ರಾಜಕೀಯದಲ್ಲಿರುವ ಹೆಣ್ಣುಮಕ್ಕಳ ತೇಜೋವಧೆ ಮಾಡುವವರಿಗೆ ತಕ್ಕ ಪಾಠ…

2 years ago

ನನ್ನ ವಿರುದ್ಧ ತೇಜೋವಧೆ ಮಾಡಲು ಪಿತೂರಿ ಹೂಡಿದ ನವೀನ್ ಗೌಡನ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲು ಹೈಕೋರ್ಟಿನ ಹಿರಿಯ ವಕೀಲರೊಂದಿಗೆ ಚರ್ಚಿಸುತ್ತಿದ್ದೇನೆ.

ಇದು ನನ್ನಂತೆ ರಾಜಕೀಯದಲ್ಲಿರುವ ಎಲ್ಲಾ ಪಕ್ಷಗಳಲ್ಲಿರುವ ಹೆಣ್ಣುಮಕ್ಕಳು ತಮ್ಮ ತೇಜೋವಧೆ ಮಾಡುವ ಇಂತಹ ಲೋ.. ಗಳ ವಿರುದ್ಧ ಹೇಗೆ ಕಾನೂನು ಬದ್ಧವಾಗಿ ಹೋರಾಟ ಮಾಡಬಹುದು ಎನ್ನುವುದಕ್ಕೆ ಮಾದರಿಯಾಗಲಿ.

ಈ ಹಿಂದೆ ಮುಸ್ಲಿಮ್ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ಟ ಎಂಬ ಕೋಮು ಕ್ರಿಮಿ ಈ ಸಲದ ಚುನಾವಣೆಯಲ್ಲಿ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ತೆಪ್ಪಗಿದ್ದಾರೆ. ಇದು ಇಂತಹ ದುಷ್ಟ ಶಕ್ತಿಗಳ ವಿರುದ್ಧ ನಾವು ನಡೆಸಿದ ಕಾನೂನು ಹೋರಾಟಕ್ಕೆ ಸಂದ ಜಯ ಎಂಬುದು ಸ್ಪಷ್ಟವಿದೆ.

ನಿನ್ನಂತ ಲೋ… ಗಳು ಇನ್ನು ಮುಂದೆ ಯಾವುದೆ ಹೆಣ್ಣುಮಕ್ಕಳ ಬಗ್ಗೆ ಸುಳ್ಳು ಅಪಪ್ರಚಾರ ಮಾಡಿ ತೇಜೋವಧೆ ಮಾಡಲು ಮುಂದಾಗದಿರಲಿ ಎಂಬ ಒಂದು ಪಾಠವು ಈ ಕಾನೂನಾತ್ಮಕ ಹೋರಾಟದಿಂದ ಆಗಲಿ.

ಈ ಪ್ರಕರಣಕ್ಕೆ ಸಂಬಂಧಿಸಿ ನೀನು ಇನ್ನೊಬ್ಬ ಗೆಳೆಯನೊಂದಿಗೆ ಏನು ಮಾತನಾಡಿದ್ದೀಯ, ತದನಂತರ ನನಗೂ ಕರೆ ಮಾಡಿ ಮಾತನಾಡಿರುವ ಧ್ವನಿ ಮುದ್ರಿಕೆಗಳು ನನ್ನ ಬಳಿ ಭದ್ರವಾಗಿವೆ. ಕಾನೂನು ಹೋರಾಟ ಹೇಗೆ ಮಾಡಬೇಕು ಎನ್ನುವುದು ಸಾರ್ವಜನಿಕ ಜೀವನದಲ್ಲಿ ಇಷ್ಟು ವರ್ಷಗಳ ಕಾಲ ದುಡಿದಿರುವ ನನಗೆ ಚೆನ್ನಾಗಿ ಗೊತ್ತಿದೆ.

ನನಗೆ ಈ ಸಂದರ್ಭದಲ್ಲಿ ಸಾವಿರಾರು ಜನ ಬೆಂಬಲಿಗರು, ಅಪರಿಚಿತರು, ಸಾಮಾಜಿಕ ಧುರೀಣರು, ಸಮಸಮಾಜದ ಚಿಂತಕರು ಹೀಗೆ ಅಸಂಖ್ಯ ಸಂಖ್ಯೆಯಲ್ಲಿ ಮೊನ್ನೆ ನಡು ರಾತ್ರಿಯಿಂದ ಇಂದಿನವರೆಗೆ ಕಾಲ್, ಮೆಸೇಜ್ ಮತ್ತು ವೈಯುಕ್ತಿಕ ಭೇಟಿಯ ಮೂಲಕ ನೈತಿಕ ಸ್ಥೈರ್ಯ ನೀಡಿದ ಎಲ್ಲರಿಗು ಮನದುಂಬಿ ಕೃತಜ್ಞತೆಗಳು.

ನಿನ್ನಂತಹ ಲೋ.. ಗಳ ವಿರುದ್ಧ ನನ್ನ ಹೋರಾಟ ಎಂದಿಗೂ ನಿಲ್ಲುವುದಿಲ್ಲ.

  • ನಜ್ಮಾ ನಜೀರ್, ಚಿಕ್ಕನೇರಳೆ, ಕಾಂಗ್ರೆಸ್ ನಾಯಕಿ

Leave a Reply