ಕರ್ನಾಟಕ ರಾಜ್ಯ ಸರ್ಕಾರದ ಹೋರಾಟಕ್ಕೆ ಸುಪ್ರೀಂಕೋರ್ಟಿನಲ್ಲಿ ಜಯವಾಗಿದೆ. ಬರಪರಿಹಾರದ ವಿಚಾರದಲ್ಲಿ ಹೆಚ್ಚೆಂದರೆ 2 ತಿಂಗಳಲ್ಲಿ ಕೊಡಬೇಕಿದ್ದ ಪರಿಹಾರವನ್ನು 8 ತಿಂಗಳಾದರೂ ಕೊಡದೇ ಇದ್ದ ಕೇಂದ್ರ ಸರ್ಕಾರವು ಈಗ ಮಣಿದು, ಇನ್ನೊಂದು ವಾರದಲ್ಲಿ ಈ ಕುರಿತಂತೆ ತೀರ್ಮಾನ ತಿಳಿಸುವುದಾಗಿ ಹೇಳಿದೆ. ಚುನಾವಣಾ ಆಯೋಗದಿಂದ ಇದಕ್ಕೆ ಅಗತ್ಯವಿದ್ದ ಅನುಮತಿಯನ್ನು ಪಡೆದುಕೊಂಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇದಕ್ಕಾಗಿ ನಾವು ಸರ್ವೋಚ್ಚ ನ್ಯಾಯಾಲಯಕ್ಕೆ ಕೃತಜ್ಞತೆಗಳನ್ನು ತಿಳಿಸಬಯಸುತ್ತೇವೆ.
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ವಾಸ್ತವದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವುದಕ್ಕೆ ಐದೂವರೆ ತಿಂಗಳ ಮುಂಚೆಯೇ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಆ ಮನವಿಯ ಆಧಾರದ ಮೇಲೆ ಕೇಂದ್ರ ತಂಡ ಬಂದು ಪರಿಶೀಲನೆ ನಡೆಸಿ, ರಾಜ್ಯವು ಬರ ಘೋಷಿಸಿದ ರೀತಿಯನ್ನು ಶ್ಲಾಘಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಅಂತಿಮ ಶಿಫಾರಸ್ಸನ್ನು ಗೃಹ ಸಚಿವರಿಗೂ ನವೆಂಬರ್ 20ರಂದೇ ಸಲ್ಲಿಸಿಯಾಗಿತ್ತು. ಹಾಗಿದ್ದೂ, ಅದನ್ನು ದುರುದ್ದೇಶಪೂರ್ವಕವಾಗಿ ಕೇಂದ್ರ ಸರ್ಕಾರವು ತಡ ಮಾಡುತ್ತಾ ಬಂದಿತ್ತು.
ದೇಶದ ಇತಿಹಾಸದಲ್ಲಿ ಯಾವ ಸರ್ಕಾರಗಳು ರಾಜ್ಯ ಅಥವಾ ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿದ್ದಾಗಲೂ ಇಂತಹ ಸಂದರ್ಭ ಒದಗಿ ಬಂದಿರಲಿಲ್ಲ. ರಾಜ್ಯ ಸರ್ಕಾರವೊಂದು, ನಿಯಮಗಳ ಪ್ರಕಾರ ಕಡ್ಡಾಯವಾಗಿ ಆ ರಾಜ್ಯದ ಜನರಿಗೆ ಸಿಗಬೇಕಿದ್ದ ಪರಿಹಾರಕ್ಕಾಗಿ ಪತ್ರಗಳ ಮೇಲೆ ಪತ್ರಗಳನ್ನು ಬರೆದು, ಭೇಟಿಗಾಗಿ ಕಾದು, ಭೇಟಿಗಳನ್ನು ಮಾಡಿ, ದೆಹಲಿಗೇ ಹೋಗಿ ಪ್ರತಿಭಟನೆ ಮಾಡಿ ನಂತರ ಅಂತಿಮ ಆಸರೆಯಾಗಿ ಸುಪ್ರೀಂಕೋರ್ಟಿಗೆ ಹೋಗಬೇಕಾದ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ತಂದಿಟ್ಟಿತ್ತು. ಅದು ಇಂದು ಒಂದು ಹಂತಕ್ಕೆ ಬಂದು – ಕೇಂದ್ರ ಸರ್ಕಾರ ಈ ಒತ್ತಡಕ್ಕೆ ಮಣಿದು ಇನ್ನೊಂದು ವಾರದಲ್ಲಿ ಪರಿಹಾರವನ್ನು ನೀಡುವುದಾಗಿ ತಿಳಿಸಿದೆ.
