ನಾವು ಹೇಳಿದಂತೆ ಕೇಳದಿದ್ದರೆ ನ್ಯಾಯಾಂಗವನ್ನೂ ಬಿಡುವುದಿಲ್ಲ!

2 years ago

ವಿಶೇಷವಾದ ಬೆಳವಣಿಗೆಯೊಂದರಲ್ಲಿ ಇವತ್ತು ಸುಪ್ರಿಂ ಕೋರ್ಟಿನ ಹಿರಿಯ ವಕೀಲ ಶ್ರೀ ಹರೀಶ್‌ ಸಾಳ್ವೆ, ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಸಹಿತ ದೇಶಾದ್ಯಂತದ 600 ಕ್ಕೂ ಅಧಿಕ ವಕೀಲರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶ್ರೀ ಡಿ ವೈ ಚಂದ್ರಚೂಡ್‌ ಅವರಿಗೆ ಪತ್ರ ಬರೆದು ʼನ್ಯಾಯಾಂಗದ ಸಮಗ್ರತೆಗೆ ಧಕ್ಕೆ ತರಲಾಗುತ್ತಿದೆʼ ಎಂಬ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ʼಸ್ಥಾಪಿತ ಹಿತಾಸಕ್ತಿ ಗುಂಪುಗಳು ನ್ಯಾಯಾಂಗ ಪ್ರಕ್ರಿಯೆಗಳನ್ನು ತಿರುಚಲು ಯತ್ನಿಸುತ್ತಿವೆ. ಕೋರ್ಟ್‌ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಕೆಲಸ ಮಾಡುತ್ತಿವೆ. ಈ ಗುಂಪುಗಳು ತಮ್ಮ ರಾಜಕೀಯ ಅಜೆಂಡಾಗಳ ಮೂಲಕ ನ್ಯಾಯಾಂಗದ ಗೌರವಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿವೆʼ ಎಂದು ಹೇಳಿದ್ದಾರೆ. ʼಇಂಥ ಕೆಲಸಗಳು ನ್ಯಾಯಾಂಗದ ಮೇಲೆ ಮಾಡುವ ಧಾಳಿಗಳುʼ ಎಂದೂ ಅವರು ಹೇಳಿದ್ದಾರೆ.

ಸದ್ಯಕ್ಕೆ ಇದೊಂದು ಒಳ್ಳೆಯ ಬೆಳವಣಿಗೆ. ಸಂವಿಧಾನದ ಜೊತೆಗೆ ನ್ಯಾಯಾಂಗವನ್ನೂ ಕಾಪಾಡಬೇಕಾದ್ದು ಅಗತ್ಯ. ಜರ್ಮನಿ ಮತ್ತು ಅಮೇರಿಕಾಗಳು ಕೇಜ್ರಿವಾಲ್‌ ಕುರಿತು ಪ್ರಕಟಪಡಿಸಿದ ಆತಂಕ ಖಂಡಿತಾ ಅನಗತ್ಯ. ಆದರೆ ಅಂಥ ವಾತಾವರಣ  ಯಾಕಾದರೂ ಸೃಷ್ಟಿಯಾಗಿದೆ?  ಎಂದು ನಿಜವಾದ ದೇಶಪ್ರೇಮಿಗಳು ಯೋಚಿಸಬೇಕು.


– ಪುರುಷೋತ್ತಮ ಬಿಳಿಮಲೆ, ಹಿರಿಯ ವಿದ್ವಾಂಸರು

Leave a Reply