ದೇಶದ ಸಂವಿಧಾನ ಅರಿಯದೇ ವರ್ತಿಸುವ ಪ್ರಧಾನಿ

2 years ago

ಮೀಸಲಾತಿಯು ಐಸಿಹಾಸಿಕ ದೌರ್ಜನ್ಯ ಹಾಗೂ ಅವಮಾನಕ್ಕೆ ಒಳಗಾದ ಜನ ಸಮುದಾಯಕ್ಕೆ ನೀಡಬೇಕಾದ ಅಂಶ ಎಂಬ ಸಂಗತಿಯು ಸಂವಿಧಾನದಲ್ಲಿ ಸ್ಪಷ್ಟವಾಗಿ ಇದ್ದರೂ ಕೂಡಾ ಅದನ್ನು ಸಂಪೂರ್ಣವಾಗಿ ಬದಿಗೆ ತಳ್ಳಿ EWS ಎಂಬ ಹೆಸರಿನಲ್ಲಿ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿಯನ್ನು ಘೋಷಿಸಿದ್ದ ಪ್ರಧಾನಿಗಳು ಇದೀಗ ಮುಸ್ಲೀಮರನ್ನು ಗುರಿಯಾಗಿಸಿಕೊಂಡು ನಾನು ಮೀಸಲಾತಿಯ ಪರವಾಗಿದ್ದೇನೆ ಎಂದು ಹೇಳುತ್ತಿರುವುದು ನಿಜಕ್ಕೂ ಬೇಜವಾಬ್ದಾರಿ ತನದ ಪ್ರತೀಕವಾಗಿದೆ.

ಭಾರತದ ವಿಭಜನೆ ಆದ ಸಂದರ್ಭದಲ್ಲಿ ಭಾರತವನ್ನು ತೊರೆದು ಪಾಕಿಸ್ತಾನಕ್ಕೆ ಹೋದ ಮುಸ್ಲೀಮರು ಪಾಕಿಸ್ತಾನದ ಸದಸ್ಯರಾದರು. ಭಾರತವನ್ನೇ ನಂಬಿ ಇಲ್ಲೇ ಇದ್ದ ಮುಸ್ಲೀಮರು ಭಾರತೀಯರಾದರು.

ಆ ಸಂದರ್ಭದಲ್ಲಿ ಹೇಳಿದ ಮಾತಿದು.

“ಈ ದೇಶದ ಅಲ್ಪಸಂಖ್ಯಾತರು, ಇಲ್ಲಿನ ಬಹುಸಂಖ್ಯಾತರ ಮೇಲೆ ನಂಬಿಕೆಯಿಟ್ಟು ಇಲ್ಲಿ ಜೀವಿಸಲು ನಿರ್ಧರಿಸಿದ್ದಾರೆ. ನಮ್ಮ ಮೇಲೆ ವಿಶ್ವಾಸ ಇಟ್ಟ ಅವರೊಂದಿಗೆ ಸೌಹಾರ್ದತೆಯಿಂದ ಇದ್ದು ಅವರನ್ನು ಕಾಪಾಡಬೇಕಾದ್ದು ಭಾರತೀಯರಾದ ನಮ್ಮ ಜವಾಬ್ದಾರಿ” ಎಂದಿದ್ದರು.

ಆದರೆ ಇತ್ತೀಚೆಗೆ ಬಾಬಾ ಸಾಹೇಬರ ಮೇಲೆ ನಕಲಿ ಪ್ರೀತಿ ತೋರುತ್ತಿರುವ ಪ್ರಧಾನಿಗಳು ಅವರ ಮಾತುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ತಾನೊಬ್ಬ ಎಲ್ಲ ಸಮುದಾಯಗಳ ಪ್ರಧಾನಿ ಎಂಬುದನ್ನು ಮರೆತು ಚುನಾವಣೆಯ ಕಾರಣಕ್ಕೆ ಮುಸ್ಲೀಮ್ ಸಮುದಾಯಗಳ ಮೇಲೆ ನೇರವಾಗಿ ದ್ವೇಷ ಕಾರುತ್ತಿರುವುದು ನನ್ನಲ್ಲಿ ಆತಂಕ ಹುಟ್ಟಿಸಿದೆ.

ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿ ವಿರೋಧಿ ತಂತ್ರವನ್ನು ಪಾಲಿಸುತ್ತಿದ್ದ ಮತ್ತು ನಾವು ಇರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳುವಂತಹ ಸಂಸದರು ಮತ್ತು ಸಚಿವರನ್ನು ತನ್ನ ಸಂಪುಟದಲ್ಲಿ ಇಟ್ಟುಕೊಂಡಿರುವ ಪ್ರಧಾನಿಗಳು ಮೂಲತಃ ಮೀಸಲಾತಿಯ ವಿರೋಧಿಯೇ ಆಗಿದ್ದು ಚುನಾವಣಾ ಕಾರಣಕ್ಕಾಗಿ ಸಂವಿಧಾನದ ರಕ್ಷಣೆ ಎಂಬ ಪದವನ್ನು ಬಳಸುತ್ತಿರುವ ಇವರ ಕುತಂತ್ರದ ಮಾತುಗಳನ್ನು ಯಾರೂ ನಂಬಬಾರದು ಮತ್ತು ಈ ಸಂವಿಧಾನ ವಿರೋಧಿಗಳಿಗೆ ನಮ್ಮ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಬಾಬಾ ಸಾಹೇಬರು ಕಲ್ಪಿಸಿದ ಮತದಾನದ ಮೂಲಕವೇ ತಕ್ಕ ಉತ್ತರ ನೀಡಿ ಸಂವಿಧಾನದ ಆಶಯಗಳನ್ನು ಉಳಿಸುವ ಕೆಲಸ ಮಾಡಬೇಕೆಂದು ಈ ಮೂಲಕ ಎಲ್ಲರಲ್ಲೂ ಅರಿಕೆ ಮಾಡಿಕೊಳ್ಳುತ್ತೇನೆ.

– ಡಾ ಎಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

Leave a Reply