ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

2 years ago

ದಾವಣಗೆರೆ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚನ್ನಗಿರಿ ಇಲ್ಲಿ ಐಟಿಐ ಪ್ರವೇಶಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಸಂಸ್ಥೆ ಎನ್ಸಿವಿಟಿ ಯಿಂದ ಸಂಯೋಜನೆ ಪಡೆದ ಎಲೆಕ್ಟ್ರೀಷಿಯನ್, ಫಿಟ್ಟರ್, ಎಂ.ಆರ್ & ಎಸ್ಸಿ, ಎಂ.ಇ.ವಿ ಮತ್ತು ಅಡ್ವಾನ್ಸ್ ಸಿ ಎನ್ ಸಿ ವೃತ್ತಿಗಳಿದ್ದು ಈ ವೃತಿಗಳಿಗೆ ಸರ್ಕಾರಿ ಐ.ಟಿ.ಐ, ಚನ್ನಗಿರಿಯಲ್ಲಿ ಅಥವಾ ಹತ್ತಿರದ ಸೈಬರ್ ಸೆಂಟರ್ ನಲ್ಲಿ https://karnataka.gov.in/ ವೆಬ್ ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚನ್ನಗಿರಿ ದೂ.ಸಂ: 9844710844 ಮತ್ತು 9738782540 ಸಂಪರ್ಕಿಸಬಹುದೆಂದು ತರಬೇತಿ ಅಧಿಕಾರಿ ಮನೋಹರ್.ಹೆಚ್ ತಿಳಿಸಿದ್ದಾರೆ.

Leave a Reply