ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿನ ನೌಕರರಿಗೆ, 2020-21ನೇ ಸಾಲಿಗೆ ಭವಿಷ್ಯ ನಿಧಿ, ಸ್ವ ಇಚ್ಛಾ ಭವಿಷ್ಯ ನಿಧಿ ವಂತಿಗೆ ಮೇಲೆ ಶೇ.8.70ರಂತೆ ಬಡ್ಡಿಯನ್ನು ಪಾವತಿಸಲು ಸಿಎಂ ಬಸವರಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಮೂಲಕ ಸಾರಿಗೆ ನೌಕರರಿಗೆ ಶುಭಸುದ್ದಿ ಸಿಕ್ಕಂತಾಗಿದೆ. ಈ ಕುರಿತು KSRTC ನಿಗಮದ ಭವಿಷ್ಯ ನಿಧಿ ನ್ಯಾಸ ಮಂಡಳಿಯ ಉಪ ಮುಖ್ಯ ಲೆಕ್ಕಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.
17-08-2021ರಂದು ಜರುಗಿದ ಕರಾರಸಾ ನಿಗಮ ನೌಕರರ ಅಂಶದಾಯಿ ಭವಿಷ್ಯ ನಿಧಿ ನ್ಯಾಸ ಮಂಡಳಿಯ 263ನೇ ಸಭೆಯ ನಿರ್ಣಯ ಸಂಖ್ಯೆ 1095ರ ಪ್ರಕಾರ ಭವಿಷ್ಯ ನಿಧಿ, ಐಚ್ಛಿಕ ಭವಿಷ್ಯ ನಿಧಿ ಸದಸ್ಯರಿಗೆ 2020-21ನೇ ಸಾಲಿಗೆ ಭವಿಷ್ಯ ನಿಧಿ, ಸ್ವ ಇಚ್ಛಾ ಭವಿಷ್ಯ ನಿಧಿ ವಂತಿಗೆ ಮೇಲೆ ಸಾಲಿಯಾನ ಶೇ.8.70ರಂತೆ ಬಡ್ಡಿಯನ್ನು ಪಾವತಿಸಲು ತೀರ್ಮಾನಿಸಲಾಗಿದೆ.