ಈ ಅವಧಿಯಲ್ಲಿ ನಡೆದ ವಿದ್ಯಮಾನಗಳು ಭಾರತದ ಪ್ರಜಾತಂತ್ರಕ್ಕೆ ಅವಮಾನಕಾರಿಯಾದ ರೀತಿಯಲ್ಲಿ ಇದ್ದವು ಎಂಬುದನ್ನು ವಿಷಾದದಿಂದ ಹೇಳಬೇಕಾಗಿದೆ. ಹದಿನೈದು ನಿಮಿಷಗಳಲ್ಲಿ ತೀರ್ಮಾನ ತೆಗೆದುಕೊಳ್ಳಬಹುದಿದ್ದ, ಸಭೆಯನ್ನೇ ಕರೆಯದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ತಿಂಗಳು ರಾಜ್ಯ ಸರ್ಕಾರ ತಡ ಮಾಡಿತು ಎಂದು ಕರ್ನಾಟಕದಲ್ಲೇ ಬಂದು ಹೇಳುವ ಧಾರ್ಷ್ಟ್ಯ ತೋರಿದರು. ಅಂದರೆ ಮಳೆಗಾಲ ಶುರುವಾಗುವ ಮೊದಲೇ ಬರಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕಿತ್ತು ಎಂಬುದು ಅವರ ಅನಿಸಿಕೆಯಾಗಿತ್ತು.
ಅದನ್ನೇ ಮುಂದುವರೆಸಿ ರಾಜ್ಯದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಜುಲೈನಲ್ಲೇ ಏಕೆ ಬರಘೋಷಣೆ ಮಾಡಲಿಲ್ಲ ಎಂಬ ಅಸಂಬದ್ಧ ವಾದವನ್ನೂ ಹೂಡಿದ್ದರು. ಸ್ವತಃ ಕಂದಾಯ ಸಚಿವರಾಗಿದ್ದ ಅವರಿಗೆ ಬಿತ್ತನೆ ಅವಧಿ ಮುಗಿದ ನಂತರವಷ್ಟೇ ಬರಘೋಷಣೆ ಮಾಡಬೇಕು ಎಂಬುದೂ ತಿಳಿದಿರಲಿಲ್ಲವೋ ಅಥವಾ ರಾಜ್ಯದ ಜನರ ವಿರೋಧಿ ನಿಲುವು ಅಷ್ಟು ಅಭ್ಯಾಸವಾಗಿದೆಯೋ ತಿಳಿದಿರಲಿಲ್ಲ.
ಇಂತಹ ದುಸ್ಥಿತಿಯಿದ್ದರೂ ರಾಜ್ಯ ಸರ್ಕಾರ ಪಟ್ಟು ಬಿಡದೇ ತನ್ನ ಹೋರಾಟವನ್ನು ಮುಂದುವರೆಸಿ, ಅಂತಿಮವಾಗಿ ಸುಪ್ರೀಂಕೋರ್ಟಿನಿಂದ ಪರಿಹಾರ ಪಡೆದುಕೊಳ್ಳುವತನಕ ಪ್ರಯತ್ನವನ್ನು ಮಾಡಿತು. ಈಗ ಸರ್ವೋಚ್ಚ ನ್ಯಾಯಾಲಯದ ಮಧ್ಯಪ್ರವೇಶದಿಂದ ಪರಿಹಾರ ಸಿಗುವ ಭರವಸೆ ಸಿಕ್ಕಿರುವುದಕ್ಕೆ ನಮಗೆ ಸಂತಸವಾಗಿದೆ.



