ಭಾರತೀಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

5 years ago

ದೆಹಲಿ: ಅಮೆರಿಕ ಫೆಡರಲ್ ಕೋರ್ಟ್ ಎಚ್-1ಬಿ ವೀಸಾ ಆಯ್ಕೆ ಪ್ರಕ್ರಿಯೆಯನ್ನು ಯಾದೃಚ್ಛಿಕ ಲಾಟರಿ ಡ್ರಾ ವ್ಯವಸ್ಥೆಯಿಂದ ಹೆಚ್ಚಿನ ವೇತನ ಉದ್ಯೋಗಗಳಿಗೆ ಆದ್ಯತೆ ನೀಡುವ ವ್ಯವಸ್ಥೆಗೆ ಬದಲಾಯಿಸಲು ಪ್ರಯತ್ನಿಸಿದ ಟ್ರಂಪ್ ಅವಧಿಯ ನಿಯಮವನ್ನು ತಿರಸ್ಕರಿಸಿದೆ.

ಈ ಕ್ರಮ ಅಮೆರಿಕದಲ್ಲಿ ಉದ್ಯೋಗ ಅರಸುತ್ತಿರುವ ಭಾರತೀಯ ಎಸ್ ಟಿಇಎಂ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಜೊತೆಗೆ ಅಲ್ಲಿ ಅಧ್ಯಯನ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳ ಪಾಲಿಗೆ ಇದು ಅತ್ಯಂತ ನಿರಾಳ ನೀಡುವ ಸುದ್ದಿಯಾಗಿದೆ.

ಟ್ರಂಪ್ ಆಡಳಿತದ ಅವಧಿಯಲ್ಲಿ ಉದ್ದೇಶಿತ ನಿಯಮಗಳ ಅಡಿಯಲ್ಲಿ ಅರ್ಹತೆ ಪಡೆಯದ ಕಾರಣ ಈ ಕ್ರಮ ಹೊಸ ಪದವೀಧರರನ್ನು ನೇಮಕ ಸಮಯದಲ್ಲಿ ಕಷ್ಟವಾಗುತ್ತದ ಎಂದು ಅಮೆರಿಕ ಕಂಪನಿಗಳು ಹೇಳಿದ್ದವು. ನಿಯಮ ಬದಲಾವಣೆ ಜಾರಿಗೆ ಬಂದರೆ, ವಿದೇಶಿ ವಿದ್ಯಾರ್ಥಿಗಳು ಅಮೆರಿಕಕ್ಕೆ ಬರುವುದಕ್ಕೆ ನಿಯಂತ್ರಣ ವಿಧಿಸಿದಂತಾಗಿತ್ಯದೆ ಎಂದು ವಿಶ್ವವಿದ್ಯಾಲಯಗಳು ಹೇಳಿದ್ದವು. ನಿಯಮ ಬದಲಾವಣೆಯನ್ನು ಅಮೆರಿಕ ಚೇಂಬರ್ ಆಫ್ ಕಾಮರ್ಸ್ ಸಹ ಪ್ರಶ್ನಿಸಿತ್ತು. ಇದೇ ಕಾರಣದಿಂದ ಕೋರ್ಟ್ ಮಹತ್ವದ ಆದೇಶ ನೀಡಿದೆ ಎಂದು ವರದಿಯಾಗಿದೆ.

Leave a Reply