ಕೇವಲ ಭಾವನೆಗಳು ಮತ್ತು ಪ್ರಚೋದನಾತ್ಮಕ ಹೇಳಿಕೆಗಳು ಅನ್ಯ ಧರ್ಮದ ಮೇಲಿನ ಆಕ್ರೋಶದ ನುಡಿಗಳು ಧರ್ಮದ ರಕ್ಷಣೆಯ ಸಂಕೇತಗಳೆಂಬ ಭಾವನೆ ಮೂಡಿರುವ ಸಂದರ್ಭದಲ್ಲಿ ಧರ್ಮದ ಜನರ ಉದ್ಧಾರವೆಂದರೆ ಕೇವಲ ಭಾವನೆಗಳಲ್ಲ ಅವರಿಗೆ ಬದುಕು ಕಟ್ಟಿಕೊಡುವುದು ಎಂಬುದನ್ನು ನೆನಪಿಸಿ ಕೊಡಬೇಕಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಹಲವಾರು ಶತಮಾನಗಳಿಂದ ಶೋಷಣೆಗೆ ಗುರಿಯಾಗಿದ್ದ ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಬದುಕಿನಲ್ಲಿ ಸಮಾನತೆ ಇರಲಿಲ್ಲ. ಯಾವುದೇ ರೀತಿಯ ರಾಜಕೀಯ ಶೈಕ್ಷಣಿಕ ಮೀಸಲಾತಿಯೂ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಸಂವಿಧಾನದ ಮೂಲಕ ಇವರು ಸಹ ಎಲ್ಲರಂತೆ ಗೌರವದಿಂದ ಬದುಕುವ ಹಕ್ಕು ಇದೆ. ಇವರು ಸಹ ವಿದ್ಯಾವಂತರಾಗಬಹುದು ಚುನಾಯಿತ ಪ್ರತಿನಿಧಿಗಳಾಗಬಹುದು. ದೇವಾಲಯಗಳ ಪ್ರವೇಶ ಪಡೆಯಬಹುದು. ಸಾರ್ವಜನಿಕ ಪ್ರದೇಶಗಳಲ್ಲಿ ಮುಕ್ತವಾಗಿ ಬದುಕಬಹುದು. ಎಲ್ಲ ರೀತಿಯ ಸೌಲಭ್ಯ ಮತ್ತು ಸೌಕರ್ಯಗಳನ್ನು ಪಡೆಯಬಹುದೆಂಬುದನ್ನ ತೋರಿಸಿಕೊಟ್ಟದ್ದು ಮತ್ತು ಅದನ್ನು ನೀಡಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿಕೊಟ್ಟ ಸಂವಿಧಾನವೇ ಹೊರತು ಯಾವ ಪೀಠಗಳು ಅಲ್ಲ ಯಾವ ಗುರುಗಳು ಅಲ್ಲ ಯಾವ ಪ್ರಚೋದಕರು ಅಲ್ಲ.
ದಲಿತರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಪಾರ್ಲಿಮೆಂಟಿನಿಂದ ಹಿಡಿದು ಪಂಚಾಯಿತಿಯ ತನಕ ಚುನಾವಣೆಗೆ ನಿಲ್ಲುವ ಹಕ್ಕನ್ನು ನೀಡಿದ್ದು ಮಂತ್ರಿಗಳಾಗಿ ಮುಖ್ಯಮಂತ್ರಿಗಳಾಗಿ ದೇಶದ ರಾಷ್ಟ್ರಪತಿಗಳಾಗಿ ಎಲ್ಲ ಹಂತದ ಅಧಿಕಾರವನ್ನು ಪಡೆಯಲು ಅವಕಾಶವನ್ನ ನೀಡಿದ್ದು ಪ್ರಚೋದತ್ಮಕ ಹೇಳಿಕೆಗಳು ಅಲ್ಲ ಭಾವನೆಗಳನ್ನ ಪ್ರಚೋದಿಸುವವರು ಅಲ್ಲ ನಮ್ಮ ದೇಶದ ಸಂವಿಧಾನ ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿ ಕೊಟ್ಟ ಸಂವಿಧಾನ.
