ಮುನ್ನಡೆಯಲ್ಲಿದ್ದ ಕ್ಷೇತ್ರಗಳು 66ರಿಂದ 37ಕ್ಕೆ ಬರುತ್ತದೆ ಅಂದರೆ ಹೇಗೆ?: ಮಲ್ಲಿಕಾರ್ಜುನ ಖರ್ಗೆ

2 years ago

ಇವಿಎಂ ದುರ್ಬಳಕೆ ಆರೋಪ

ಬೆಂಗಳೂರು: ನಾವು ಹರಿಯಾಣ ಸೋತಿದ್ದು ಹೇಗೆ? ರಾತ್ರೋರಾತ್ರಿ ಇವರು (ಬಿಜೆಪಿಯವರು) ಬದಲಾವಣೆ ಮಾಡಿಕೊಂಡರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇಂದಿರಾಗಾಂಧಿ ಪುಣ್ಯ ಸ್ಮರಣೆ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುನ್ನಡೆಯಲ್ಲಿದ್ದ ಕ್ಷೇತ್ರಗಳು 66ರಿಂದ 37ಕ್ಕೆ ಬರುತ್ತದೆ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.

ಅವರು (ಬಿಜೆಪಿ) ನಿಜವಾಗಿ ಚುನಾವಣೆ ಗೆದ್ದಿಲ್ಲ. ಮೋಸದಿಂದ ಅವರು ಗೆದ್ದಿದ್ದು. ಇವಿಎಂಗಳು ಹಲವು ದೇಶಗಳಲ್ಲಿ ಇಲ್ಲ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಎಲ್ಲಿಯೂ ಇಲ್ಲ. ಹಲವು ಕಡೆ ಮತಪತ್ರ ಇದೆ ಎಂದರು.

ನಮ್ಮ ದುರ್ದೈವ ಲೋಕಸಭೆ ಚುನಾವಣೆಯಲ್ಲಿ ಇನ್ನೊಂದು 25-30 ಸೀಟು ಬರಲಿಲ್ಲ. ಅವರಿಗೆ (ಎನ್ಡಿಎ) ಸಂವಿಧಾನ ಬದಲಾವಣೆ ಮಾಡಲು ಆಗಲ್ಲ. ಒಂದು ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಅದರಲ್ಲಿ ನೀವೆಲ್ಲ ಯಶಸ್ವಿಯಾಗಿದ್ದೀರಿ. ಆರಸ್ಸೆಸ್, ಬಿಜೆಪಿ ಒಡೆದು ಆಳಲು ನೋಡುತ್ತಿವೆ. ಇದರ ಬಗ್ಗೆ ಹುಷಾರಾಗಿರಬೇಕು ಎಂದು ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.

Leave a Reply