ಬೆಂಗಳೂರು: ವಾಸವಿ ಸಮೂಹ ವಿದ್ಯಾಸಂಸ್ಥೆಯ ವಾಸವಿ ವಿದ್ಯಾರ್ಥಿಗಳಿಂದ ಮತದಾನದ ಮಹತ್ವ ಮತ್ತು ಕಡ್ಡಾಯ ಮತದಾನ ಮಾಡುವಂತೆ ಅರಿವು ಮೂಡಿಸಲು ಮತದಾನ ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ವಾಸವಿ ಸಮೂಹ ಶಿಕ್ಷಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ವಿಜಯ ಸಾರಥಿರವರು 250ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿಜಯನಗರ ಸುತ್ತಮುತ್ತಲು 7ಕಿಲೋ ಮೀಟರ್ ವರಗೆ ನಡಿಗೆ ಜಾಥ ಮಾಡಿ, ಸಾರ್ವಜನಿಕರಿಗೆ ಮತದಾನದ ಕುರಿತು ಅರಿವು ಮೂಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿ ಡಿ.ಆರ್.ವಿಜಯ ಸಾರಥಿ, ಬೆಂಗಳೂರುನಗರ ಪ್ರದೇಶದಲ್ಲಿ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಆದರೆ ಮತದಾನ ಮಾತ್ರ ಶೇಕಡ 50ರಷ್ಟು ಮಾತ್ರ ಮತದಾನವಾಗುತ್ತಿದೆ. ವಿದ್ಯಾವಂತರು, ಜ್ಞಾನವಂತರು ಮತದಾನದಿಂದ ದೂರ ಉಳಿದರೆ ಉತ್ತಮ ಜನಪ್ರತಿನಿಧಿ ಆಯ್ಕೆಯಾಗುವುದಿಲ್ಲ , ಇದರಿಂದ ದುರಾಡಳಿತ ನಾವೇ ಸಹಕರಿಸಿದಂತೆ ಆಗುತ್ತದೆ ಎಂದರು.
ಮತದಾನ ದಿನದಂದು ನಮ್ಮ ಎಷ್ಟೆ ಕೆಲಸವಿದ್ದರು, ಸಮಯ ಬಿಡುವ ಮಾಡಿಕೊಂಡು ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡಲು ಮತದಾನ ಮಾಡಿ. ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಮತದಾನ ಮಾಡುವ ಹಕ್ಕು ನೀಡಿದೆ. ಪವಿತ್ರವಾದ ಮತವನ್ನು ಹಣ, ಹೆಂಡ, ಆಮಿಷಕ್ಕೆ ಒಳಗಾಗಿ ಮತ ನೀಡಬೇಡಿ, ನನ್ನ ಮತ ಮಾರಾಟಕ್ಕೆ ಇಲ್ಲ ಎಂದು ಹೇಳಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದ ಪ್ರಜಾಪ್ರಭುತ್ವ ಉಳಿಯಲು ಕಡ್ಡಾಯವಾಗಿ ಮತದಾನ ಮಾಡಿ ಎಂದು ಮನವಿ ಮಾಡಿದರು.
ಕಾರ್ಯಕರ್ಮದಲ್ಲಿ ಪ್ರಾಂಶುಪಾಲರಾದ ಪದ್ಮ, ರಚನ, ಡಾ.ರಂಗಸ್ವಾಮಿ, ಸ್ವಾಭಾಗ್ಯ, ಲೋಹಿತ್ ಮತ್ತು ಏನ್.ಎಸ್ .ಎಸ್ ವಿದ್ಯಾರ್ಥಿಗಳು ಮತ್ತು ವಿಜಯನಗರ ಪೊಲೀಸ್ ಇಲಾಖೆ, ಬಿಬಿಎಂಪಿ ಅಧಿಕಾರಿ, ಸಿಬ್ಬಂದಿ ಜಾಥದಲ್ಲಿ ಇದ್ದರು.




