ಬೆಂಗಳೂರು: KEA ನಡೆಸಿದ KCET – 2021 ಪರೀಕ್ಷೆಯನ್ನು ಬರೆದ ಅಭ್ಯರ್ಥಿಗಳಿಗೆ ಪ್ರಶ್ನೆಗಳು ಮತ್ತು ಆಯ್ಕೆಗಳಲ್ಲಿನ ದೋಷಗಳ ಬಗ್ಗೆ 8 ಕೃಪಾಂಕಗಳು ಸಿಗುವ ಸಾಧ್ಯತೆ ಇದೆ.
ಪ್ರಶ್ನೆ ಪತ್ರಿಕೆಗಳಲ್ಲಿ ತಪ್ಪು ಪ್ರಶ್ನೆಗಳು/ಪಠ್ಯಕ್ರಮದ ಪ್ರಶ್ನೆಗಳು ಮತ್ತು ತಪ್ಪು ಉತ್ತರಗಳ ಬಗ್ಗೆ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗಿದೆ ಎಂದು ಕೆಇಎ ಮೂಲಗಳು ಖಚಿತಪಡಿಸಿವೆ. ತಜ್ಞರ ಸಮಿತಿಯ ವರದಿಯ ಅಡಿಯಲ್ಲಿ ಕೃಪಾಂಕಗಳನ್ನು ಅಧಿಕೃತವಾಗಿ ಪ್ರಕಟಿಸಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ.
ಹಲವು ಅಭ್ಯರ್ಥಿಗಳು ಮತ್ತು ತಜ್ಞರು ಕೆಸಿಇಟಿ ನಂತರ ಪ್ರಶ್ನೆ ಪತ್ರಿಕೆಗಳಲ್ಲಿ ಒದಗಿಸಲಾದ ತಪ್ಪು ಪ್ರಶ್ನೆಗಳು ಮತ್ತು ಆಯ್ಕೆಗಳ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆಗಿರುವ ತಪ್ಪುಗಳನ್ನು ಒಪ್ಪಿಕೊಂಡು ಅಭ್ಯರ್ಥಿಗಳಿಗೆ ಅಂಕಗಳನ್ನು ನೀಡುವ ಸಾಧ್ಯತೆ ಇದೆ.