ಶಿಕ್ಷಣದಲ್ಲಿ ಮೀಸಲಾತಿಯನ್ನ ಕೊಟ್ಟು ಹಲವಾರು ಮಂದಿ ಹಿರಿಯ ಅಧಿಕಾರಿಗಳಾಗಿ ದೇಶವನ್ನ ಮುನ್ನಡೆಸುವ ಪ್ರಮುಖರಾಗಿ ಸಾಧಕರಾದದ್ದು ಸಂವಿಧಾನದಿಂದಲೆ ಹೊರತು ಯಾವ ಪ್ರಚೋದನಾತ್ಮಕ ಹೇಳಿಕೆಗಳಿಂದಲೂ ಅಲ್ಲ ಭಾವನಾತ್ಮಕವಾದ ಸಂಗತಿಗಳಿಂದಲೂ ಅಲ್ಲ
ಹಿಂದುಳಿದ ವರ್ಗದವರಿಗೆ ಅನೇಕ ರೀತಿಯ ಮೀಸಲಾತಿಗಳನ್ನ ಒದಗಿಸಿ ಕೊಟ್ಟದ್ದು ಮಂಡಲ್ ಕಮಿಷನ್ ಮತ್ತು ಹಾವುನೂರು ವರದಿಯ ಮೂಲಕವೇ ಹೊರತು ಯಾವ ಹೇಳಿಕೆಗಳಿಂದಲೂ ಅಲ್ಲ. ಪ್ರಚೋದಯಾತ್ಮಕವಾದ ಮಾತುಗಳಿಂದಲೂ ಅಲ್ಲ.
ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಎಲ್ಲ ವರ್ಗದವರು ಸಾಮಾನ್ಯ ಪರೀಕ್ಷೆಯ ಮೂಲಕ ಉನ್ನತವಾದ ಶಿಕ್ಷಣವನ್ನ ಪಡೆಯಲು ಸಾಧ್ಯವಾದದ್ದು ಕಾನೂನಿನ ಮೂಲಕ ಹೊರತು ಯಾವ ಪ್ರಚೋದಯಾತ್ಮಕವಾದ ಮಾತುಗಳಿಂದ ಅಲ್ಲ.
ಹೊಲಗದ್ದೆಗಳಲ್ಲಿ ಭೂಮಿಯ ತನಕ ಬೆನ್ನು ಬಾಗಿಸಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದ ಕೋಟಿ ಕೋಟಿ ಕೃಷಿ ಕಾರ್ಮಿಕರಿಗೆ ಉಳುವವನಿಗೆ ಭೂಮಿ ಎಂಬ ಕಾನೂನಿನ ಮೂಲಕ ಭೂಮಿಯ ಒಡೆಯನನ್ನಾಗಿಸಿದ್ದು ಸಂವಿಧಾನದ ಆಶಯಗಳ ಮೂಲಕವೇ ಹೊರತು ಯಾವ ಪ್ರಚೋದನಾತ್ಮಕ ಮಾತುಗಳಿಂದಲೂ ಅಲ್ಲ.
ತಲೆಯ ಮೇಲೆ ಮಲವ ಹೋರುವ ನೀಚ ಪದ್ಧತಿಯನ್ನು ರದ್ದು ಮಾಡಿ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದ ಬದುಕು ಕಟ್ಟಿಕೊಟ್ಟದ್ದು ಕಾನೂನುಗಳೇ ಹೊರತು ಯಾವ ಭಾವನಾತ್ಮಕವಾದ ಪ್ರಚೋದನಾತ್ಮಕವಾದ ಮಾತುಗಳು ಅಲ್ಲ ಘೋಷಣೆಗಳು ಅಲ್ಲ.
ವಂಶ ಪಾರಂಪರ್ಯವಾಗಿ ಶೋಷಿತರನ್ನ ತಮ್ಮ ಮನೆಯ ಜೀತದ ಆಳುಗಳನ್ನಾಗಿಸಿ ಪ್ರಾಣಿಗಳಂತೆ ದುಡಿಸಿಕೊಂಡು ಮನುಷ್ಯತ್ವವನ್ನ ಮರೆತವರಿಗೆ ಬುದ್ಧಿಯನ್ನ ಕಳಿಸಿದ್ದು ಕಾನೂನುಗಳೇ ಹೊರತು ಜೀತ ಪದ್ಧತಿಯನ್ನು ರದ್ದು ಮಾಡಿ ಅವರನ್ನು ಮನುಷ್ಯರೆಂದು ರಾಕ್ಷಸರಿಗೆ ತೋರಿಸಿಕೊಟ್ಟದ್ದು ಕಾನೂನುಗಳೇ ಹೊರತು ಯಾವ ಘೋಷಣೆಗಳು ಅಲ್ಲ ಯಾವ ಭಾಷಣಗಳು ಅಲ್ಲ.
