ಬೆಂಗಳೂರು: PSI ಹಗರಣ ಹಾಗೂ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿಯ ಮನೆಯಲ್ಲಿ ಬಿಜೆಪಿ ಸಂಸದ ಉಮೇಶ್ ಜಾಧವ್ ಅವರ ಭರ್ಜರಿ ಭೋಜನ! ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
Dear BJP Karnataka ನೀವೇ ಆರ್.ಡಿ ಪಾಟೀಲ್ ನ ರಕ್ಷಕರು, ನೀವೇ ಆತನ ಬ್ಯಾಕ್ ಬೋನ್ ಎನ್ನುವುದು ಮತ್ತೊಮ್ಮೆ ಬಯಲಾಗಿದೆ ಎಂದು ಹೇಳಿದೆ.

ಕರ್ನಾಟಕ ಕಂಡ ಪ್ರಮುಖ ಹಗರಣದ ರೂವಾರಿಯೊಂದಿಗೆ ಬಿಜೆಪಿಯವರ ಅಕ್ರಮ ಸಂಬಂಧವು ಸಕ್ರಮ ಸಂಬಂಧವಾಗಿ ಬಯಲಾಗಿದೆ! ಎಂದು ಹೇಳಿದೆ.

Vijayendra Yediyurappa ಅವರೇ, ಪರೀಕ್ಷಾ ಅಕ್ರಮವಾದಾಗ ಆರ್.ಡಿ ಪಾಟೀಲ್ ತಲೆ ಮರೆಸಿಕೊಳ್ಳಲು ಸಹಕರಿಸಿದ್ದು ಯಾರು? ಕೇಶವಕೃಪವೊ? ಜಗನ್ನಾಥ ಭವನವೋ? ಎಂದು ಪ್ರಶ್ನಿಸಿದೆ.

ಅಕ್ರಮ ದಂಧೆಕೋರನೊಬ್ಬನೊಂದಿಗೆ ಕುಚಿಕು ಕುಚಿಕು ಸಂಬಂಧ ಹೊಂದಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಆರೋಪಿಸಿದ್ದಕ್ಕೆ ಇಂದು ಉತ್ತರ ಸಿಕ್ಕಿದೆಯಲ್ಲವೇ? ಎಂದು ಪ್ರಶ್ನಿಸಿದೆ.




