ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ @siddaramaiah ಅವರಿಂದ ಕನ್ನಡಿಗರು ನಿರೀಕ್ಷಿಸುತ್ತಿರುವ ಉತ್ತರಗಳು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಮೂಡಾದಿಂದ ಪಡೆದಿರುವ ಸೈಟುಗಳ ಅವರ ತವರು ಮನೆಯಿಂದ ಪಡೆದ ಜಮೀನಿನ ಬದಲಾಗಿ ಪಡೆಸಿರುವ ನಿವೇಶನಗಳು ಎಂದು ಸಿದ್ದರಾಮಯ್ಯನವರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರೆ ಸಿಎಂ ಸಿದ್ದರಾಮಯ್ಯನವರ ಬಾಮೈದ ಬಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಅವರು ಆ ಭೂಮಿ ಖರೀದಿಸಿರುವ ಬಗ್ಗೆಯೇ ಸಾಕಷ್ಟು ಅನುಮಾನಗಳಿವೆ.
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
1.) ಸಿಎಂ ಸಿದ್ದರಾಮಯ್ಯನವರೇ, ತಮ್ಮ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು ಸದರಿ ಜಮೀನು ಖರೀದಿಸಿದ್ದು ದೇವರಾಜ ಅವರಿಂದ ಹೇಳುತ್ತಾರೆ. ಆದರೆ ಮಲ್ಲಿಕಾರ್ಜುನ ಸ್ವಾಮಿ ಅವರು ಭೂಮಿ ಖರೀದಿಸಿದಾಗ ದೇವರಾಜ ಅವರ ಹೆಸರಿನಲ್ಲಿ encumebrance certificate ಇರಲಿಲ್ಲ ಎನ್ನುವುದು ಸತ್ಯವಲ್ಲವೇ?
2.) 1968ರಲ್ಲೇ ದೇವರಾಜ ಅವರು ಆ ಜಮೀನನ್ನು ಮೈಲಾರಯ್ಯ ಮತ್ತು ಕುಟುಂಬದವರಿಗೆ ಮಾರಿದ್ದು, ನಂತರ ನಕಲಿ ದಾಖಲೆ ಸೃಷ್ಟಿಸಿ, ತಮ್ಮ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಮಾರಿದ್ದು ಸತ್ಯವಲ್ಲವೇ ಸಿಎಂ ಸಿದ್ದರಾಮಯ್ಯನವರೇ?
3.) ಜಮೀನಿನ ಮಾಲೀಕತ್ವದ ಬಗ್ಗೆ ಇಷ್ಟು ಗೊಂದಲವಿದ್ದರೂ ತಮ್ಮ ಬಾಮೈದ ಜಮೀನು ಖರೀದಿಸಿದ್ದು ಯಾಕೆ? ಜಮೀನು ಖರೀದಿಸುವಾಗ ಸ್ಥಳವನ್ನ ಪರಿಶೀಲನೆ ಮಾಡದೆಯೇ ಖರೀದಿ ಮಾಡಿದರಾ? ಅಥವಾ ಆ ವೇಳೆಗೆ ಅಲ್ಲಿ ಆಗಾಗಲೇ ಬಡಾವಣೆ ಅಭಿವೃದ್ಧಿ ಆಗಿತ್ತು ಅಂತ ಜಮೀನು ನೋಡದೆಯೇ ಖರೀದಿ ಮಾಡಿದರಾ?
4.) 2003ರಲ್ಲೆ ಮೂಡಾ ನಿವೇಶನ ಮಾಡಿ ಕ್ರಯಕ್ಕೆ ಹಂಚಿಕೆ ಮಾಡಿದ ಮೇಲೆ 2005ರಲ್ಲಿ ಅದೇ ಜಾಗವನ್ನ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಲು ವರದಿ ನೀಡಲು ಹೇಗೆ ಸಾಧ್ಯ?
5.) 2010 ರಲ್ಲಿ ಅರಿಶಿನ-ಕುಂಕುಮ ರೂಪದಲ್ಲಿ ತಮ್ಮ ಪತ್ನಿ ಪಾರ್ವತಿ ಅವರಿಗೆ ಜಮೀನು ಸಿಕ್ಕಾಗ ಅವರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲವೇ?
– ಆರ್.ಅಶೋಕ, ವಿಧಾನಸಭೆ ವಿಪಕ್ಷ ನಾಯಕ




