ಪ್ಲಾಸ್ಟಿಕ್ ಧ್ವಜ ಬಳಸಿದರೆ ಕಾನೂನು ಕ್ರಮ

2 years ago

ದಾವಣಗೆರೆ: ಆಗಸ್ಟ್ 15 ರಂದು ಆಚರಿಸಲಿರುವ ಸ್ವಾತಂತ್ಯೋತ್ಸವ ದಿನಾಚರಣೆಯನ್ನು ಪರಿಸರ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲು ರಾಷ್ಟ್ರಧ್ವಜವನ್ನು ಕೈಯಿಂದ ನೂಲುವ ಮತ್ತು ಕೈಯಿಂದ ನೇಯ್ದ ಅಥವಾ ಯಂತ್ರದಿಂದ ಮಾಡಿರುವ ಹಾಗೂ ಹತ್ತಿ, ಉಣ್ಣೆ, ರೇಷ್ಮೆ, ಖಾದಿಯಿಂದ ಮಾಡಿರುವ ಧ್ವಜಗಳನ್ನು ಬಳಸಬಹುದಾಗಿದೆ. ಆದರೆ  ಪ್ಲಾಸ್ಟಿಕ್ ಧ್ವಜ ಬಳಸುವಂತಿಲ್ಲ, ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು ಎಂದು ಪರಿಸರ ಅಧಿಕಾರಿ ತಿಳಿಸಿದ್ದಾರೆ.

Leave a Reply