ಬೆಂಗಳೂರು: ನನ್ನ ವಿರುದ್ದ ಸುಳ್ಳು ಆರೋಪ ಮಾಡಿ ಸಮುದಾಯದ ಜನರಿಗೆ ತಪ್ಪು ತಿಳಿವಳಿಕೆ ಮೂಡಿಸುವವರ ವಿರುದ್ದ ಸಮುದಾಯದವರು ಎಚ್ಚರಗೊಳ್ಳಿ ಎಂದು ಬಿ.ಕೆಂಚಪ್ಪಗೌಡ ಕೋರಿದರು.
ಪ್ರೆಸ್ ಕ್ಲಬ್ ಆವರಣದಲ್ಲಿ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಬಿ.ಕೆಂಚಪ್ಪಗೌಡ ತಂಡ ಸುದ್ದಿಗೋಷ್ಠಿ ನಡೆಸಿತು. ಕಾರ್ಯಕಾರಿ ಸಮಿತಿ ಚುನಾವಣಾ ಅಭ್ಯರ್ಥಿಗಳಾದ ಮಾಜಿ ಉಪಮಹಾಪೌರ ಎಲ್.ಶ್ರೀನಿವಾಸ್, ನಾರಾಯಣಸ್ವಾಮಿ, ನೀಲಕಂಠ ಆರ್.ಗೌಡ, ಮಾರೇಗೌಡ, ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತಾಡಿದ ಬಿ.ಕೆಂಚಪ್ಪಗೌಡ, ಒಕ್ಕಲಿಗರ ಸಂಘದ ಚುನಾವಣೆಯಲ್ಲಿ 8 ವರ್ಷಗಳ ಹಿಂದೆ ಸಜ್ಜೇಪಾಳ್ಯ ಜಮೀನಿನ ಬಗ್ಗೆ ವಿನಾಕಾರಣ ನನ್ನ ಮೇಲೆ ನಿರಾಧಾರ ಆರೋಪ ಮಾಡಿದರು. ಅಂದಿನ ಅಧ್ಯಕ್ಷ ವೆಂಕಟಗಿರಿಗೌಡ ಮತ್ತು ಪಾರ್ಥಸಾರಥಿ ನೇತೃತ್ವದಲ್ಲಿ ಕಮಿಟಿ ಮಾಡಿ ನಿರ್ಧಾರ ಕೈಗೊಳ್ಳಲಾಯಿತು. ಒಪ್ಪಂದ ಮೂಲಕ ಸಂಧಾನ ಮಾಡಿಕೊಳ್ಳಲಾಯಿತು. ಎಲ್ಲರು ಒಪ್ಪಿ ಸಹಿ ಮಾಡಿದರು. ನಾನು ಕಾರ್ಯದರ್ಶಿಯಾಗಿದ್ದೆ. ಸಮಿತಿ ನಿರ್ಣಯವನ್ನು ಒಪ್ಪಿದೆ ಎಂದು ಸಮಜಾಯಿಷಿ ನೀಡಿದರು.
ನಾನು ಕಾರ್ಯದರ್ಶಿಯಾಗಿದ್ದೆ. 33 ಸದಸ್ಯರು ಇರುತ್ತಾರೆ. ಅದರಲ್ಲಿ ನಾನೂ ಒಬ್ಬ. ಆದರೆ 32 ಜನರ ಮೇಲೆ ಆರೋಪ ಮಾಡುವುದಿಲ್ಲ, ನನ್ನ ಮೇಲೆ ಚುನಾವಣೆ ಷಡ್ಯಂತ್ರದ ಭಾಗವಾಗಿ ನನ್ನನ್ನು ವಿರೋಧ ಮಾಡುತ್ತಿದ್ದಾರೆ. ಸಜ್ಜೇಪಾಳ್ಯ ಜಮೀನಿಗೆ ಸಂಬಂಧಪಟ್ಟ ವಿಷಯಗಳಿಗೆ ನಾನು ಜವಾಬ್ದಾರನಲ್ಲ. ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಸಜ್ಜೇಪಾಳ್ಯ ಕೇಸ್ ಸಮರ್ಥವಾಗಿ ನಡೆಸಿಕೊಂಡು ಬಂದೆ, ನಂತರ ಮುಂದಿನ ಅಧ್ಯಕ್ಷರಾಗಿ ಬಂದವರ ನಿಲ್ಲ್ಯಕ್ಷದಿಂದ ಸುಪ್ರಿಂಕೋರ್ಟ್ ನಲ್ಲಿ ಕೇಸ್ ಸೋಲುವಂತಾಯಿತು ಎಂದರು.
ಸಜ್ಜೇಪಾಳ್ಯ ಜಮೀನು ವಿಷಯದಲ್ಲಿ 8 ವರ್ಷದಲ್ಲಿ ನನ್ನ ವಿರುದ್ಧ ತನಿಖೆ ಮಾಡಬಹುದಾಗಿತ್ತು. ನಂತರ ಮೂರು ಐ.ಎ.ಎಸ್. ಅಧಿಕಾರಿಗಳು ಬಂದರು ಸಹ ನನ್ನ ವಿರುದ್ಧ ಯಾವುದೇ ಕೇಸ್ ದಾಖಲಿಸಲಿಲ್ಲ. ಯಾಕೆಂದರೆ ನನ್ನ ಮೇಲಿನ ಆರೋಪ ನಿರಾಧಾರ ಎಂಬುದು ಅಧಿಕಾರಿಗಳಿಗೆ ಗೊತ್ತಿತ್ತು. ನನ್ನ ಮೇಲಿನ ಆರೋಪ ಮಾಡಿದವರ ಮೇಲೆ 7 ಕ್ರಿಮಿನಲ್ ಕೇಸ್ ಗಳಿಗೆ ಮತ್ತು ಒಕ್ಕಲಿಗರ ಸಂಘದ ಅವರಣದಲ್ಲಿ ಸ್ವಾಮೀಜಿ ಎದುರಿನಲ್ಲಿ ಚರ್ಚೆ ನಡೆಯಲಿ ಎಂದು ಸವಾಲೊಡ್ಡಿದರು.
ಹಿಂದಿನ ಅವಧಿಯಲ್ಲಿ ಒಕ್ಕಲಿಗರ ಸಂಘದ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಆಡಳಿತಾಧಿಕಾರಿಗಳನ್ನು ನೇಮಿಸಿದರು. ಬಿ.ಕೆಂಚಪ್ಪ ತಂಡದ ಮೇಲೆ ಸುಳ್ಳು ಆರೋಪ ಮಾಡಿ, ಒಕ್ಕಲಿಗ ಸಮುದಾಯವನ್ನು ದಿಕ್ಕುತಪ್ಪಿಸುವ ಕಾರ್ಯ ಮಾಡಲು ಪ್ರಯುತ್ನ ಮಾಡುತ್ತಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಜ್ಞಾವಂತ, ಬುದ್ದಿವಂತರು ಅವರಿಗೆ ಎಲ್ಲರು ಬಗ್ಗೆ ತಿಳಿದಿದೆ. ಕೆಲವು ಭ್ರಷ್ಟಚಾರಿ ಒಕ್ಕಲಿಗರ ಸಂಘಕ್ಕೆ ಬರಬಾರದು ಎಂದು ನನ್ನ ತಂಡವನ್ನು ಚುನಾವಣೆ ನಿಲ್ಲಿಸಿದ್ದೇನೆ ಎಂದರು.