ಕರ್ನಾಟಕದಲ್ಲಿ ಅರ್ಚಕರಿಗೆ ಆರೋಗ್ಯ ವಿಮೆ, ವೃತ್ತಿಯಲ್ಲಿರುವ ಸಂದರ್ಭದಲ್ಲಿ ಸಾವಾದರೆ ಹಣಕಾಸಿನ ನೆರವು, ಅವರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು, ಅವರಿಗೆ ವಸತಿ ಸೌಲಭ್ಯ ಅವರಿಗೆ ನೀಡುವ ಸಂಬಳಗಳಲ್ಲಿ ಹೆಚ್ಚಳ, ಅವರ ದೇವಾಲಯಗಳ ದೈನಂದಿನ ಖರ್ಚು ವೆಚ್ಚಗಳಲ್ಲಿ ಮೊತ್ತವನ್ನ ಹೆಚ್ಚಿಸಿದ್ದು, ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರೇ ಹೊರತು ಯಾವ ಘೋಷಣೆಗಳು ಅಲ್ಲ ಯಾವ ಭಾವನಾತ್ಮಕವಾದ ಪ್ರಚೋದನಾತ್ಮಕವಾದ ಮಾತನಾಡುವವರು ಅಲ್ಲ.
ಯಾವುದೇ ಧರ್ಮದಲ್ಲಿರುವ ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು, ಆಶ್ರಯಕ್ಕೆ ಮನೆ, ದುಡಿಯಲು ಉದ್ಯೋಗ, ವಿದ್ಯೆ, ಆರೋಗ್ಯ, ಸಂರಕ್ಷಣೆ ಸಾಮಾಜಿಕ ಭದ್ರತೆ ಇವುಗಳು ಪ್ರಮುಖವೇ ಹೊರತು ಕೇವಲ ಘೋಷಣೆಗಳಲ್ಲ.
ದಲಿತರನ್ನು ಇನ್ನು ಮನಪೂರ್ವಕವಾಗಿ ಒಪ್ಪಿಕೊಳ್ಳದವರು ಅವರ ಮೀಸಲಾತಿಯ ಬಗ್ಗೆ ವ್ಯಂಗ್ಯವಾಡುವವರು ಊಟದಲ್ಲಿ ನೀಡುವುದರಲ್ಲಿ ಭೇದ ಮಾಡುವವರು ದೇವಾಲಯಗಳಲ್ಲಿ ಇನ್ನೂ ಅವರಿಗೆ ಪ್ರೀತಿಯಿಂದ ಒಳಗೆ ಸೇರಿಸದವರು ಮಾತನಾಡುತ್ತಾರೆ. ಧರ್ಮದ ಬಗ್ಗೆ, ಘೋಷಣೆಗಳನ್ನು ಕೂಗುತ್ತಾರೆ ಧರ್ಮದ ಬಗ್ಗೆ ಪ್ರಚೋದಿಸುತ್ತಾರೆ ಮುಗ್ಧ ಮಂದಿಯನ್ನು ಮುಂದೆ ಬಿಟ್ಟು ಅವರ ಬೆವರು ಅವರ ಹೋರಾಟ ಅವರ ಶ್ರಮ ಇವುಗಳ ಆಧಾರದ ಮೇಲೆ ಕಟ್ಟಿಕೊಳ್ಳುತ್ತಾರೆ ಇವರ ನಾಯಕತ್ವ. ಮೆರೆಯುತ್ತಾರೆ ದೊಡ್ಡ ನಾಯಕರಾಗಿ.
-ಕೆ.ಎಸ್ ನಾಗರಾಜ್, ಬೆಂಗಳೂರು




