ 4 ನಾಲ್ಕು ಕೊರೊನಾ ಆರೈಕೆ ಕೇಂದ್ರಗಳಲ್ಲಿ ಇರುವ ಸೋಂಕಿತರಿಗೆ ಔಷಧಿ, ಕೊವಿಡ್ ಪರೀಕ್ಷಾ ಕಿಟ್ ಮತ್ತು ಸ್ಯಾನಿಟೈಸರ್ ಊಟದ ವ್ಯವಸ್ಥೆಯನ್ನು ಒಂದು ತಿಂಗಳ ಕಾಲ ದತ್ತು ಪಡೆದು ಸೂರ್ಯ ಫೌಂಡೇಷನ್, ಮಂತ್ರ, ಮೈಂಡ್ ಸೆಟ್ ಸೆಲೂಷನ್ ಕಾರ್ಯನಿರ್ವಹಿಸಲಿವೆ.

ಇದೇ ಸಂದರ್ಭದಲ್ಲಿ ಸೂರ್ಯ ಫೌಂಡೇಷನ್ ವತಿಯಿಂದ ಬಿ.ಬಿ.ಎಂ.ಪಿ.ಗೆ. 500 ಕೊವಿಡ್ ಪರೀಕ್ಷಾ ಕಿಟ್, 500 ಲೀಟರ್ ಸ್ಯಾನಿಟೈಸರ್ 1 ಸಾವಿರ N.95ಮಾಸ್ಕ್ 10 ಸಾವಿರ ಮಾಸ್ಕ್, 300 ಪಿ.ಪಿ.ಇ.ಕಿಟ್, 15 ಥರ್ಮಾಲ್ ಸ್ಯಾನರ್ ಗಳನ್ನು ನೀಡಲಾಯಿತು.

ದಕ್ಷಿಣ ವಲಯ ವ್ಯಾಪ್ತಿಯ ಸಾರ್ವಜನಿಕರಿಗೆ ಉಚಿತ ಕೊವಿಡ್ ಟೆಸ್ಟ್ ಗಾಗಿ ಸಂರ್ಪಕಿಸಬಹುದಾದ ಸಂಖ್ಯೆ: 8431816718

Leave a Reply